ವೈದ್ಯೋ ನಾರಾಯಣೋ ಹರಿ;.. ಜೀವ ಉಳಿಸುವ ವೈದ್ಯರಲ್ಲಿ ಸಾಕ್ಷಾತ್ ಪರಮಾತ್ಮನನ್ನು , ಕಾಣುವಂತೆ ವೈದ್ಯರ ಸೂಚನೆಯಂತೆ ರೋಗಿಗಳ ಚಿಕಿತ್ಸೆ, ಆರೈಕೆಯ ನಿಸ್ವಾರ್ಥ ಸೇವೆ ನೀಡುವ ದಾದಿಯರು ಸಹ, ದೇವತೆಗಳು..
ಸಮಾಜಕ್ಕೆ ಶುಶ್ರೂಷಕರ ಅನನ್ಯ ಸೇವೆಯ ಗೌರವಾರ್ಥವಾಗಿ ಖ್ಯಾತ ದಾದಿ ಫ್ಲಾರೆನ್ಸ್ ನೈಟಿಂಗೇಲ್ ರವರ ಜನ್ಮದಿನವನ್ನು (12/5/1820) ಪ್ರತಿ ವರ್ಷ ಮೇ ತಿಂಗಳ 12ನೇ ತಾರೀಖು, ವಿಶ್ವ ಶುಶ್ರೂಷಕರ ದಿನ ಆಚರಣೆಗೆ ಬಂತು. 1965ರಲ್ಲಿ ಶುಶ್ರೂಷಕರ ದಿನಾಚರಣೆಯನ್ನು ಘೋಷಿಸಲಾಯಿತು. ತನ್ನ ಇಡೀ ಬದುಕನ್ನು ಮನುಕುಲದ ಒಳಿತಿಗಾಗಿ, ಮುಡಿಪಾಗಿಟ್ಟ ಫ್ಲೋರೆನ್ಸ ನೈಟಿಂಗೇಲ್ ರನ್ನು, ಆಧುನಿಕ ನರ್ಸಿಂಗ್ ಸಂಜಾತೆ ಎಂದು ಬಣ್ಣಿಸಲಾಗಿದೆ.

ಆರೋಗ್ಯ ರಕ್ಷಣಾ ವ್ಯವಸ್ಥೆಯ ಬೆನ್ನುಲುಬಾಗಿ, ರೋಗಿಯ ದೈಹಿಕ ಮತ್ತು ಮಾನಸಿಕ ಆರೈಕೆಯಲ್ಲಿ ಶುಶ್ರೂಷಕರು ಅತಿ ಮಹತ್ವದ ಪಾತ್ರ ನಿರ್ವಹಿಸುತ್ತಾರೆ. ಇಂದಿನ ಕಾಲಮಾನದಲ್ಲಿ, ಆರೋಗ್ಯ ಸೇವೆಯು ಕೇವಲ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳಿಗೆ ಸೀಮಿತವಾಗಿ ಉಳಿದಿಲ್ಲ. ಅದು ಸಮಾಜದ ಪ್ರತಿ ಮೂಲೆ ಗೂ ವಿಸ್ತರಿಸಿದೆ. ಸಮುದಾಯ ಆರೋಗ್ಯ ಸೇವೆ ಗಳು ಸಮಾಜದ ಯೋಗಕ್ಷೇಮವನ್ನು ಉತ್ತೇಜಿಸುವ, ರೋಗವನ್ನು ತಡೆಗಟ್ಟುವ, ಜನರ ಜೀವನಮಟ್ಟವನ್ನು ಸುಧಾರಿಸಲು , ಶ್ರಮಿಸುತ್ತಿರುವ, ಅನೇಕ, ವೃತ್ತಿಪರರಲ್ಲಿ. ದಾದಿಯರ ಸೇವೆ ಅನನ್ಯವಾದುದು.

2026ನೇ ವರ್ಷದ ವಿಶ್ವ ಶುಶ್ರೂಷಕರ ದಿನಾಚರಣೆಯ ಧ್ಯೇಯ ವಾಕ್ಯ, ‘ನಮ್ಮ ದಾದಿಯರು, ನಮ್ಮ ಭವಿಷ್ಯ, ಸಬಲೀಕೃತ ದಾದಿಯರು ಜೀವರಕ್ಷಕರು’ (Our Nurses, Our future empowered nurses save Lives) ಎಂಬುದಾಗಿದೆ ಆರೋಗ್ಯ ಫಲಿತಾಂಶಗಳನ್ನು ಸುಧಾರಿಸುವಲ್ಲಿ, ವೈದ್ಯರ ಸೂಚನೆಯಂತೆ ಚಿಕಿತ್ಸೆ ನೀಡುವುದು ರೋಗಿಗಳ ನಿರಂತರ ಮೇಲ್ವಿಚಾರಣೆ ಮತ್ತು ತುರ್ತು ಸಂದರ್ಭದಲ್ಲಿ ಸಮಯೋಚಿತ ಸೇವೆ ಒದಗಿಸುವ ದಾದಿಯರು ರೋಗಿಗಳ ಪಾಲಿನ ಮಾತೃ ಸ್ವರೂಪರು.,ಎಂದರೆ ಅತಿಶಯೋಕ್ತಿಯಲ್ಲ.

ರೋಗಿಗಳಿಗೆ ರೋಗ ತಡೆಗಟ್ಟುವಿಕೆ ಮತ್ತು ಸ್ವ ಆರೈಕೆಯ ಬಗ್ಗೆ ಶಿಕ್ಷಣ ನೀಡುವ ಮೂಲಕ, ರೋಗಿಗಳು ಆರೋಗ್ಯಕರ ನಡುವಳಿಕೆಗಳನ್ನು ಅಳವಡಿಸಿಕೊಳ್ಳಲು ಹಾಗೂ ಧೀರ್ಘಕಾಲದ ಪರಿಸ್ಥಿತಿಯನ್ನು ನಿರ್ವಹಣೆ ಮಾಡುವಲ್ಲಿ ರೋಗಿಗಳಿಗೆ ಆಸರೆಯಾಗುತ್ತಾರೆ. ರೋಗಿಗಳ ಮತ್ತು ವೈದ್ಯರ ನಡುವಿನ ಸೇತುವೆಯಾಗಿ, ಚಿಕಿತ್ಸೆ ಮಾತ್ರವಲ್ಲದೆ, ರೋಗಿಗಳಿಗೆ ಆತ್ಮ ವಿಶ್ವಾಸ ತುಂಬುವ ಮಹೋನ್ನತ ಕಾರ್ಯದಲ್ಲಿ, ರೋಗಿಯ ದುಗುಡವನ್ನು ಕಡಿಮೆ ಮಾಡುವಲ್ಲಿ ದಾದಿಯರ ಸಾಂತ್ವನ , ನಗುಮೊಗದ ಸೇವೆ ಬಹುಮುಖ್ಯ ಪಾತ್ರ ವಹಿಸುತ್ತದೆ.

ಸಹಾನುಭೂತಿ ಮತ್ತು ಸಮರ್ಪಣಾ ಭಾವದ ಸಂಗಮವಾಗಿರುವ ನರ್ಸಿಂಗ್ ಸೇನಾ ವೃತ್ತಿ, ಕೋವಿಡ್ ಸಂದರ್ಭದಲ್ಲಿ ವಹಿಸಿದ ಪಾತ್ರ ಅಸಾಧಾರಣವಾದುದ್ದು. ತಮ್ಯ ಜೀವ ಪಣಕ್ಕಿಟ್ಟು ನೀಡಿದ ಸೇವೆಗೆ ಅರ್ಹವಾಗಿಯೇ, ಅವರನ್ನು, ಕೋವಿಡ್ ವಾರಿಯರ್ಸ್, ಎಂದು ಗೌರವಿಸಲಾಯಿತು. ಜೀವನ ಶೈಲಿ ಮತ್ತಿತರ ಕಾರಣಗಳಿಂದ ಆಧುನಿಕ ಮಾನವನ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಒತ್ತಡ ಹೆಚ್ಚಾಗಿರುವಂತೆ, ರೋಗಿಗಳ ಆರೈಕೆಗೆ ಕಟಿಬದ್ಧವಾಗಿ ದುಡಿಯುವ ಶುಶ್ರೂಷಕರ ಮೇಲೆ ಸಹ ಒತ್ತಡ ಹೆಚ್ಚಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದ ಪ್ರಕಾರ 2026ನೇ ಇಸವಿ ವೇಳೆಗೆ 4.3ಮಿಲಿಯನ್ ಗೂ ಹೆಚ್ಚು ದಾದಿಯರ ಅವಶ್ಯಕತೆ ಇದೆ ಎಂದು ಅಂದಾಜಿಸಲಾಗಿದೆ. ಇತ್ತೀಚೆಗೆ ಸರ್ಕಾರ ನರ್ಸ್ ಪದಕ್ಕೆ ‘ಶುಶ್ರೂಷಾ ಅಧಿಕಾರಿ’ ಎಂಬ ಪದನಾಮವನ್ನು ಮಾನ್ಯ ಮಾಡಿದ್ದು, ಮನುಕುಲದ ಒಳಿತಿಗಾಗಿ ಸದಾ ಮಿಡಿಯುವ, ದುಡಿಯುವ ಶುಶ್ರೂಷಕರ ನಿಸ್ವಾರ್ಥ ಸೇವೆಗೆ ನಮ್ಮ ನಮನಗಳು.









