CinemaLatest

ಎಡಕಲ್ಲು ಗುಡ್ಡದ ಮೇಲಿನ ನಂಜುಂಡನಾಗಿ ಮಿಂಚಿದ ನಟ ಚಂದ್ರಶೇಖರ್…. ಈಗ ನೆನಪು!

ಎಡಕಲ್ಲು ಗುಡ್ಡದ ಮೇಲೆ’ಸಿನಿಮಾ ನೋಡಿದವರಿಗೆ ಅದರಲ್ಲಿ ಬುಲೆಟ್ ಮೇಲೆ ಜಯಂತಿಯೊಂದಿಗೆ ಬುಲೆಟ್ ನಲ್ಲಿ ಜಾಲಿ ರೈಡ್ ನ  ನಂಜುಂಡನ ಪಾತ್ರ ಕಣ್ಣಿಗೆ ಬಾರದಿರದು.. ಆ ಸಿನಿಮಾದ ಮೂಲಕ ಕನ್ನಡದ ಸಿನಿಮಾ ಪ್ರಿಯರ ಮನಸ್ಸಿನಲ್ಲಿ ನೆಲೆಸಿದ ನಟ ಚಂದ್ರಶೇಖರ್ ಇವತ್ತು ನಮ್ಮೊಂದಿಗಿಲ್ಲ.. ಆದರೆ ಅವರ ನಟನೆಯ ಚಿತ್ರಗಳು ಇವತ್ತಿಗೂ ಗಮನ ಸೆಳೆಯುತ್ತಿವೆ.. ಪ್ರತಿಭಾವಂತ ನಟನ ಕುರಿತಂತೆ ಹಿರಿಯಬರಹಗಾರರಾದ ಕುಮಾರಕವಿ ನಟರಾಜ್ ಅವರು ಬರಹದ ಮೂಲಕ ನೆನಪು ಮಾಡಿಕೊಂಡಿದ್ದಾರೆ.. ಓದುತ್ತಾ ಹೋದಂತೆ ನಟ ಚಂದ್ರಶೇಖರ್ ನಮ್ಮ ಕಣ್ಣಮುಂದೆ ಬಂದಂತೆ ಭಾಸವಾಗುತ್ತಾರೆ..

ಇದನ್ನೂ ಓದಿ: ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಗುಬ್ಬಿವೀರಣ್ಣ

ಚಂದ್ರಶೇಖರ್ 1955ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜನಿಸಿದರು. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನೂ, ಕೆನಡಾ ದೇಶದ ಹೈಟೆಕ್ ವಿಶ್ವವಿದ್ಯಾನಿಲಯದಿಂದ ಎಂ.ಟೆಕ್. ಪದವಿಯನ್ನೂ ಪಡೆದರು. ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದಾಗ ಪೋಷಕರೊಡನೆ ಪಾಲ್ಗೊಂಡಿದ್ದ ಬಂಧುಗಳ ವಿವಾಹ ಕಾರ್ಯಕ್ರಮ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಂದಿನ ಖ್ಯಾತ ನಿರ್ದೇಶಕ ಎನ್.ಲಕ್ಷ್ಮೀನಾರಾಯಣ್ ಕಣ್ಣಿಗೆಬಿದ್ದ ಈ ಹುಡುಗನನ್ನು ಬಾಲನಟನಾಗಿ ಉಪಯೋಗಿಸಲು ನಿರ್ಧರಿಸಿದರು.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಚೊಚ್ಚಲ ಹೀರೊ ಎಂ.ವಿ.ಸುಬ್ಬಯ್ಯನಾಯ್ಡು

ಇದೇ ಸಮಯದಲ್ಲಿ ಅಶ್ವಥ್ ಮತ್ತು ಪಂಡರೀಬಾಯಿ ಅಭಿನಯದಲ್ಲಿ ಮಕ್ಕಳ ಸಿನಿಮಾ ತಯಾರಿಸಲು ಅಣಿಮಾಡಿಕೊಂಡಿದ್ದ ಮತ್ತೊಬ್ಬ ಖ್ಯಾತ ನಟ, ನಿರ್ಮಾಪಕ, ನಿರ್ದೇಶಕ ಆರ್.ನಾಗೇಂದ್ರರಾವ್ ನಿರ್ದೇಶನದ 1969ರಲ್ಲಿ ತೆರೆಕಂಡ ’ನಮ್ಮ ಮಕ್ಕಳು’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ. ಈ ಚಿತ್ರದ ನಿರ್ಮಾಪಕಿ ಖ್ಯಾತ ನಟಿ ಹರಿಣಿ. ಕಡೆಗೂ ಅತ್ಯುತ್ತಮ ಬಾಲನಟ ಎಂದು ರಾಷ್ಟ್ರಪ್ರಶಸ್ತಿ ಹಾಗೂ ರಾಜ್ಯಪ್ರಶಸ್ತಿ ಗಳಿಸಿದ ಚಂದ್ರಶೇಖರ್ ತದನಂತರ ಎನ್. ಲಕ್ಷ್ಮೀನಾರಾಯಣ್ ನಿರ್ದೇಶನದಲ್ಲಿ ತೆರೆಕಂಡು ಅಂತಾರಾಷ್ಟ್ರೀಯ ಪ್ರಶಸ್ತಿ ಗಳಿಸಿದ “ಮುಕ್ತಿ” ಚಿತ್ರದಲ್ಲಿ ನಟಿಸಿ ಎಲ್ಲರ ಮೆಚ್ಚುಗೆ ಪಡೆದರು.

ಇದಾದ ಕೆಲವೇ ತಿಂಗಳ ನಂತರ ಎಸ್.ಎಲ್. ಭೈರಪ್ಪನವರ ಕಾದಂಬರಿ ಆಧಾರಿತ ಗಿರೀಶಕಾರ್ನಾಡ್, ಬಿ.ವಿ.ಕಾರಂತ್  ಜೋಡಿ ನಿರ್ದೇಶನದ ’ವಂಶವೃಕ್ಷ’ ಚಿತ್ರದಲ್ಲಿ ಚೀನೀ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿ ಪತ್ರಿಕಾಪ್ರಶಂಸೆ, ರಾಷ್ಟ್ರಪ್ರಶಸ್ತಿ, ಅಂತರ್‌ ರಾಷ್ಟ್ರೀಯ ಮನ್ನಣೆ ದೊರಕಿಸಿಕೊಂಡರು. ಅದೃಷ್ಟ ಹುಡುಕಿಬಂದಂತಾಗಿ ಭಾರತೀಸುತ ಕಾದಂಬರಿ ಆಧಾರಿತ ’ಎಡಕಲ್ಲು ಗುಡ್ಡದ ಮೇಲೆ’ ಪುಟ್ಟಣ್ಣಕಣಗಾಲ್ ನಿರ್ದೇಶನದ ಚಿತ್ರದಲ್ಲಿ ನಂಜುಂಡನ ಪಾತ್ರ ನಿರ್ವಹಿಸಿ ಜನಮನ್ನಣೆ ಗಳಿಸಿದರು.

ಇದನ್ನೂ ಓದಿ: ನಟನೆಯಿಂದ ನಿಬ್ಬೆರಗಾಗಿಸಿದ್ದ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ..

ಈ ಚಿತ್ರವೂ ಸಹ ರಾಜ್ಯ ಪ್ರಶಸ್ತಿ ಗಳಿಸಿದ್ದು ಕಾಕತಾಳೀಯ ಎನಿಸಿತ್ತು. ಕಾಲಕ್ರಮೇಣ ಕೆನಡಾ ಚಂದ್ರು ಹೆಸರಿಗಿಂತಲೂ ಹೆಚ್ಚಾಗಿ ಎಡಕಲ್ಲುಗುಡ್ಡದ ನಂಜುಂಡನಾಗೇ ಜನಪ್ರಿಯತೆ ಗಳಿಸಿದ್ದು ಈತನ ಸಿನಿಜೀವನದ ಟರ್ನಿಂಗ್ ಪಾಯಿಂಟ್. ಇಲ್ಲಿಂದ ಮುನ್ನೆಲೆಗೆ ಬಂದ ಇವರು ಡಾ.ರಾಜ್ ಮತ್ತು ಆರತಿ ನಟಿಸಿದ ಬ್ಲಾಕ್ ಬಸ್ಟರ್ ಕಲರ್ ಚಿತ್ರ “ರಾಜ ನನ್ನ ರಾಜ” ಸೇರಿದಂತೆ ಸತತ 25 ಸಿನಿಮದಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ತಳವೂರಿದರು.

ಇದನ್ನೂ ಓದಿ: ಸಕಲಕಲಾವಲ್ಲಭ ಅಚ್ಚಕನ್ನಡಿಗ ಹೊನ್ನಪ್ಪ ಭಾಗವತರ್

1979ರಲ್ಲಿ ತೆರೆಕಂಡ ’ಕಮಲ’ ಫಿಲಂಗೆ ಚಂದ್ರುರವರೇ ಛಾಯಾಗ್ರಹಕನಾಗಿ ಸಮರ್ಥ ಕಾರ್ಯ ನಿರ್ವಹಿಸಿ ಶಹಬ್ಬಾಸ್ ಗಿರಿ ಪಡೆದರು. ಒಂದೆರಡು ಚಿತ್ರಗಳಿಗೆ ಪಾಲುದಾರನಾಗಿಯೂ ಸಹನಿರ್ಮಾಪಕ ಆಗಿಯೂ ಕೊಡುಗೆ ನೀಡಿದರು. ಕೆನಡಾ ದೇಶದ ಪ್ರತಿಷ್ಠಿತ ಎಂ.ಎನ್.ಸಿ. ಕಂಪನಿಯಲ್ಲಿ ಅಧಿಕಾರಿಯಾಗಿ ಹತ್ತಾರು ವರ್ಷ ಸೇವೆ ಸಲ್ಲಿಸಬೇಕಾಗಿದ್ದ ಇವರು ಚಂದನವನ ಬಣ್ಣದ ಲೋಕಕ್ಕೆ ಮಾರುಹೋಗಿ ಅದೆಲ್ಲವನ್ನು ಅರ್ಧಕ್ಕೆ ಕೈ ಬಿಟ್ಟು, 1970-80-90ರ ದಶಕದಲ್ಲಿ ಸಿಕ್ಕ ಕೆಲವೇ ಕೆಲವು ಅವಕಾಶವನ್ನು ಸದುಪಯೋಗ ಪಡಿಸಿಕೊಂಡರು. ಕೇವಲ ಸಂಭಾವನೆಗಾಗಿ ಮಾತ್ರ ನಟಿಸದೆ ಫ್ಯಾಶನ್ ಗಾಗಿ ನಟಿಸಿದ ಕ್ರೇಜ಼್ ಸ್ಟಾರ್.

ಇದನ್ನೂ ಓದಿ: ಭಾರತದ ಚಿತ್ರರಂಗದಲ್ಲಿ ಅಚ್ಚಳಿಯದ ಹೆಸರು ಬಿ.ಆರ್.ಪಂತುಲು..

2010ರವರೆಗೆ ಉದ್ಯಮ, ಚಿತ್ರೋದ್ಯಮ ಎರಡರಲ್ಲೂ ಸಕ್ರಿಯವಾಗಿ ಭಾಗವಹಿಸಿ ವೃತ್ತಿ, ಪ್ರವೃತ್ತಿ ಎರಡನ್ನೂ ಸರಿದೂಗಿಸಿಕೊಂಡ ಸಮಚಿತ್ತ ಸ್ವಭಾವವುಳ್ಳ ಐಶಾರಾಮಿ ಜೀವನದ ಶೋಕಿಲಾಲ. “ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯಿತು” ನಾಣ್ಣುಡಿಯಂತೆ, ಬಹುಕಾಲ ಉತ್ತರ ಅಮೆರಿಕ ಖಂಡದ ಕೆನಡ ದೇಶದ ಪ್ರಜೆಯಾಗಿ ನೆಲೆಸಿದ್ದ ಇವರನ್ನು ಕೆನಡಾ ಚಂದ್ರು ಎಂದೂ ಸಹ ಕರೆಯಲಾಗುತ್ತಿತ್ತು. ಇದ್ದಕ್ಕಿದ್ದಂತೆ ದಿನಾಂಕ 28.1.2018 ರಂದು ತೀವ್ರ ಹೃದಯಾಘಾತಕ್ಕೆ ಒಳಗಾಗಿ ತಮ್ಮ 63ನೇ ವಯಸ್ಸಲ್ಲಿ ಕೆನಡ ದೇಶದಲ್ಲಿಯೇ ನಿಧನರಾದರು. ಕನ್ನಡಿಗರ ಅಚ್ಚುಮೆಚ್ಚಿನ ಅಚ್ಚಕನ್ನಡದ ಸ್ವಚ್ಚಮನಸ್ಸಿನ ನಂಜುಂಡನ ನೆನಪು ಮಾತ್ರ ಅಜರಾಮರ.

ಇದನ್ನೂ ಓದಿ: ಕನ್ನಡ ಚಿತ್ರರಂಗ ಎಂದಿಗೂ ಮರೆಯದ ಜಿ.ವಿ.ಅಯ್ಯರ್…

ಚಂದ್ರಶೇಖರ್ ನಟಿಸಿದ ಫಿಲಂಸ್ ಹೀಗಿದೆ..  ಭಲೇಭಾಸ್ಕರ, ಭಾಗೀರಥಿ, ಉತ್ತರದಕ್ಷಿಣ, ಜಾತಕರತ್ನ ಗುಂಡಾಜೋಯಿಸ, ಯಾರಸಾಕ್ಷಿ,  ಭಲೇ ಅದೃಷ್ಟವೋ ಅದೃಷ್ಟ, ಸುಭದ್ರಕಲ್ಯಾಣ, ಬಾಳಪಂಜರ, ಬಾಂಧವ್ಯ, ಒಂದುಹೆಣ್ಣಿನಕಥೆ, ಸಿಐಡಿ-72, ಮರೆಯದದೀಪಾವಳಿ, ಬೆಸುಗೆ, ಜೀವನಜೋಕಾಲಿ, ಬೀಸಿದಬಲೆ, ಫೀನಿಕ್ಸ್, ಭಾರತರತ್ನ, ಶನಿಪ್ರಭಾವ, ಸಂಪತ್ತಿಗೆಸವಾಲ್, ಅಪರೂಪದಅತಿಥಿಗಳು, ಕಾಲೇಜುರಂಗ, ಹೇಮರೆಡ್ಡಿಮಲ್ಲಮ್ಮ, ಬೆಳುವಲದ ಮಡಿಲಲ್ಲಿ, ಚಾಮುಂಡೇಶ್ವರಿ ಮಹಿಮೆ, ಗಲಾಟೆ ಸಂಸಾರ, ದೇವರದುಡ್ಡು, ಹಂಸಗೀತೆ, ಕನಸುನನಸು,

ಇದನ್ನೂ ಓದಿ: ಬಾಲಿವುಡ್ ನಲ್ಲಿ ಕನ್ನಡಬಾವುಟ ಹಾರಿಸಿದ್ದ ಆರ್.ನಾಗೇಂದ್ರರಾವ್…

ಒಂದೇ ರೂಪ ಎರಡು ಗುಣ, ವಜ್ರದ ಜಲಪಾತ, ಬೆಂಕಿ ಬಿರುಗಾಳಿ, ದೇವದಾಸಿ, ಶಂಕರಗುರು, ಚಿತೆಗೂಚಿಂತೆ, ಪ್ರೇಮಕಾಮ, ಕೆಂಪುಹೋರಿ, ಕಪ್ಪುಕೊಳ, ಭೂಲೋಕದಲ್ಲಿಯಮರಾಜ, ಗುರುಸಾರ್ವಭೌಮ ಶ್ರೀರಾಘವೇಂದ್ರ ಕರುಣೆ, ಬಿಳಿಗಿರಿಯಬನದಲ್ಲಿ, ಅಂದದ ಅರಮನೆ, ರುದ್ರಿ, ಸುಬ್ಬಿಸುಬ್ಬಕ್ಕ ಸುವ್ವಲಾಲಿ, ಚೆಲ್ಲಿದರಕ್ತ, ಸ್ವರ್ಣಮಹಲ್ ರಹಸ್ಯ, ಮರ್ಯಾದೆಮಹಲು, ಚಲಿಸದಸಾಗರ, ಅವಳಅಂತರಂಗ, ಮುನಿ, ಬೈತಾರೆಬೈತಾರೆ, ಪೂರ್ವಾಪರ, ಒಡೆದಹಾಲು, ನಾಗರಮಹಿಮೆ, ಗಂಡಭೇರುಂಡ, ಅಪರಂಜಿ, ದೇವಾಲಯ, ಅವಳೆನನ್ನಗೆಳತಿ, ಅಮಾನುಷ, ಸಿದ್ಧು, ಓಕೆಸರಓಕೆ, ರಾಜುಕನ್ನಡಮೀಡಿಯಂ, 3ಗಂಟೆ 30ದಿನ 30ಸೆಕೆಂಡ್, ಮುಂತಾದವು

ಇದನ್ನೂ ಓದಿ: ರಿಯಲ್ ಹೀರೋ ಮೈಸೂರಿನ ಕೆಂಪರಾಜ ಅರಸು… 

admin
the authoradmin

Leave a Reply