News

ಸುಳ್ಯದಲ್ಲಿ ಸವಿತಾ ಸಮಾಜದಿಂದ ಸವಿತಾ ಮಹರ್ಷಿ ಜಯಂತಿ ಅದ್ಧೂರಿ ಆಚರಣೆ…

ಸುಳ್ಯ: ಸುಳ್ಯದ  ಸವಿತಾ ಸಮಾಜದ ವತಿಯಿಂದ ಸವಿತಾ ಮಹರ್ಷಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ನಗರದ ಅಂಬಟೆಡ್ಕದಲ್ಲಿರುವ ವರ್ತಕರ ಭವನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಕಾರ್ಯಾಧ್ಯಕ್ಷ ಉದಯ ಜಟ್ಟಿಪಳ್ಳ ವಹಿಸಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ.

ರೆಡ್ ಕ್ರಾಸ್ ಸಂಸ್ಥೆಯ ಸುಳ್ಯ ತಾಲೂಕು ಸಭಾಪತಿಗಳಾದ ಪಿ ಬಿ ಸುಧಾಕರ್ ರೈ , ಸರಕಾರಿ ಜೂನಿಯರ್ ಕಾಲೇಜಿನ ಪ್ರಾಧ್ಯಾಪಕರಾದ ಚಂದ್ರಮತಿ, ಸುಳ್ಯ ತಾಲೂಕು ಬಾರ್ಬರ್ ಅಸೋಸಿಯೇಷನ್ ಅಧ್ಯಕ್ಷರಾದ ಪದ್ಮನಾಭ ಭಂಡಾರಿ ಆಗಮಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಕಾರ್ಯದರ್ಶಿ ನವೀನ ಸೂಂತೋಡು ಸ್ವಾಗತಿಸಿ, . ಬಾರ್ಬರ್ ಅಸೋಸಿಯೇಷನ್ ಕಾರ್ಯದರ್ಶಿ ಭವಾನಿ ಶಂಕರ್ (ಅವಿ) ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು.

ಇದೇ ವೇಳೆ ಅಂಚೆ ಇಲಾಖೆಯಿಂದ ಜೀವವಿಮೆ ಮತ್ತು ಅಪಘಾತ ವಿಮೆಯ ಬಗ್ಗೆ ಮಾಹಿತಿ ಕಾರ್ಯಕ್ರಮ ಮತ್ತು ಆಧಾರ್ ತಿದ್ದುಪಡಿ ಕ್ಯಾಂಪ್ ನ್ನು ಹಮ್ಮಿಕೊಳ್ಳಲಾಗಿತ್ತು. ಇದನ್ನು ಸವಿತಾ ಸಮಾಜದ ಬಾಂಧವರು ಪಡೆದುಕೊಂಡರು.

ಸವಿತಾ ಸಮಾಜದ ವತಿಯಿಂದ ನಡೆದ ಅದೃಷ್ಟ ಪರೀಕ್ಷೆಯಲ್ಲಿ ಪ್ರಥಮ ಬಹುಮಾನ 3051 ಪ್ರವೀಣ್ ಆಲೆಟ್ಟಿ, ದ್ವಿತೀಯ ಬಹುಮಾನ 2704 ಗೋಪಾಲ ಅಡ್ಕಾರ್,  ತೃತೀಯ ಬಹುಮಾನ 4743 ಚಿತ್ರ ನಾಗೇಶ್ ಮಂಗಳೂರು ವಿಜೇತರಾದರು.

1212 ಸಮನ್ವಿ ಗೌಡ ಕೊಲ್ಲಮಗುರ, 2) 3899 ಶರಣ್ ರಾಜ್ ಆಲೆಟ್ಟಿ, 3) 2228 ಶಿವರಾಮ ಬಾಲಂಬಿ, 4) 433 ನೇತ್ರಾ ಅಲೆಟ್ಟಿ 5) 995 ಮನು ನೀರಬಿದರೆ, 6) 1225 ಆತ್ಮಿಕ ಕಟ್ಟೆಮನೆ, 7) 1293 ಶರ್ಮಿಳ ಪಿಪಿ, 8) 2418 ಪುರುಷೋತ್ತಮ ಕಲ್ಲುಗುಂಡಿ, 9) 1452 ಸೀತಾರಾಮ ಮುಪ್ಪೇರಿಯಾ, 10) 550 ಮಂಜು ಸಂಪಾಜೆ ಬಹುಮಾನ ಲಭಿಸಿದವು

admin
the authoradmin

ನಿಮ್ಮದೊಂದು ಉತ್ತರ

Translate to any language you want