ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಉತ್ತಮ ವ್ಯಾಸಂಗದೊಂದಿಗೆ ಬದುಕಿನಲ್ಲಿ ಉನ್ನತ ಹಂತಕ್ಕೇರುವ ಮೂಲಕ ಅಂಬೇಡ್ಕರ್ ರವರ ಕನಸು ನನಸು ಮಾಡುವಂತೆ ಶಾಸಕ ಡಿ.ರವಿಶಂಕರ್ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

ಪಟ್ಟಣದಲ್ಲಿ ಸುಮಾರು 4ಕೋಟಿ ರೂಪಾಯಿಗಳಲ್ಲಿ ನಿರ್ಮಾಣ ಮಾಡಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯವನ್ನು ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ರವರ ಕನಸು ಎಲ್ಲಾ ದಲಿತ, ಹಿಂದುಳಿದ ವರ್ಗದ ಜನತೆ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮಹಂತಕ್ಕೆ ಬರಬೇಕು ಎಂಬುದಾಗಿತ್ತು ಅಂಬೇಡ್ಕರ್‌ರವರ ಅಂತಹ ಕನಸನ್ನು ನನಸು ಮಾಡುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದ್ದು ಅಂತಹ ಜವಾಬ್ದಾರಿಯನ್ನು ನಿರ್ವಹಿಸಿ ಸಮಾಜದಲ್ಲಿ ಉನ್ನತ ಪ್ರಜೆಗಳಾಗಿ ಉತ್ತಮ ಹಂತಕ್ಕೆ ಹೋಗಿ ಪ್ರಗತಿ ಸಾಧಿಸುವಂತೆ ಹೇಳಿದರು.
ಬಸವಣ್ಣ ಮತ್ತು ಅಂಬೇಡ್ಕರ್‌ರ ಕನಸು ಒಂದೇ ಆಗಿದ್ದು ಈ ಇಬ್ಬರು ಮಹಾನ್ ವ್ಯಕ್ತಿಗಳು ಜಾತಿಬೇಧಗಳನ್ನು ತೊಡೆದುಹಾಕಿ ಸಮಸಮಾಜ ನಿರ್ಮಾಣ ಮಾಡಲು ಹೋರಾಟ ಮಾಡಿದವರಾಗಿದ್ದು ಇಂತಹ ಮಹಾನ್ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಂಡು ಎಲ್ಲರೂ ಜೀವನದಲ್ಲಿ ಮುಂದೆ ಬರುವಂತೆ ಹೇಳಿದರು.

ವಿದ್ಯಾರ್ಥಿನಿಲಯದಲ್ಲಿ 150ವಿದ್ಯಾರ್ಥಿನಿಯರಿಗೆ ಉಳಿದುಕೊಳ್ಳಲು ಎಲ್ಲಾ ಸವಲತ್ತು ಕಲ್ಪಿಸಲಾಗಿದ್ದು ಬೇಕಾದ ಎಲ್ಲಾ ಮೂಲಭೂತಸೌಲಭ್ಯಗಳನ್ನು ಅಚ್ಚುಕಟ್ಟಾಗಿ ಒದಗಿಸಲಾಗಿದ್ದು ಇದೆಲ್ಲವೂ ಸಹ ಅಂಬೇಡ್ಕರ್ ಕಂಡ ಕನಸಾಗಿದ್ದು ಇದರ ಸದುಪಯೋಗಪಡಿಸಿಕೊಂಡು ಶೈಕ್ಷಣಿಕವಾಗಿ ಪ್ರಗತಿಸಾಧಿಸಿ ಉಜ್ವಲಭವಿಷ್ಯ ರೂಪಿಸಿಕೊಳ್ಳುವಂತೆ ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕನಿರ್ದೆಶಕ ಶಂಕರಮೂರ್ತಿ, ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ ಮತ್ತಿತರರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ಜಿ.ಪ.ಮಾಜಿ ಸದಸ್ಯ ಬಸವರಾಜಪುರಸಿದ್ದಪ್ಪ, ನಿವೃತ್ತ ಶಿಕ್ಷಕ ಪುಟ್ಟಣ್ಣಯ್ಯ, ಗ್ರಾ.ಪಂ.ಮಾಜಿ ಅಧ್ಯಕ್ಷ ಕೆಸ್ತೂರುಕೊಪ್ಪಲು ಮಹದೇವ್, ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ದೊಡ್ಡಕೊಪ್ಪಲು ಪಿಗ್ಮಿರಾಜೇಗೌಡ, ನಂಜಪ್ಪ, ಗವಿಯಯ್ಯ, ಸರಕಾರಿ ನೌಕರರಸಂಘದ ಉಪಾಧ್ಯಕ್ಷ ಚರ‍್ನಹಳ್ಳಿ ಉಮೇಶ್, ನಿಲಯ ಮೇಲ್ವಿಚಾರಕ ಸಿದ್ದರಾಜು, ಎಂ.ಎಸ್.ರೇಖಾ, ಜಯರಾಜ್ ಹಾಘೂ ಇಲಾಖೆ ಸಿಬ್ಬಂದಿ ವರ್ಗದವರು, ಹಾಸ್ಟೆಲ್‌ವಿದ್ಯಾರ್ಥಿನಿಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.








