LatestMysore

ಎಲ್ಲ ಸಮಾಜಕ್ಕೂ ಮಿತ್ರ ವಿಶ್ವಕರ್ಮ ಸಮಾಜ: ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ

ಕೆ.ಆರ್.ನಗರ(ಜಿಟೆಕ್ ಶಂಕರ್): ದೇಶದ ಸಮಗ್ರ ಅಭಿವೃದ್ದಿಯಲ್ಲಿ ಪ್ರತಿಯೊಂದು ಸಮಾಜದ ಕೊಡುಗೆ ಅಪಾರವಾಗಿದ್ದು ಅದರಲ್ಲೂ ವಿಶ್ವಕರ್ಮ ಸಮಾಜದ ಕೊಡುಗೆ ಒಂದು ಕೈ ಮೇಲಾಗಿದ್ದು ರೈತ ಸೇರಿದಂತೆ ಇತರ ಸಮಾಜ ಧರ್ಮಗಳಿಗೆ ಬೇಕಾದ ಪರಿಕರಗಳನ್ನು ರೂಪಿಸಿ ಕೊಡುವ ಮೂಲಕ ಎಲ್ಲಾ ಸಮಾಜದ ಧರ್ಮಗಳಿಗೆ ಮಿತ್ರನಾಗಿದೆ ವಿಶ್ವಕರ್ಮ ಸಮಾಜ ಎಂದು ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ ಹೇಳಿದರು.

ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಹೆಬ್ಬಾಳು ವಿಶ್ವಕರ್ಮ ಮಹಾಸಂಘದ ವತಿಯಿಂದ ಏರ್ಪಡಿಸಲಾಗಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೈತನಿಗೆ ಬೇಕಾದ ಅಗತ್ಯ ಪರಿಕರಗಳಲ್ಲದೆ ಇತರೆ ಸಮಾಜ ಧರ್ಮದವರು ದಿನನಿತ್ಯ ಬಳಕೆ ಮಾಡುವ ಅಗತ್ಯ ಪರಿಕರಗಳನ್ನು ರೂಪಿಸಿಕೊಡುವ ಮೂಲಕ ಎಲ್ಲಾ ಸಮಾಜ ಧರ್ಮದವರಿಗೆ ಮಿತ್ರರಾಗಿದ್ಧಾರೆ ಎಂದರು.

ರೈತರಿಗೆ ಬೇಕಾದ ನೇಗಿಲು, ಹಾರೆ, ಕುಡುಗೋಲು, ಬಂಡಿ, ಗುದ್ದಲಿ ಸೇರಿದಂತೆ ಎಲ್ಲವನ್ನು ತಯಾರಿಸಿ ಕೊಡುವ ಮೂಲಕ ರೈತರ ಮಿತ್ರರಾಗಿದ್ದು, ಚಿನ್ನಬೆಳ್ಳಿ, ಕಬ್ಬಿಣದ ಕೆಲಸ, ದೇವಾಲಯ ನಿರ್ಮಾಣ, ಮೂರ್ತಿ ಕೆತ್ತನೆ ಸೇರಿದಂತೆ ಸಮಾಜದ ಎಲ್ಲಾ ವರ್ಗಗಳಿಗೆ ಕೆಲಸ ಮಾಡಿ ಕೊಡುವ ಮೂಲಕ ಇವರ ಸೇವೆ ಅಪಾರವಾಗಿದೆ ಎಂದರು.

ಪಂಚ ಕುಲಕಸುಬುಗಳನ್ನು ತಮ್ಮಲ್ಲಿ ತೊಡಗಿಸಿ ಕೊಂಡಿರುವ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರವಾಗಿದ್ದು ಇಂತಹ ನೈಪುಣ್ಯತೆ ಉಳಿದು ಬೆಳೆದಲ್ಲಿ ಮಾತ್ರ ಸಮಾಜದಲ್ಲಿ ಕಲೆಸಾಹಿತ್ಯ, ಸಂಸ್ಕೃತಿ ಎಂಬುದು ಉಳಿಯಲು ಸಾಧ್ಯ ಎಂದರು.

ಸಮಾಜದ ಹಿರಿಯರನ್ನು ಸನ್ಮಾನಿಸಿ ಮಾತನಾಡಿದ ತಾಲೂಕು ಪಂಚಾಯಿತಿ ಇಒ ವಿ.ಪಿ.ಕುಲದೀಪ್ 80ರ ಇಳಿವಯಸ್ಸಿನಲ್ಲಿಯೂ ವಿಶ್ವಕರ್ಮ ಸಮಾಜದವರು ಕುಲಕಸುಬು ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದ್ದು ಇದು ಅವರು ದೇಹದಂಡಿಸಿ ಮಾಡುವ ಕುಲಕಸುಬಿನಿಂದ ಅವರ ಆರೋಗ್ಯವೂ ಸಹ ವೃದ್ದಿಸಲು ಸಹಕಾರಿಯಾಗಿದೆ ಎಂದರಲ್ಲದೆ ಮುಂದಿನ ದಿನಗಳಲ್ಲಿ ಸಂಘಕ್ಕೆ ನಿವೇಶನ ಒದಗಿಸಿಕೊಡಲು ಪ್ರಯತ್ನಿಸುವುದಾಗಿ ಹೇಳಿದರು.

ಹೆಬ್ಬಾಳು ಹೋಬಳಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಂ.ವಿ.ಅರುಣ್‌ಕುಮಾರ್, ಕಾರ್ಯದರ್ಶಿ ತೇಜುಕುಮಾರ್, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ವೇಣುಗೋಪಾಲ್ ಮತ್ತಿತರರು ಮಾತನಾಡಿದರು.

ಮುಖಂಡರಾದ ಕೆ.ಎಸ್.ರೇವಣ್ಣ, ಟೈಲರ್‌ ಸುಬ್ರಹ್ಮಣ್ಯ, ವೀರಭದ್ರಾಚಾರ್, ಸಿ.ವಿ.ಮೋಹನ್, ಹೋಬಳಿ ಮಟ್ಟದ ಗೌರವಾಧ್ಯಕ್ಷ ನಾಗರಾಜಾಚಾರ್, ಉಪಾಧ್ಯಕ್ಷ ಯೋಗಾಚಾರ್, ಖಜಾಂಚಿ ಸುರೇಶಾಚಾರ್, ಸಂಘಟನಾ ಕಾರ್ಯದರ್ಶಿ ಸಿ.ಪಿ.ಪ್ರಕಾಶ್, ಸಂಘದ ಪದಾಧಿಕಾರಿಗಳಾದ ಸಣ್ಣಸ್ವಾಮಾಚಾರ್, ತಮ್ಮಯ್ಯಾಚಾರ್, ಮೋಹನ್‌ ದಾಸ್, ಶೇಖರ್, ಅಂಜನಾಚಾರ್, ಶಂಕರಾಚಾರ್, ಭಾಸ್ಕರ್, ಮಂಜುನಾಥ್, ಸೋಮಶೇಖರಾಚಾರ್, ಸುನೀಲ್, ಚಿರನಹಳ್ಳಿ ಮಂಜುನಾಥ್, ಸಿದ್ದನಕೊಪ್ಪಲು ಮಂಜುನಾಥ್, ಸೋಮಾಚಾರ್, ಡಿ.ಕೆ.ಅರುಣ್, ಪಾಪಾಚಾರ್, ರೇಣುಕಾಚಾರ್ ಸೇರಿದಂತೆ ಹೆಬ್ಬಾಳು ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ವಿಶ್ವಕರ್ಮ ಸಮಾಜದ ಬಂಧುಗಳು, ಮಹಿಳೆಯರು ಪಾಲ್ಗೊಂಡಿದ್ದರು.

admin
the authoradmin

ನಿಮ್ಮದೊಂದು ಉತ್ತರ