FoodLatest

ಬೆಳಗ್ಗಿನ ಉಪಹಾರಕ್ಕೆ ಮನೆಯಲ್ಲಿಯೇ ಮಾಡಿ ನೋಡಿ ಸಿಂಪಲ್ ಟೊಮೆಟೋ ದೋಸೆ

ಸಾಮಾನ್ಯವಾಗಿ ಅಕ್ಕಿ ಬಳಸಿ ಹಲವು ವಿಧದ ದೋಸೆಗಳನ್ನು ಮಾಡಲಾಗುತ್ತದೆ ಇದು ಮಾಮೂಲಿ. ಆದರೆ ಅಕ್ಕಿಯ ಜೊತೆ ಇತರೆ ತರಕಾರಿಗಳನ್ನು ಸೇರಿಸಿ ಮಾಡಿದರೆ ಒಂದೊಂದು ತರಕಾರಿಯಿಂದಲೂ ಒಂದೊಂದು ರೀತಿಯ ರುಚಿಯ ದೋಸೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಹಾಗಿದ್ದರೆ ಸಿಂಪಲ್ ಟೋಮೆಟೋ ದೋಸೆಯನ್ನೇಕೆ ಮಾಡಬಾರದು… ಒಮ್ಮೆ ಮಾಡಿ ನೋಡಿ..

ಇದನ್ನೂ ಓದಿ: ನಿತ್ಯದ ಸೇವನೆಗೆ ಅನುಕೂಲವಾಗುವಂತೆ ಅಕ್ಕಿಯಿಂದ ಏನೆಲ್ಲ ತಿಂಡಿ ತಯಾರಿಸಬಹುದು…?

ಬೇಕಾಗುವ ಪದಾರ್ಥಗಳು: ದೋಸೆ ಅಕ್ಕಿ: 1 ಪಾವು, ಟೊಮೆಟೋ- 3, ಜೀರಿಗೆ- ಸ್ವಲ್ಪ, ಒಣ ಮೆಣಸಿನ ಕಾಯಿ-6, ಕಾಯಿ ತುರಿ- 1 ಕಪ್, ಕೊತ್ತಂಬರಿ ಸೊಪ್ಪು- ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು

ಇದನ್ನೂ ಓದಿ: ಪಾಲಕ್ ನಿಂದ ಏನೆಲ್ಲ ಮಾಡಬಹುದು ಗೊತ್ತಾ? ಈಗಲೇ ನೀವೇ ಮನೆಯಲ್ಲಿ ತಯಾರಿಸಿ

ಮಾಡುವ ವಿಧಾನ: ಬೆಳಗ್ಗಿನ ಉಪಹಾರಕ್ಕೆ ದೋಸೆ ಮಾಡುವುದಾದರೆ ರಾತ್ರಿಯೇ ಅಕ್ಕಿಯನ್ನು ನೆನೆಯಲು ಹಾಕಬೇಕು. (ಕನಿಷ್ಟ ಮೂರು ಗಂಟೆಯಾದರೂ ಅಕ್ಕಿ ನೆನೆಯಬೇಕು) ಬೆಳಿಗ್ಗೆ ಮೊದಲಿಗೆ ಟೊಮೆಟೋ ಹೊರತು ಪಡಿಸಿ ಜೀರಿಗೆ, ಕಾಯಿ ತುರಿ, ಒಣಮೆಣಸಿನ ಕಾಯಿ, ಅಕ್ಕಿಯನ್ನು ಹಾಕಿ ರುಬ್ಬ ಬೇಕು. ಅರ್ಧದಷ್ಟು ಆದ ಮೇಲೆ ಚೂರು ಮಾಡಿಟ್ಟ ಟೊಮೆಟೋವನ್ನು ಅದಕ್ಕೆ ಹಾಕಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಬೇಕು.

ಇದನ್ನೂ ಓದಿ: ಆಲೂಪರೋಟ,  ಬಟಾಣಿ ಗಸಿ,  ಸಮೋಸ,  ಕುರ್ಮಾ ಮಾಡೋದು ಹೇಗೆ?

ಆ ನಂತರ ಕೆಲವು ಸಮಯ ಬಿಟ್ಟು ಕಾವಲಿಯಲ್ಲಿ ದೋಸೆ ಹೊಯ್ದು ಅದರ ಮೇಲೆ ಈರುಳ್ಳಿ ಚೂರು, ಕೊತ್ತಂಬರಿಯನ್ನು ಉದುರಿಸಬೇಕು. ಬಳಿಕ ಎಣ್ಣೆ ಹಾಕಿ ಎರಡು ಕಡೆಯೂ ಚೆನ್ನಾಗಿ ಬೇಯಿದರೆ ಟೊಮೆಟೋ ದೋಸೆ ಸವಿಯಲು ಸಿದ್ಧವಾಗುತ್ತದೆ.

ಇದನ್ನೂ ಓದಿ: ಸುಲಭವಾಗಿ ಮಾಡಬಹುದಾದ ಮೂರು ಬಾತ್ ಗಳು…

admin
the authoradmin

Leave a Reply