LatestMysore

ನಿಮ್ಮ ಜೊತೆ ಬರುವುದು ಸಂಪಾದನೆಯಲ್ಲ…ಜನರಿಗೆ  ಮಾಡಿದ ಸಹಾಯ ಮಾತ್ರ:ಸಾ.ರಾ.ಮಹೇಶ್

ಕೆ ಆರ್ ನಗರ(ಸಂಘಟನೆ ಮಂಜುನಾಥ್):  ನೀವು ನಿಮ್ಮ ವೃತ್ತಿ ಜೀವನದಲ್ಲಿ ಸಂಪಾದನೆ ಮಾಡಿದ ಆಸ್ತಿ ಹಣ ನಿಮ್ಮ ಜೊತೆ ಬರುವುದಿಲ್ಲ ನೀವು ಅಧಿಕಾರದಲ್ಲಿದ್ದಾಗ ಸಾರ್ವಜನಿಕರಿಗೆ ಯಾವ ಸಹಾಯ ಮಾಡಿದ್ದೀರಿ ಅದು ನಿಮ್ಮ ಜೊತೆಯಲ್ಲಿ ಬರುತ್ತದೆ ಎಂದು ಮಾಜಿ ಸಚಿವಾ ಸಾರಾ ಮಹೇಶ್ ಹೇಳಿದರು.

ಮೈಸೂರ್ ರಸ್ತೆಯ ಮೆಪಲ್ ರೆಸಾರ್ಟ್ ನಲ್ಲಿ ನಡೆದ ನಿವೃತ್ತ ಅಧಿಕಾರಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಧಿಕಾರ ಹೋದ ನಂತರ ನೀವು ಯಾರಿಗೂ ಏನು ಸಹಾಯ ಮಾಡಲಾಗುವುದಿಲ್ಲ ಆದರೆ ಅಧಿಕಾರದಲ್ಲಿದ್ದ ವೇಳೆ ನಿಮ್ಮಿಂದಾಗುವ ಸಹಾಯವನ್ನು ಮಾಡಿ ಸಾರ್ವಜನಿಕರ ಮನಸ್ಸಿನಲ್ಲಿ ಉಳಿಯುವಂತಾಗಿ ಎಂದು ಸಲಹೆ ನೀಡಿದರು.

ನಾನು 15 ವರ್ಷದ ಆಡಳಿತ ಅವಧಿಯಲ್ಲಿ ಯಾವುದೇ ಅಧಿಕಾರಿಗೂ ಒಂದೇ ಒಂದು ತೊಂದರೆಯನ್ನು ನೀಡಿಲ್ಲ ಆದರೆ ಸಾರ್ವಜನಿಕರು ನಮ್ಮ ಕೆಲಸವನ್ನು ಮಾಡಿಕೊಟ್ಟಿಲ್ಲ ಎಂದು ದೂರು ಹೇಳಿದಾಗ ಅಂಥ ಸಂದರ್ಭದಲ್ಲಿ ಆ ಸಾರ್ವಜನಿಕರ ಕೆಲಸ ಮಾಡುವಂತೆ ಕೋಪ ಮಾಡಿಕೊಂಡೆ ಹೇಳಿದ್ದೇನೆ ಎಂದರು.

ಆದರೆ ನೀವು ನಿವೃತ್ತಿಯಾಗುತ್ತಿದ್ದು ಈಗ ನಿಮ್ಮ ಮನಸ್ಸಿನಲ್ಲಿ ಯಾವುದೋ ಒಬ್ಬ ವ್ಯಕ್ತಿಯ ಕೆಲಸವನ್ನು ಮಾಡದೆ ಅಲೆದಾಡಿಸಿದೆ ಅವನ ಕೆಲಸವನ್ನು ಮಾಡಿಕೊಡಬೇಕಾಗಿತ್ತು ಮಾಡಲಾಗಲಿಲ್ಲ ಎಂಬ ನೋವು ಈಗ ನಿಮ್ಮನ್ನು ಕಾಡಬಹುದು ಆದರೆ ಅದಕ್ಕಾಗಿಯೇ ಈಗ ಇನ್ನೂ ವೃತ್ತಿಯಲ್ಲಿರುವ ಮತ್ತು ಅಧಿಕಾರದಲ್ಲಿರುವವರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಾನು ಒಬ್ಬ ಸಾರ್ವಜನಿಕನಾಗಿ ಬೇರೆ ಅಧಿಕಾರಿಯ ಮುಂದೆ ನಿಂತಿ ನನ್ನ ಕೆಲಸವನ್ನು ಮಾಡಿಕೊಡಿ ಎಂದು ಬೇಡುತ್ತಿದ್ದಾಗ ನಿಮಗಾಗುವ ನೋವನ್ನು ನೆನಪಿಸಿಕೊಂಡು ಬೇರೆಯವರಿಗೆ ನೋವು ಕೊಡದ ರೀತಿ ನಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಈಗ ನಿವೃತ್ತಿಯಾಗಿರುವ ಕೆ ಆರ್ ನಗರದಲ್ಲಿ ತಹಸಿಲ್ದಾರ್ ಆಗಿ ಪಾಂಡವಪುರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಸಂತೋಷ್ ಮತ್ತು ಅವರ ಶ್ರೀಮತಿ ಹಾಗೂ ಕೆಆರ್ ನಗರದಲ್ಲಿ ಪಶುವೈದ್ಯ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿದ್ದ ನಾಗರಾಜ್ ಮತ್ತು ಅವರ ಶ್ರೀಮತಿ ಮತ್ತು ಅರಣ್ಯ ಇಲಾಖೆಯಲ್ಲಿ ವಲಯ ಅಧಿಕಾರಿಯಾಗಿ ನಿವೃತ್ತಿಯಾಗುತ್ತಿರುವ ಜಗದೀಶ್ ಮತ್ತು ಅವರ ಶ್ರೀಮತಿ ಕೆ ಆರ್ ನಗರದ ಸಾರ್ವಜನಿಕ ಆಸ್ಪತ್ರೆಯ  ತಾಲೂಕು ಆಡಳಿತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಈ ತಿಂಗಳು ನಿವೃತ್ತಿಯಾಗುತ್ತಿರುವ ಶಿವಪ್ರಸಾದ್ ಮತ್ತು ಅವರ ಶ್ರೀಮತಿಯವರಿಗೆ ನಿವೃತ್ತಿ ಜೀವನ ಸುಖಕರವಾಗಿರಲಿ ಅವರ ಕುಟುಂಬಕ್ಕೆ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿಎನ್ ಮಂಜೇಗೌಡ ಮಾತನಾಡಿ, ನಾನು ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದ ನನ್ನನ್ನು ರಾಜ್ಯ ಗುರುತಿಸುವಂತಹ 15 ದಿನದಲ್ಲಿ ವಿಧಾನಪರಿಷತ್ ಸದಸ್ಯನನ್ನಾಗಿ ಮಾಡಿದ ಈ ರಾಜ್ಯ ಕಂಡ ಅತ್ಯಂತ ಪ್ರಾಮಾಣಿಕ ಜನಸೇವಕ ಸಾರಾ ಮಹೇಶ್ ಅಣ್ಣನವರಿಗೆ ಋಣಿಯಾಗಿರುತ್ತೇನೆ ಯಾವಾಗಲೂ ನಮಗೆ ಸಹಾಯ ಮಾಡಿದ ವ್ಯಕ್ತಿಯನ್ನು ಮರೆಯದೆ ಅವರನ್ನು ನೆನೆಯುವ ಕೆಲಸವನ್ನು ಮಾಡಬೇಕೆಂದು ತಿಳಿಸಿದರು.

ನೀವು ಅಧಿಕಾರದಲ್ಲಿದ್ದಾಗ ನಿಮ್ಮ ಪೆನ್ನು ಮತ್ತು ಸಹಿ ಒಬ್ಬ ವ್ಯಕ್ತಿ ಒಂದು ಕುಟುಂಬವನ್ನು ಉಳಿಸುವ ಜೊತೆಗೆ ಅವರ ಬದುಕನ್ನೇ ಬದಲಾಯಿಸುವ ಶಕ್ತಿ ಇರುತ್ತದೆ ಆದರೆ 60 ವರ್ಷ ಕಳೆದ ನಂತರ ನೀವು ಏನು ಮಾಡಲು ಯಾರಿಗೆ ಸಹಾಯ ಮಾಡಲು ಆಗುವುದಿಲ್ಲ ಆದ್ದರಿಂದ ಅಧಿಕಾರದಲ್ಲಿದ್ದ ವೇಳೆ ನಿಮ್ಮಲ್ಲಿ ಬರುವ ಯಾವುದೇ ಒಬ್ಬ ನಾಗರಿಕನನ್ನು ನಿಮ್ಮ ಕುಟುಂಬದ ಸದಸ್ಯನೆಂದು ತಿಳಿದು ಅವರ ಕೆಲಸವನ್ನು ಮಾಡಿಕೊಡಿ ಅವರು ನಿಮ್ಮನ್ನು ಜೀವ ಇರುವ ತನಕ ನೆನೆಯುವ ಕೆಲಸವನ್ನು ಮಾಡುತ್ತಾರೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಚಾಮರಾಜನಗರ ಜಿಲ್ಲಾ ಎಡಿಸಿ ಜವರೇಗೌಡ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್ ಗೌಡ ನಿವೃತ್ತ  ತಹಸಿಲ್ದಾರ್ ಸಂತೋಷ್ ನಿವೃತ್ತ   ಟಿ ಹೆಚ್ ಓ ಶಿವಪ್ರಸಾದ್  ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ರಾಜು ತಹಸಿಲ್ದಾರ್ ಯದುಗಿರೀಶ್ ತಾಲೋಕು   ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಜಿಲ್ಲಾ ಸರ್ಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಅಧಿಕಾರಿಗಳಾದ ನಾಗರಾಜ್ . ಜಗದೀಶ್ ಗೌಡ. ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಾಯತ್ರಿ ಅಧಿಕಾರಿಗಳಾದ ಪ್ರಸನ್ನ ಅಶೋಕ್ ಶಿವರಂಜನ್ ಡಾ. ಚಂದ್ರಕಲಾ  ಡಾ.ಭವಾನಿ  ಡಾ. ಅಶೋಕ್ ಡಾ. ಮೋಹನ್ ಮಮತಾ. ರಶ್ಮಿ. ರಮ್ಯಾ. ಉಪ  ತಹಸಿಲ್ದಾರ್ ಶಿವಕುಮಾರ್ ಎ ಇ ಇ ಸತೀಶ್, ಒಕ್ಕಲಿಗ ಕ್ರೆಡಿಟ್ ಕೋ ಆಪರೇಟಿವ್ ಉಪಾಧ್ಯಕ್ಷ ವಡ್ಡರ ಕೊಪ್ಪಲು ಶಿವರಾಮು. ಆನಂದ್ ಪ್ರಭಾಕರ್ ಮಂಜುನಾಥ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

admin
the authoradmin

Leave a Reply

Translate to any language you want