CinemaLatest

ಕಮಲಾಕುಮಾರಿ ಅಭಿನಯಶಾರದೆಯಾಗಿ ಚಂದನವನದಲ್ಲಿ ಮೆರೆದಿದ್ದು ಹೇಗೆ? ಸಿನಿ ಜರ್ನಿ ಹೇಗಿತ್ತು?

ಅಭಿನಯಶಾರದೆ ಜಯಂತಿಯವರ ಮೂಲ ಹೆಸರು ಕಮಲಾಕುಮಾರಿ 6.1.1945 ರಂದು ಬಳ್ಳಾರಿಯಲ್ಲಿ ಜನಿಸಿದ ಇವರು ಹೆಚ್ಚಿನ ವಿದ್ಯಾಭ್ಯಾಸ ಮಾಡಲಾಗಲಿಲ್ಲ. 76 ವರ್ಷ ತುಂಬು ಜೀವನದ ನಂತರ 26.7.2021 ರಂದು ಬೆಂಗಳೂರಲ್ಲಿ ನಿಧನರಾದ ಜಯಂತಿ ಸ್ಯಾಂಡಲ್‍ವುಡ್ನ ದಿ ಬೋಲ್ಡ್ ಅಂಡ್ ಬ್ಯುಟಿಫ಼ುಲ್ ಯಾಕ್ರ್ಟೆಸ್ ಎನಿಸಿದ್ದರು… ಇವರ ಸಿನಿಮಾ ಬದುಕಿನ ಹೆಜ್ಜೆಗುರುತುಗಳನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಇಲ್ಲಿ ದಾಖಲು ಮಾಡಿದ್ದಾರೆ.

ಇದನ್ನೂ ಓದಿ: ಗಭೂಮಿ, ಸಿನಿಮಾ ಕ್ಷೇತ್ರದಲ್ಲಿ ಮಿಂಚಿ, ಕನ್ನಡಿಗರ ಮನಗೆದ್ದ ಚಿಂದೋಡಿಲೀಲಾ
ಜೇಡರಬಲೆ ಮತ್ತು ಬಹದ್ದೂರ್ ‌ಗಂಡು ಚಿತ್ರಗಳಲ್ಲಿ Swim-Suit ತೊಟ್ಟ ಇವರು ಬೆಟ್ಟದಹುಲಿ ಸಿನಿಮಾದಲ್ಲಿ ಒದ್ದೆ ಬಟ್ಟೆಯ ಮೈಮಾಟ ಪ್ರದರ್ಶಿಸಿ, ಆಗಿನ ಕಾಲದ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ರಸಿಕ(ರ)ರತಿ! 1963ರಲ್ಲಿ ತೆರೆಕಂಡ ಜೇನುಗೂಡು ಕನ್ನಡ ಚಿತ್ರದ ಮೂಲಕ ಜಯಂತಿಯವರು ಚಂದನವನ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಮರುವರ್ಷ ರಾಜ್‌ಕುಮಾರ್ ಜತೆ ನಟಿಸಿದ ಚೊಚ್ಚಲ ಫಿಲಂ “ಚಂದವಳ್ಳಿಯತೋಟ” ಈಕೆಗೆ ಯಶಸ್ಸಿನ ಮಣೆ ಹಾಕಿತು. ಆ ನಂತರ ರಾಜಣ್ಣನ ಜತೆ 38 ಚಿತ್ರಗಳಲ್ಲಿ ನಟಿಸಿ ಡಾ.ರಾಜ್ ಎದುರು ನಟಿಸಿದ ನಾಯಕಿಯರ ಪೈಕಿ ದ್ವಿತೀಯ ಸ್ಥಾನ ಪಡೆದು ಮೆರೆದರು. ವರನಟನನ್ನು ಸಲುಗೆ ಪ್ರೀತಿ ವಿಶ್ವಾಸದಿಂದ ರಾಜ್ ಎಂದು ಕರೆಯುತ್ತಿದ್ದ ಕನ್ನಡ ಚಿತ್ರರಂಗದ ಏಕೈಕ ಹೀರೋಯಿನ್!

ರಾಜಕುಮಾರ್, ಕಲ್ಯಾಣಕುಮಾರ್, ಉದಯಕುಮಾರ್, ರಾಜೇಶ್, ಶ್ರೀನಾಥ್, ವಿಷ್ಣುವರ್ಧನ್, ಅಂಬರೀಷ್, ಅನಂತನಾಗ್, ಶಂಕರನಾಗ್ ಮುಂತಾದ ಕನ್ನಡದ ಬಹುತೇಕ ಎಲ್ಲ ಹೀರೋಗಳ ಚಿತ್ರದಲ್ಲಿ ನಟಿಸಿ ನೂತನ ದಾಖಲೆ ಸೃಷ್ಟಿಸಿದರು.

ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ನೆನಪಾಗಿ ಉಳಿದ ಹಿರಿಯ ನಟಿ ಲಕ್ಷ್ಮೀಬಾಯಿ… 
ಗೆಳತಿ, ಹೆಂಡತಿ, ಅಕ್ಕ,ತಂಗಿ, ತಾಯಿ ,ಅತ್ತೆ, ಎಲ್ಲ ಬಗೆಯ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಜನಪ್ರಿಯ ನಟಿಯಾದರು. ಪ್ರತಿವರ್ಷ10ಕ್ಕೂ ಹೆಚ್ಚಿನ ಚಿತ್ರದಲ್ಲಿ ಅಭಿನಯಿಸಿ ಹೆಸರುವಾಸಿಯಾದರು. ಪ್ರತಿಫಲವಾಗಿ ನಾಲ್ಕು ಬಾರಿ ಶ್ರೇಷ್ಠ ಅಭಿನಯಕ್ಕೆ, ಎರಡು ಸಲ ಅತ್ಯುತ್ತಮ ಪೋಷಕ ನಟನೆಗೆ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಲಭಿಸಿತ್ತು. 5 ಬೇರೆಬೇರೆ ರಾಜ್ಯಗಳ ಪ್ರಶಸ್ತಿ, 4 ಫಿಲಂಫ಼ೇರ್ ಪ್ರಶಸ್ತಿ, 2 ಬಾರಿ ರಾಷ್ಟ್ರ ಪ್ರಶಸ್ತಿ ಗಳಿಸಿದರು!

8 ಭಾಷೆಗಳ 500ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಕನ್ನಡದ ಏಕೈಕ ನಟಿ! 200ಕ್ಕೂ ಹೆಚ್ಚು ಕನ್ನಡ ಫಿಲಂ ಸೇರಿದಂತೆ ಹಿಂದಿ, ಮರಾಠಿ, ತೆಲುಗು, ತಮಿಳು, ಮಲಯಾಳಂ, ತುಳು ಚಿತ್ರಗಳಲ್ಲಿ ನಟಿಸಿ ಮನೆಮಾತಾದರು. 2016ರಲ್ಲಿ ಇಂಗ್ಲಿಷ್ ಭಾಷೆಯ ಟಿ.ವಿ.ಸೀರಿಯಲ್ 12ಎಪಿಸೋಡ್ಸ್ 195 ದೇಶಗಳಲ್ಲಿ ಟೆಲಿಕಾಸ್ಟ್ ಆಯ್ತು‌! ಇದಲ್ಲದೆ ತಮಿಳಿನ ವಸಂತಂ ಮತ್ತು  ಕನ್ನಡದ ಅಮೃತವರ್ಷಿಣಿ ಹಾಗೂ ಒಂದೇಗೂಡಿನಹಕ್ಕಿಗಳು ಎಂಬ ಕಿರುತೆರೆ ಧಾರಾವಾಹಿಗಳಲ್ಲಿ ಮನೋಜ್ಞವಾಗಿ ಅಭಿನಯಿಸುವ ಮೂಲಕ ಕೋಟ್ಯಂತರ ಜನರ ತನುಮನ ಸೂರೆಗೊಂಡರು.

ಇದನ್ನೂ ಓದಿ: ಚಂದನವನದಲ್ಲಿ ಮಿಂಚಿ ಮರೆಯಾದ ಹಿರಿಯ ನಟಿ ಕಮಲಾಬಾಯಿ
Updated ಹೀರೋಯಿನ್‌ಗೆ ಇರಬೇಕಾದ ಗುಣ ಲಕ್ಷಣ ಪ್ರತಿಭೆ ಸೌಂದರ್ಯ ಎಲ್ಲವು ಹೆಚ್ಚಾಗೇ ಇದ್ದ ಜಯಂತಿಯವರಿಗೆ, ಜಯಂತಿಯೇ ಸರಿಸಾಟಿ ಎಂದರೆ ಅತಿಶಯೋಕ್ತಿಯಲ್ಲ! 40 ವರ್ಷಕಾಲ ಜಯಂತಿ ಇದ್ದ ಚಿತ್ರಗಳಿಗೆ ಪ್ರೇಕ್ಷಕರು ಮುಗಿಬಿದ್ದು ಎಲ್ಲವಯಸ್ಸಿನ ಗಂಡಸರೂ ರೋಮಾಂಚನಗೊಳ್ಳುತ್ತಿದ್ದರು. ಇಷ್ಟಾದರೂ ದುರದೃಷ್ಟವಶಾತ್ ಕಣ್ಣೀರು ಚಿತ್ರವು ಕೇವಲ ಒಂದೇ ಒಂದು ಪ್ರದರ್ಶನ ಕಂಡು ಗಿನ್ನಿಸ್ ದಾಖಲೆ ಪುಸ್ತಕ ಸೇರಿತು..?!

ದಕ್ಷಿಣ ಭಾರತದ ಮೆಘಾ ಸ್ಟಾರ್‌ಗಳ ಜತೆ ಅಭಿನಯ… 1957ರಲ್ಲಿ ಬಿಡುಗಡೆಯಾದ “ರತಿನಿರ್ವೇದಂ” ತಮಿಳು ಚಿತ್ರದಲ್ಲಿ ನಟಿಸಿದಾಗ ಜಯಂತಿ ವಯಸ್ಸು ಕೇವಲ12ವರ್ಷ!ಕಾಲಿವುಡ್‌ನ ಎಂ.ಜಿ.ಆರ್. ಶಿವಾಜಿಗಣೇಶನ್, ಜೆಮಿನಿ ಗಣೇಶನ್, ಎಸ್ಸೆಸ್‌ ರಾಜೇಂದ್ರನ್, ಮುತ್ತುರಾಮನ್, ಜೈಶಂಕರ್, ಮುಂತಾದ ಸೂಪರ್ ಸ್ಟಾರ್ಸ್ ಜತೆಯಲ್ಲಿ ನಟಿಸಿದ ಚಿತ್ರಗಳು.. ಪಡಕೋಟಿ, ಮೊಗರಾಸಿ, ಇರುವರ್‌ ಉಳ್ಳಂ, ಕಾದಲ್‌ ಪಡುತ್ತಂಪಾಡು, ಕಾರ್ತಿಕದೀಪಂ, ಕಲೈಕೋವಿಲ್, ಅಣ್ಣಇಲ್ಲಂ, ವೀರಾಧಿವೀರನ್, ಕರ್ಣನ್, ಭಾಮಾವಿಜಯಂ, ಮುಂತಾದ ತಮಿಳು ಫಿಲಮ್‌ಗಳಲ್ಲಿ ಧೂಳೆಬ್ಬಿಸಿದರು.

ಎನ್.ಟಿ.ರಾಮರಾವ್, ಅಕ್ಕಿನೇನಿ ನಾಗೇಶ್ವರರಾವ್, ಕಾಂತರಾವ್, ಎಸ್.ವಿ. ರಂಗರಾವ್, ಕೃಷ್ಣ, ಮುಂತಾದ ಅತಿರಥ ಮಹಾರಥರ ಜತೆ ನೂರಾರು ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದ ಜಯಂತಿ ಟಾಲಿವುಡ್‌ನಲ್ಲಿ ಸಂಚಲನಮೂಡಿಸಿ ಹೊಸ ಇತಿಹಾಸ ಬರೆದರು!

ಇದನ್ನೂ ಓದಿ:ಚಂದನವನದಲ್ಲಿ ನೆನಪಾಗಿ ಉಳಿದ ಹಿರಿಯ ನಟಿ ಎಂ.ವಿ.ರಾಜಮ್ಮ… 
ಉದಾಹರಣೆಗೆ ಜಗದೇಕವೀರುನಿಕಥ, ಭಾರ್‌ಯಬರ್ತಲು, ಬೊಬ್ಬಿಲಿಯುದ್ಧಂ, ಅಗ್ಗಿಪಿಡುಗು, ಸುಮಂಗಲಿ, ರಹಸ್ಯಂ, ಭಕ್ತಪ್ರಹ್ಲಾದ, ಬಡಿಪಂತುಲು, ಕಲೆಕ್ಟರ್ ‌ಜಾನಕಿ, ಶಾರದಾ, ಸಂಸಾರಸಾಗರಂ, ಗಾಂಧಿಪುಟ್ಟಿನದೇಶಂ, ಬಂಗಾರುಬಾಬು, ದೇವದಾಸು, ಅಮ್ಮಮನಸು, ದೇವುಡುಚೇಸಿನಪೆಳ್ಳಿ, ಕುಲ ಗೌರವಂ, ರಾಮಯ್ಯತಂಡ್ರಿ, ಬೊಮ್ಮರಿಲ್ಲು, ಕುಮಾರರಾಜ, ಕಮಲಮ್ಮ, ಕಮಟಂ, ಅಂತುಲೇನಿವಿಂತಕಥಾ, ಕೊಂಡವೀಟಿ ಸಿಂಹಂ, ಅಗ್ನಿಪೂಲು, ಜಸ್ಟಿಸ್ಚೌಧ್ರಿ,  ಗರ್ಲ್‌ಫ಼್ರೆಂಡ್, ಮುಂತಾದ ಸಿನಿಮಾಗಳಲ್ಲಿ ನಟಿಸಿ ಅಪಾರಕೀರ್ತಿ ಗಳಿಸಿದರು.

ಮಲಯಾಳಂ ಚಿತ್ರಗಳಲ್ಲಿಯೂ ಅಭಿನಯ..  ಪ್ರೇಮ್‌ ನಜ಼ೀರ್ ಮತ್ತಿತರರ ಚಿತ್ರಗಳಲ್ಲಿ ನಟಿಸಿದ್ದರು ಪಲಟ್ಟುಕೋಮನ್, ಕಟ್ಟುಪೂಕ್ಕಳ್, ಲಕ್ಷಪ್ರಭು, ಕಳಿಯೋದಂ, ಕರುತಪೌರ್ಣಮಿ, ವಿಲಕ್ಕಪ್ಪೆಟ್ಟಕಣಿ ಮುಂತಾದ ಮಲಯಾಳಂ ಚಿತ್ರಗಳಲ್ಲಿ ನಟಿಸಿ ಮಾಲಿವುಡ್‌ನಲ್ಲೂ ನೂತನ ಚರಿತ್ರೆ ಬರೆದರು.

ಇದನ್ನೂ ಓದಿ: ಮೈಸೂರಿನ ನಟಿ  ಎಂ. ಜಯಶ್ರೀರವರ ಬಣ್ಣದ ಬದುಕಿನಾಚೆಗಿನ ಕಥೆ…
ಬಾಲಿವುಡ್ ನಲ್ಲೂ ಲ್ಲೂ ಮಿಂಚಿದರು.. ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲೂ ಕೆಲವು ಕಾಲ ಮಿಂಚಿದ ಕನ್ನಡದ ಹರಿಣಿ. ಬಾಲಿವುಡ್ ನಲ್ಲಿ ಅಭಿನಯಿಸಿದ ಸಿನಿಮಾಗಳ ಉದಾಹರಣೆ ಎಂದರೆ, ಲಾಲ್‌ ಬಾಂಗ್ಲಾ, ತೀನ್ ‌ಬಹುರಾಣಿಯ, ಗೂಂಡಾ, ತುಮ್ಸೆಅಚ್ಚಾಕೌನ್ ‌ಹೈ, ಮುಂತಾದ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಾಲಿವುಡ್‌ನ ಮೈಲಿಗಲ್ಲಾಗಿ ಉಳಿದರು! ಮಿಸ್‌ಲೀಲಾವತಿ, ಚಿಕ್ಕಮ್ಮ, ಶ್ರೀಕೃಷ್ಣದೇವರಾಯ ಚಿತ್ರದ ಪಟ್ಟದರಸಿ, ನಾಗರಹಾವು ಚಿತ್ರದ ಒನಕೆ ಓಬವ್ವ, ಎಡಕಲ್ಲುಗುಡ್ಡದಮೇಲೆ ಚಿತ್ರದ ಮಾಧವಿ ಮುಂತಾದ ಅನೇಕ ಪಾತ್ರಗಳ ಮೂಲಕ ಅಪ್ರತಿಮ ಅಭಿನಯ ನೀಡಿದರು.

ಭಾರತ ಚಿತ್ರರಂಗದಲ್ಲಿ ತಮ್ಮದೇ ವಿಶೇಷ ವೈಭವದ ಛಾಪು ಮೂಡಿಸಿದ್ದ ಕನ್ನಡತಿ ಮೆಘಾನಟಿ ಜಯಂತಿಗೆ ನಿಜ ಜೀವನದಲ್ಲಿ ಅಷ್ಟೇನೂ ಸುಖ ಶಾಂತಿ ನೆಮ್ಮದಿ ತೃಪ್ತಿ ಸಿಗಲಿಲ್ಲವಾದರೂ ಬದುಕಿರುವರೆಗೆ ನಗುನಗುತ್ತಾ ಎಲ್ಲರನ್ನು ನಗಿಸುತ್ತ ತಮ್ಮ ಸಾರ್ಥಕ ಬದುಕಿಗೆ ವಿದಾಯ ಹೇಳಿದರು.

ಇದನ್ನೂ ಓದಿ: ಕನ್ನಡದ ಪ್ರಪ್ರಥಮ ವಾಕ್ ಚಿತ್ರದ ಹೀರೋಯಿನ್ ತ್ರಿಪುರಾಂಭ…  
ದೇಶ ಕಂಡ ಅಪರೂಪದ ನಟಿ ಜಯಂತಿ ತಮಗೆ ದೊರೆತ ಪ್ರತಿಯೊಂದು ಪಾತ್ರಕ್ಕೂ ಜೀವಕಳೆ ತುಂಬುವ ಶಕ್ತಿ ಪಡೆದಿದ್ದರು. ಭಾರತೀಯ ಚಿತ್ರರಂಗದಲ್ಲಿ ಕನ್ನಡದ ಕಂಪನ್ನು ಹರಡಿದ ಕಲಾರತ್ನ ಸರಳ ಸಜ್ಜನಿಕೆಯ ಸುಂದರಿ ಮಹಾನ್ ಕಲಾವಿದೆ ಕನ್ನಡಿಗರ ಅಮರ ಅಭಿನೇತ್ರಿ ಅಭಿನಯ ಶಾರದೆ ಜಯಂತಿ ಚಿರಸ್ಮರಣೀಯ. !

admin
the authoradmin

2 Comments

  • ಅಭಿನಯ ಶಾರದೆ ಜಯಂತಿ ರವರಿಗೆ ಜಯಂತಿಯೇ ಸಾಟಿ ಎಂಬುದು ಎಷ್ಟು ಸತ್ಯವೋ ಅಷ್ಟೇ ಸತ್ಯ, ನೂರಾರು ನಟನಟಿಯರ ಚಂದನವನ ಚರಿತ್ರೆಯನ್ನು ಅಪ್ರತಿಮ ಶೈಲಿಯಲ್ಲಿ ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಸರಳ ಕನ್ನಡದಲ್ಲಿ ಬರೆದು ಕನ್ನಡ ಕುಲಕೋಟಿಯ ತನುಮನ ಗೆದ್ದಿರುವ ಕುಮಾರಕವಿಯವರಿಗೆ
    ಬಿ.ಎನ್.ನಟರಾಜರವರೇ ಸಾಟಿ ಎಂಬುದು ಖಂಡಿತ ಉತ್ಪ್ರೇಕ್ಷೆಯಲ್ಲ,,,
    ಯಾರೇನೇ ಹೇಳಲಿ ಬಿಡಲಿ, ಕನ್ನಡ ಚಿತ್ರರಂಗದ ನೂರಾರು ಕಲಾವಿದರ ಬಗ್ಗೆ ಸಂಕ್ಷಿಪ್ತವಾಗಿ ಆದರೆ ಪರಿಪೂರ್ಣ ಮಾಹಿತಿಯೊಡನೆ ಬರೆಯುವ ಸಾಹಿತ್ಯಕಲೆ ಸುಲಭದ ಮಾತಲ್ಲ.ತಾಯಿ ಸರಸ್ವತಿಯ ಸಂಪೂರ್ಣ ಕೃಪೆಯಿಂದ ಮಾತ್ರ ಸಾಧ್ಯ.
    ಇವರ ಪ್ರತಿಯೊಂದು ಲೇಖನವೂ ಸಂಗ್ರಹಯೋಗ್ಯ ಸಾಹಿತ್ಯ ಸಂಪತ್ತು..!! ರಾಜ್ಯ ಪ್ರಶಸ್ತಿ ವಿಜೇತ ನಾಟಕದಮೇಷ್ಟ್ರು ಗೋವಿಂದಯ್ಯ, ತುಮಕೂರು, ಹಾಲಿವಾಸ ರಾಜಾಜಿನಗರ 6ನೇ ಬ್ಲಾಕ್, ಬೆಂಗಳೂರು

  • ಅಭಿನಯ ಶಾರದೆ ಜಯಂತಿ ರವರಿಗೆ ಜಯಂತಿಯೇ ಸಾಟಿ ಎಂಬುದು ಎಷ್ಟು ಸತ್ಯವೋ ಅಷ್ಟೇ ಸತ್ಯ, ನೂರಾರು ನಟನಟಿಯರ ಚಂದನವನ ಚರಿತ್ರೆಯನ್ನು ಅಪ್ರತಿಮ ಶೈಲಿಯಲ್ಲಿ ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಸರಳ ಕನ್ನಡದಲ್ಲಿ ಬರೆದು ಕನ್ನಡ ಕುಲಕೋಟಿಯ ತನುಮನ ಗೆದ್ದಿರುವ ಕುಮಾರಕವಿಯವರಿಗೆ
    ಬಿ.ಎನ್.ನಟರಾಜರವರೇ ಸಾಟಿ ಎಂಬುದು ಖಂಡಿತ ಉತ್ಪ್ರೇಕ್ಷೆಯಲ್ಲ,,, ಯಾರೇನೇ ಹೇಳಲಿ ಬಿಡಲಿ, ಕನ್ನಡ ಚಿತ್ರರಂಗದ ನೂರಾರು ಕಲಾವಿದರ ಬಗ್ಗೆ ಸಂಕ್ಷಿಪ್ತವಾಗಿ ಆದರೆ ಪರಿಪೂರ್ಣ ಮಾಹಿತಿಯೊಡನೆ ಬರೆಯುವ ಸಾಹಿತ್ಯಕಲೆ ಸುಲಭದ ಮಾತಲ್ಲ.ತಾಯಿ ಸರಸ್ವತಿಯ ಸಂಪೂರ್ಣ ಕೃಪೆಯಿಂದ ಮಾತ್ರ ಸಾಧ್ಯ. ಇವರ ಪ್ರತಿಯೊಂದು ಲೇಖನವೂ ಸಂಗ್ರಹಯೋಗ್ಯ ಸಾಹಿತ್ಯ ಸಂಪತ್ತು..!! ರಾಜ್ಯ ಪ್ರಶಸ್ತಿ ವಿಜೇತ ನಾಟಕದಮೇಷ್ಟ್ರು ಗೋವಿಂದಯ್ಯ, ತುಮಕೂರು, ಹಾಲಿವಾಸ ರಾಜಾಜಿನಗರ 6ನೇ ಬ್ಲಾಕ್, ಬೆಂಗಳೂರು

Leave a Reply

Translate to any language you want