ಇನ್ಮುಂದೆ ವಡ್ಡರಕೊಪ್ಪಲು ನರಸಿಂಹ ಕೆರೆಗೆ ಬರಲಿದೆ ಹೊಸಕಳೆ.. ಅಭಿವೃದ್ಧಿ ಕಾರ್ಯಕ್ಕೆ ಸಿಕ್ತು ಚಾಲನೆ…

ಸಾಲಿಗ್ರಾಮ(ಸಂಘಟನೆ ಮಂಜುನಾಥ್): ತಾಲ್ಲೂಕಿನ ನರಚನಹಳ್ಳಿ ಗ್ರಾಮ ಪಂಚಾಯಿತಿಯ ವಡ್ಡರಕೊಪ್ಪಲು ನಲ್ಲಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಆರು ಎಕರೆ ವಿಸ್ತೀರ್ಣದ ನರಸಿಂಹ ಕೆರೆಯ ಅಭಿವೃದ್ಧಿ ಕಾರ್ಯಕ್ಕೆ ಭೂಮಿಪೂಜೆಯೊಂದಿಗೆ ಕಾಮಗಾರಿಗೆ ಚಾಲನೆ ನೀಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಮಮತರಾವ್ ರವರು ಚಾಲನೆ ನೀಡಿ ಮಾತನಾಡಿ, ಬರದ ಭೂಮಿಗೆ ಭಗೀರಥ ಕಾರ್ಯಕ್ರಮವೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮ ಎಂದರು. ಕೃಷಿಕರ ಜನ ಜಾನುವಾರು ಪ್ರಾಣಿಪಕ್ಷಿಗಳ ಬದುಕಿಗೆ ಕೆರೆ ಕಟ್ಟೆಗಳು ಆಧಾರವಾಗಿದೆ. ಇಂತಹ ಕೆರೆಗಳನ್ನು ಉಳಿಸುವುದು ನಮ್ಮಂತ ಪ್ರಜ್ಞಾವಂತ ನಾಗರಿಕರ ಹೊಣೆಗಾರಿಕೆಯಾಗಿದೆ ಎಂದರಲ್ಲದೆ, ಇದೇ ವೇಳೆ ಯೋಜನೆ ಜನಕಲ್ಯಾಣ ಕಾರ್ಯಗಳ ಬಗ್ಗೆ ವಿವರವಾದ ಪರಿಚಯ ಮಾಡಿದರು.ಈ ಭೂಮಿ ನಾವು ಬಾಡಿಗೆಗೆ ಪಡೆದ ಸ್ವತ್ತಾಗಿದೆ ಇದನ್ನು ಮುಂದಿನ ಪೀಳಿಗೆಗೆ ಜತನದಿಂದ ಕಾಪಾಡಿ ವರ್ಗಾಯಿಸಬೇಕಾಗಿದೆ ಎಂದರು.

ತಾಲೂಕಿನ ಯೋಜನಾಧಿಕಾರಿ ಉಮೇಶ್ ಪೂಜಾರಿಯವರು ಕೆರೆ ಕಾಮಗಾರಿಯು ಸಮಿತಿಯವರ ಮತ್ತು ಗ್ರಾಮಸ್ಥರ ಸಹಾಭಾಗೀತ್ವದಲ್ಲಿ ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು
ಕೆರೆ ಸಮಿತಿ ಅಧ್ಯಕ್ಷರಾದ ಮೋಹನ್, ಉಪಾಧ್ಯಕ್ಷರಾ ದೇವರಾಜು, ಲೆಕ್ಕ ಪರಿಶೋಧಕರಾದ ಅಶೋಕ್, ಮೇಲ್ವಿಚಾರಕರಾದ ಸಂಗೀತ, ಕಾರ್ಯದರ್ಶಿ ರಮೇಶ್, ತಾಲೂಕು ರೈತ ಸಂಘದ ರೈತ ಮುಖಂಡರ ಹರೀಶ್, ಒಕ್ಕೂಟದ ಅಧ್ಯಕ್ಷೆ ರೂಪ, ಸೇವಾಪ್ರತಿನಿಧಿ ಪವಿತ್ರ, ಊರಿನ ಮುಖಂಡರು, ಗ್ರಾಮಸ್ಥರು, ರೈತರು,ಸಂಘದ ಸದಸ್ಯರು ಉಪಸ್ಥಿತರಿದ್ದರು.
ನೀವು ವೆಬ್ ಸೈಟ್ ಮಾಡಲು ಇಚ್ಚಿಸಿದ್ದೀರಾ? ಹಾಗಿದ್ದರೆ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ







