ಮೈಸೂರು: ಗಂಡ, ಮಕ್ಕಳು ಸಂಸಾರವೆಂದು ಖುಷಿ, ಖುಷಿಯಾಗಿ ಬದುಕಿ ಬಾಳಬೇಕಾದ ವಯಸ್ಸಿನಲ್ಲಿ ಮಹಿಳೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಮೇಲ್ನೋಟಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಗೋಚರಿಸುತ್ತಿದ್ದರೂ ಸಾವಿನ ಸುತ್ತಲೂ ಅನುಮಾನ ಸುಳಿದಾಡುತ್ತಿದೆ.
ಮೈಸೂರಿನ ಸರಸ್ವತಿಪುರಂನ ಜವರೇಗೌಡ ಪಾರ್ಕ್ ಸಮೀಪದ ನಿವಾಸದಲ್ಲಿ ನಡೆದಿರುವ ಈ ಘಟನೆ ಸುತ್ತಮುತ್ತಲಿನವರ ನಿದ್ದೆಗೆಡಿಸಿದೆ. ಅಷ್ಟೇ ಅಲ್ಲದೆ ಹೆತ್ತವರ ಹೊಟ್ಟೆಯುರಿಸಿದೆ. ಅಯ್ಯೋ ಪಾಪ ಹೀಗಾಗಬಾರದಿತ್ತು ಎಂದು ಸುತ್ತಮುತ್ತಲಿನವರು ಮಾತನಾಡಿಕೊಳ್ಳುತ್ತಿದ್ದರೆ, ಹೆತ್ತವರು ಮಗಳನ್ನು ಕಳೆದುಕೊಂಡ ದುಃಖದಲ್ಲಿ ಗೋಳಾಡುತ್ತಿದ್ದಾರೆ.
ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ ನತದೃಷ್ಟ ಮಹಿಳೆಯ ಹೆಸರು ಸಂಧ್ಯಾ (30). ಈಕೆ ಮೂಲತಃ ಹುಣಸೂರು ಪುರಸಭೆ ಮಾಜಿ ಅಧ್ಯಕ್ಷೆ ಗೀತಾ ನಿಂಗರಾಜು ಅವರ ಪುತ್ರಿ. ಈಕೆಯನ್ನು ಟಿ.ಕೆ ಲೇಔಟ್‌ನ ಮಹದೇವ್ ಪುತ್ರ ಅಕ್ಷಯ್ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ಇವರು ಸರಸ್ವತಿಪುರಂನ ಜವರೇಗೌಡ ಪಾರ್ಕ್ ಸಮೀಪದ ಮನೆಯಲ್ಲಿ ವಾಸವಿದ್ದರು.

ಇವರ ಸಂಸಾರದಲ್ಲಿ ಅದೇನು ನಡೆದಿತ್ತೋ ಗೊತ್ತಿಲ್ಲ. ಇದೀಗ ಸಂಧ್ಯಾ ಶವವಾಗಿ ಗೋಚರಿಸಿದ್ದಾಳೆ. ಆಕೆಯ ಪೋಷಕರು ಅಳಿಯ ಅಕ್ಷಯ್ ವಿರುದ್ಧ ಆರೋಪ ಮಾಡುತ್ತಿದ್ದು, ಅವರಿಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಮೃತ ಸಂಧ್ಯಾ ಅವರ ಪೋಷಕರು ಕೊಲೆ ಆರೋಪ ಮಾಡುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಆಕೆಯೇ ಪ್ರಾಣಕಳೆದುಕೊಂಡಳಾ? ಕೊಲೆ ಮಾಡಲಾಯಿತೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಪೊಲೀಸರ ತನಿಖೆಯಿಂದ ಉತ್ತರ ಸಿಗಬೇಕಾಗಿದೆ… ಆದರೂ ಯಾರಿಗೂ ಇಂತಹ ಪರಿಸ್ಥಿತಿ ಬಾರದಿರಲಿ.
ಕೊಡಗಿನ ಹೋಂಸ್ಟೇನಲ್ಲಿ ಗ್ಯಾಸ್ ಗೀಸರ್ ಸೋರಿಕೆಗೆ ಮೈಸೂರು ಯುವತಿ ಬಲಿ… ಆಗಿದ್ದೇನು?
ಚೆಕ್ ಪೋಸ್ಟ್‌ನಲ್ಲಿ ಸಿಕ್ತು ಗಾಂಜಾ…ಯುವತಿಯರನ್ನು ದಂಧೆಗೆ ದೂಡಿದ್ದ ಮಹಿಳೆ ಅರೆಸ್ಟ್








