CrimeLatest

ಕೊಡಗಿನ ಹೋಂಸ್ಟೇನಲ್ಲಿ ಗ್ಯಾಸ್ ಗೀಸರ್ ಸೋರಿಕೆಗೆ ಮೈಸೂರು ಯುವತಿ ಬಲಿ…

ಮಡಿಕೇರಿ: ಕೊಡಗಿನಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಹೋಂಸ್ಟೇ ಗಳಲ್ಲಿ ಇತ್ತೀಚೆಗೆ ಒಂದಲ್ಲ ರೀತಿಯ ಅವಘಡಗಳು ನಡೆಯುತ್ತಿದ್ದರೂ ಎಚ್ಚೆತ್ತುಕೊಳ್ಳದ ಕಾರಣದಿಂದಾಗಿ ಇದೀಗ ಮತ್ತೊಂದು ಸಾವಿನ ಘಟನೆ ನಡೆಯುವಂತಾಗಿದೆ. ಕೊಡಗಿನ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಲು ಬಂದ ಯುವತಿ ಹೋಂಸ್ಟೇ ಮಾಲೀಕರ ಬೇಜವಬ್ದಾರಿಯಿಂದಾಗಿ ಸಾವಿಗೆ ಶರಣಾಗ ಬೇಕಾದ ದುರಂತ ಒದಗಿ ಬಂದಿದೆ.

ಗ್ಯಾಸ್ ಗೀಸರ್ ಬಳಸುವವರೆಲ್ಲರಿಗೂ ಗೊತ್ತಿರುವ ವಿಚಾರವೇನೆಂದರೆ ಬಾತ್ ರೂಂ ಗಾಳಿಯಾಡುವಂತಿರಬೇಕು. ಕಿಟಿಕಿಗಳಿರಬೇಕು. ಆದರೆ ಬಾತ್ ರೂಂನಲ್ಲಿ ಕಿಟಿಕಿಯಿಲ್ಲದ ಕಾರಣದಿಂದಾಗಿ ಸ್ನಾನಕ್ಕೆಂದು ಹೋದ ಯುವತಿ ಗ್ಯಾಸ್ ಗೀಸರ್ ಸೋರಿಕೆ ಆಗಿದ್ದನ್ನು ಅರಿಯದೆ ಉಸಿರು ಗಟ್ಟಿ ಸಾವನ್ನಪ್ಪಿದ್ದಾಳೆ.

ಮೈಸೂರಿನ ಯರಗನಹಳ್ಳಿಯ ಪಾಪಣ್ಣ ಬಡಾವಣೆಯ ನಿವಾಸಿ ಜಗನ್ನಾಥ್ ಹಾಗೂ ರೇಣುಕಾ ದಂಪತಿಯ ಪುತ್ರಿ ವಿನೂತ(27) ಮೃತ ದುರ್ದೈವಿ. ಈಕೆ ಕೊಡಗಿಗೆ ತೆರಳಿದ್ದು ಸೋಮವಾರಪೇಟೆಯ ಈಕೆ ಸೋಮವಾರಪೇಟೆಯ ಚೌಡ್ಲು ಗ್ರಾಮದ ಹೋಂಸ್ಟೇ ವೊಂದರಲ್ಲಿ  ತಂಗಿದ್ದಳು ಭಾನುವಾರ ಬೆಳಿಗ್ಗೆ ಸಂಭವಿಸಿದ ಗ್ಯಾಸ್ ಸೋರಿಕೆಯಿಂದ ಆಕೆ ಮೃತಪಟ್ಟಿದ್ದಾಳೆ.

ಬಾತ್ ರೂಂಗೆ ಸ್ನಾನಕ್ಕೆ ಹೋದವಳು ಬಾರದೆಯಿದ್ದಾಗ ಹೋಗಿ ನೋಡಿದಾಗ ಆಕೆ ಮೃತಪಟ್ಟಿರುವುದು ಗೊತ್ತಾಗಿದೆ.  ಸಾವಿಗೆ ಗ್ಯಾಸ್ ಗೀಸರ್ ಸೋರಿಕೆ ಕಾರಣವಾಗಿದೆ. ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ… ಸಾವಿನ ಸುತ್ತ ಅನುಮಾನ… ಕೊಲೆನಾ?

admin
the authoradmin

Leave a Reply