janamanakannada > Blog > Latest > Mysore > ಹೊಸೂರು ಸರ್ಕಾರಿ ಪ್ರೌಢಶಾಲಾ ನೂತನ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಮಹದೇವಿ ಕೃಷ್ಣ ಆಯ್ಕೆ
ಹೊಸೂರು(ಸಂಘಟನೆ ಮಂಜುನಾಥ್): ಸಾಲಿಗ್ರಾಮ ತಾಲೂಕಿನ ಹೊಸೂರು ಸರ್ಕಾರಿ ಪ್ರೌಢಶಾಲೆಯ ನೂತನ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಮಹದೇವಿ ಕೃಷ್ಣ ಅವಿರೋಧ ಆಯ್ಕೆಯಾದರು.
ಶಾಲೆಯ ಮುಖ್ಯ ಶಿಕ್ಷಕ ಹಾಗೂ ಅಧ್ಯಕ್ಷ ರಂಗಾಚಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇವರ ಅವಿರೋಧ ಆಯ್ಕೆಯೊಡನೆ ಉಪಾಧ್ಯಕ್ಷರನ್ನಾಗಿ ಲಾಟರಿ ಮೂಲಕ ನುಸ್ರುತ್ ಷರೀಫ್ ಆಯ್ಕೆಗೊಂಡರು. ಉಳಿದಂತೆ ಸದಸ್ಯರಾಗಿ ಶಕುಂತಲ, ಮಹದೇವ, ನಾಗಮಣಿ, ಶ್ವೇತಾ, ಎಂ.ಸಿ. ಲೋಕೇಶ್, ಅನಿಲ್, ಹರೀಶ್ ಅಯ್ಕೆಯಾದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ವಕೀಲ ಎಚ್.ಎ. ಪಣೀತ್, ಕಾಲೇಜಿನ ಪ್ರಾಂಶುಪಾಲ ಮಂಜು, ಶಿಕ್ಷಕ ಸಿ.ಎಸ್. ನಟರಾಜು, ಸಣ್ಣಪುಟ್ಟಮ್ಮ, ಮಹೇಶ್, ಬಿ.ಎನ್. ವಿಜಯಲಕ್ಷ್ಮಿ, ಗೋಪಾಲಗೌಡ, ಗ್ರಾಮದ ಸಣ್ಣತಮ್ಮಯ್ಯ ಸೇರಿದಂತೆ ಮತ್ತಿತರರು ಈ ವೇಳೆ ಹಾಜರಿದ್ದರು.
Tags:sangatane manjunath
admin








