LatestMysore

ಕೆ.ಆರ್.ನಗರ ಮಾರಿಕಾಂಬ ದೇವಾಲಯದ 46ನೇ ವರ್ಷದ ವಿಶೇಷ ಪೂಜಾ ಮಹೋತ್ಸವ ಆಚರಣೆ

ಕೆ.ಆರ್.ನಗರ(ಜಿಟೆಕ್ ಶಂಕರ್): ಪಟ್ಟಣದ ವಿನಾಯಕ ಬಡಾವಣೆಯಲ್ಲಿರುವ ಮಾರಿಕಾಂಬ ದೇವಾಲಯದ 46ನೇ ವರ್ಷದ ವಾರ್ಷಿಕೋತ್ಸವದ ವಿಶೇಷ ಪೂಜಾ ಮಹೋತ್ಸವ ವನ್ನು ಅತ್ಯಂತ‌ ವಿಜೃಂಭಣೆಯಿಂದ ನೆರವೇರಿಸಲಾಯಿತು.

ಏ.6 ರಂದು ಮಂಗಳವಾರ ಗಣಪತಿ ಪೂಜೆ, ಗಂಗಾಪೂಜೆ, ಮಹಾಲಕ್ಷ್ಮಿ, ಮಹಾಸರಸ್ವತಿ ಪೂಜೆ ಆಹ್ವಾಹನೆ ನೆರವೇರಿಸಿ ಗುಡ್ಡರ ಪೂಜಾ ಕುಣಿತದೊಂದಿಗೆ ದೇವರನ್ನು 2 ನೇ ವಾರ್ಡಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಏ.7ರಂದು ಮಂಗಳವಾರ ಮಾರಿಕಾಂಬ ದೇವಿ ಮತ್ತು ನವಗ್ರಹಗಳಿಗೆ ಪಂಚಾಂವೃತ ನೀರಿನಿಂದ ಮಹಾಭಿಕ್ಷೇಕ ನೆರವೇರಿಸಿ ಮಹಾಮಂಗಳಾರತಿ ಮಾಡಿ ಆನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಶಾಸಕ ಡಿ.ರವಿಶಂಕರ್, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ,ಶಾಂತಮ್ಮ ಹೆಚ್.ವಿಶ್ವನಾಥ್, ಮೂಳೆ ತಜ್ಞ ಡಾ.ಕೆ.ಆರ್.ಗೌತಮ್, ದೇವಾಲಯ ಸಮಿತಿ ಅಧ್ಯಕ್ಷ ಕೋಳಿಪ್ರಕಾಶ್, ಉಪಾಧ್ಯಕ್ಷ ತಿಮ್ಮಶೆಟ್ಟಿ, ಗೌರವಾಧ್ಯಕ್ಷ ಎನ್.ಗೌಡಪ್ಪ, ಗೌರವ ಸಲಹೆಗಾರ ನಾಗೇಂದ್ರರಾವ್, ಕಾರ್ಯದರ್ಶಿ ತುಕ್ಕೋಜಿರಾವ್, ಖಜಾಂಚಿ ಮಲ್ಲಿಕಾರ್ಜುನ ನಾಯಕ, ನಿರ್ದೇಶಕರಾದ ಶಿವಕುಮಾರ್, ವೆಂಕಟೇಶ್, ರವಿ, ನೇತ್ರಾವತಿನಾಗೇಗೌಡ, ಕೃಷ್ಣೇಗೌಡ, ಸುರೇಶಕುಮಾರ್, ಶಾಂತಶಾವಂದಪ್ಪ, ಬಡಾವಣೆಯ ಮುಖಂಡರಾದ ಹೆಚ್.ಎನ್.ವಸಂತಕುಮಾರ್, ಗೊರಗುಂಡಿಚಂದ್ರು ಸೇರಿದಂತೆ ಬಡಾವಣೆ ಮತ್ತು ಪಟ್ಟಣದ ಭಕ್ತರು ದೇವರ ದರ್ಶನ ಪಡೆದರು.

admin
the authoradmin

Leave a Reply