LatestMysore

ನೆನಪಿರಲಿ… ಚುಂಚನಕಟ್ಟೆ ವ್ಯಾಪ್ತಿಯ ಈ ಗ್ರಾಮಗಳಲ್ಲಿ ಸೆ.26ರಂದು ವಿದ್ಯುತ್ ಇರಲ್ಲ..

ಹೊಸೂರು(ಸಂಘಟನೆ ಮಂಜುನಾಥ್) : ಸಾಲಿಗ್ರಾಮ ತಾಲ್ಲೂಕಿನ 66/11 ಕೆ.ವಿ ವಿದ್ಯುತ್ ಸ್ವೀಕರಣ ಕೇಂದ್ರ ಚುಂಚನಕಟ್ಟೆ ಹಾಗೂ ಮಾರಗೌಡನಹಳ್ಳಿಯಲ್ಲಿ ದಿನಾಂಕ ಸೆಪ್ಟೆಂಬರ್ 26 ರ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 2 ನೇ ತ್ರೈಮಾಸಿಕ ನಿರ್ವಹಣೆ ಕೈಗೊಳ್ಳಬೇಕಾಗಿದೆ.

ಆದುದರಿಂದ  ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕೆ.ಆರ್ ನಗರ ಉಪ-ವಿಭಾಗ ವ್ಯಾಪ್ತಿಗೆ ಒಳಪಡುವ ಹಳಿಯೂರು , ಹೊಸಕೋಟೆ, ಕುಪ್ಪೆ, ಮಾವತ್ತೂರು, ಕೆಸ್ತೂರು ಹಾಗು ಸಿದ್ದಾರಪುರ ಗ್ರಾಮ ಪಂಚಾಯಿತಿಗಳಿಗೆ ಒಳಪಡುವ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಈ ಹಿನ್ನೆಲೆಯಲ್ಲಿ ಗ್ರಾಹಕರು ವಿದ್ಯುತ್ ಇಲಾಖೆಯೊಡನೆ ಸಹಕರಿಸಬೇಕೆಂದು ಕೆ.ಆರ್.ನಗರ ಉಪ-ವಿಭಾಗದ ಎಇಇ  ಅರ್ಕೇಶ್ ಮೂರ್ತಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

admin
the authoradmin

ನಿಮ್ಮದೊಂದು ಉತ್ತರ