ಮೈಸೂರು: ನಂಜನಗೂಡು ತಾಲ್ಲೂಕು ಘಟಕದ ಜಾತ್ಯಾತೀತ ಜನತಾ ದಳದ ನೂತನ ಅಧ್ಯಕ್ಷರಾಗಿ ಹಳೇಪುರ ಪಿ.ಎಸ್.ರಾಜಶೇಖರಮೂರ್ತಿ ಅವರನ್ನು ನೇಮಕ ಮಾಡಲಾಗಿದೆ.
ಈ ಕುರಿತಂತೆ ಆದೇಶ ಹೊರಡಿಸಿರುವ ಮೈಸೂರು ಜಿಲ್ಲಾ ಗ್ರಾಮಾಂತರ ಜಾತ್ಯಾತೀತ ಜನತಾದಳ ಪಕ್ಷದ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಅಶ್ವಿನ್ಕುಮಾರ್ ಅವರು ನಂಜನಗೂಡು ತಾಲ್ಲೂಕು ಹಳೇಪುರ ಗ್ರಾಮದ ಪಿ.ಎಸ್.ರಾಜಶೇಖರಮೂರ್ತಿ ಬಿನ್ ಕೆ.ಶಿವಬಸವದೇವರು ಇವರನ್ನು ನಂಜನಗೂಡು ತಾಲ್ಲೂಕು ಜಾತ್ಯಾತೀತ ಜನತಾದಳ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು ಆ.9ರಂದು ಭಾನುವಾರ ನಂಜನಗೂಡು ಪಟ್ಟಣ, ಹುಲ್ಲಹಳ್ಳಿ ಸರ್ಕಲ್ನಲ್ಲಿರುವ ನವಮಿ ಹೋಟೆಲ್ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ. ಸಭೆಯಲ್ಲಿ ಮೈಸೂರು ಜಿಲ್ಲಾಧ್ಯಕ್ಷರಾದ ಅಶ್ವಿನ್ಕುಮಾರ್ ಎಂ, ಪಕ್ಷದ ಹಿರಿಯ ಮುಖಂಡರಾದ ಎನ್.ನರಸಿಂಹಸ್ವಾಮಿ, ನಂಜನಗೂಡು ತಾಲ್ಲೂಕು ಜಾತ್ಯಾತೀತ ಜನತಾದಳ ಅಧ್ಯಕ್ಷರಾದ ಆರ್.ವಿ.ಮಹದೇವಸ್ವಾಮಿ ಹಾಗೂ ಪಕ್ಷದ ಮುಖಂಡರು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.








