LatestMysore

ಕಪ್ಪಡಿ ಬಳಿ ಸೇತುವೆ ನಿರ್ಮಾಣದ ಕಾಮಗಾರಿ ಸ್ಥಳಪರಿಶೀಲಿಸಿದ ಶಾಸಕ ಡಿ.ರವಿಶಂಕರ್

ಕೆ.ಆರ್.ನಗರ(ಜಿಟೆಕ್ ಶಂಕರ್): ತಾಲೂಕಿನ ಕಪ್ಪಡಿ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡುತ್ತಿರುವ ಸ್ಥಳ ಮತ್ತು ಸಂಪರ್ಕ ರಸ್ತೆ ಹಾದು ಹೋಗುವ ಜಮೀನುಗಳನ್ನು ಶಾಸಕ ಡಿ.ರವಿಶಂಕರ್ ಪರಿಶೀಲನೆ ನಡೆಸಿದರು.

ಕೆಆರ್‌ಡಿಸಿಎಲ್ ಅಧಿಕಾರಿಗಳು ಮತ್ತು ಸ್ಥಳೀಯರೊಂದಿಗೆ ಪರಿಶೀಲನೆ ನಡೆಸಿ ಸೇತುವೆ ನಿರ್ಮಾಣದ ಸಂಬಂಧ ಹಲವು ಸಲಹೆ ಮತ್ತು ಸೂಚನೆಗಳನ್ನು ನೀಡಿದ ಅವರು ರಸ್ತೆಗೆ ಜಮೀನು ನೀಡುವ ಮಾಲೀಕರ ಜತೆಯೂ ಮಾತುಕತೆ ನಡೆಸಿದರು.

ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು 25ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಸೇತುವೆ ಕಾಮಗಾರಿಗೆ ಆರು ತಿಂಗಳ ಹಿಂದೆ ಕೆ.ಆರ್.ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದಿನ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ಚಾಲನೆ ನೀಡಿದ್ದರೂ ತಾಂತ್ರಿಕ ಕಾರಣಗಳಿಂದ ಕಾಮಗಾರಿ ಆರಂಭಿಸುವುದು ವಿಳಂಬವಾಗಿತ್ತು ಎಂದು ತಿಳಿಸಿದರು.

ಈಗ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಸಂಪರ್ಕ ರಸ್ತೆಗೆ ಅವಶ್ಯವಿರುವ ಸ್ಥಳವನ್ನು ಗುರುತಿಸಿ ಶೀಘ್ರದಲ್ಲಿಯೇ ಸೇತುವೆ ಮತ್ತು ರಸ್ತೆ ಕಾಮಗಾರಿಯನ್ನು ಆರಂಭಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ರೈತರೊಂದಿಗೆ ಶಾಸಕರು ಮಾತುಕತೆ ನಡೆಸಿದಾಗ ಹಾಜರಿದ್ದ ಗಂಧನಹಳ್ಳಿ ಗ್ರಾಮಸ್ಥರು ಇನ್ನೊಂದು ವಾರದೊಳಗೆ ಕುಳಿತು ಮಾತನಾಡಿ ಸೇತುವೆ ಸಂಪರ್ಕ ರಸ್ತೆಗೆ ನಮ್ಮ ಜಮೀನುಗಳನ್ನು ನೀಡುವ ಬಗ್ಗೆ ಒಮ್ಮತಕ್ಕೆ ಬರುತ್ತೇವೆ ಎಂದು ಒಪ್ಪಿಗೆ ನೀಡಿದರು.

ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ಕೆಆರ್‌ಡಿಸಿಎಲ್ ಅಧೀಕ್ಷಕ ಅಭಿಯಂತರ ಪ್ರಮೀತ್, ಕಾರ್ಯಪಾಲಕ ಅಭಿಯಂತರ ಎಸ್.ಬಿ.ರಾಜು, ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ಜಿ.ಸಿದ್ದೇಶ್ವರ ಪ್ರಸಾದ್, ಎಡಿಎಲ್‌ಆರ್ ಶ್ರೀಕಂಠಶರ್ಮ, ಗಂಧನಹಳ್ಳಿ ಗ್ರಾಮದ ಯಜಮಾನ ರಘು, ಎಪಿಎಂಸಿ ಮಾಜಿ ಉಪಾಧ್ಯಕ್ಷ ಹೆಚ್.ಹೆಚ್.ನಾಗೇಂದ್ರ

ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಜಿ.ಎಸ್.ವೆಂಕಟೇಶ್, ವೈ.ಎಸ್.ಜಯಂತ್, ಕಾಂಗ್ರೆಸ್ ಮುಖಂಡರಾದ ಪ್ರೇಮಶಿವಣ್ಣ, ಗಂಧನಹಳ್ಳಿದೇವೇಂದ್ರ, ಗಾಂಧಿಶಿವಣ್ಣ, ಬೈಪಾಸ್‌ಸೋಮಣ್ಣ, ರಾಜೇಗೌಡ, ಎಂಎಸ್‌ಐಲ್‌ಹರೀಶ್, ಮಹದೇವ, ಸ್ಟುಡಿಯೋಸಚಿನ್, ಕೆಂಪರಾಜು, ಲೋಕೇಶ್, ಮಂಚನಹಳ್ಳಿಧನು, ಹೆಬ್ಬಾಳುಸ್ವಾಮಿ, ಡೈರಿಮಹದೇವ್ ಮತ್ತು ರೈತರು ಹಾಜರಿದ್ದರು.

 

 

admin
the authoradmin

Leave a Reply