ಸಾಲಿಗ್ರಾಮ ಬಳಿಯ ಶ್ರೀ ಯೋಗ ನರಸಿಂಹ ಸ್ವಾಮಿಯ ಅದ್ಧೂರಿ ಬ್ರಹ್ಮರಥೋತ್ಸವ.. ಭಕ್ತಿ ಸಾಗರದಲ್ಲಿ ಮಿಂದೆದ್ದ ಭಕ್ತರು

ಸಾಲಿಗ್ರಾಮ(ಸಂಘಟನೆ ಮಂಜುನಾಥ್): ಇತಿಹಾಸ ಪ್ರಸಿದ್ಧ ಶ್ರೀ ಯೋಗ ನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ ಅತ್ಯಂತ ಸಡಗರ ಸಂಭ್ರಮದಿಂದ ಶ್ರದ್ಧಾ ಭಕ್ತಿಯಿಂದ ಸಾಲಿಗ್ರಾಮ ಸಮಸ್ತ ಜನತೆಯ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಪಟ್ಟಣದ ಚುಂಚನಕಟ್ಟೆ ಸಾಲಿಗ್ರಾಮ ರಸ್ತೆಯ ಪೇಟೆ ಬಾಗಿಲಲ್ಲಿರುವ ಶ್ರೀ ಯೋಗ ನರಸಿಂಹಸ್ವಾಮಿ ದೇವಾಲಯದ ಮುಂಭಾಗ ಸಾಲಿಗ್ರಾಮದ ಯಜಮಾನರ ನೇತೃತ್ವದಲ್ಲಿ ಹಿಂದೂ ಸಂಪ್ರದಾಯದಂತೆ ಶಾಸ್ತ್ರ ಸಂಪ್ರದಾಯಗಳನ್ನು ಒಳಗೊಂಡ ಪೂಜಾ ಪುರಸ್ಕಾರಗಳನ್ನು ಮಾಡಿದ ಬಳಿಕ ಶ್ರೀ ಯೋಗನರಸಿಂಹಸ್ವಾಮಿ ದೇವರ ಬ್ರಹ್ಮ ರಥದಲ್ಲಿ ಪ್ರತಿಷ್ಠಾಪಿಸಿ ಅಲಂಕೃತಗೊಂಡ ರಥವು ಮಂಗಳವಾದ್ಯ ಮುತ್ತೈದೆಯರ ಕಳಸದೊಂದಿಗೆ ಸಾಲಿಗ್ರಾಮ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆಯ ಮೂಲಕ ತೆರಳಿತು.

ರಾತ್ರಿಯಿಂದಲೇ ಶೃಂಗಾರಗೊಂಡ ದೇವಾಲಯ ರಥ ಸಾಲಿಗ್ರಾಮದ ಯುವಕರ ತಂಡ ಹಸಿರು ತೋರಣಗಳು ಹೂವಿನ ಅಲಂಕಾರ ರಸ್ತೆ ಯುದ್ಧಕ್ಕೂ ದೇವರ ಆಗಮನಕ್ಕೆ ಆಕರ್ಷಿಸಿದ ವಿವಿಧ ಬಣ್ಣ ಬಣ್ಣದ ರಂಗೋಲಿ ದೇವಾಲಯಕ್ಕೆ ಬರುವ ಸಾರ್ವಜನಿಕರು ಮತ್ತು ಭಕ್ತರ ಆಕರ್ಷಣೆಯಾಗಿದ್ದರು ಯುವಕರ ಭಕ್ತಪೂರ್ವ ಶ್ರಮಕ್ಕೆ ಮೆಚ್ಚುಗೆಯ ಮಾತುಗಳನ್ನ ಆಡುತ್ತಿದ್ದರು.
ಕಳೆ ಕಟ್ಟಿದ ಕಲಾತಂಡಗಳು: ರಥೋತ್ಸವ ಪ್ರಾರಂಭವಾಗುವುದಕ್ಕೆ ಮೊದಲು ದೇವಾಲಯದ ಮುಂಭಾಗ ಆಗಮಿಸಿದ ಕಲಾತಂಡಗಳಾದ ಹುಲಿ ವೇಷ, ಮಾರುವೇಶದ ವಿವಿಧ ಭಂಗಿಯ ಗೊಂಬೆಗಳು ಮತ್ತು ವಿವಿಧ ಬಗೆಯ ವಾದ್ಯಗಳು ಮಹಿಳೆಯರ ವಾದ್ಯಗಳು ಸೇರಿದಂತೆ ದಕ್ಷಿಣ ಕರ್ನಾಟಕದ ವಿವಿಧ ಬಗೆಯ ಕಲಾತಂಡಗಳ ನೃತ್ಯ ಮನಮೆಚ್ಚುವ ಜೊತೆಗೆ ಕಲೆಯ ರಸದೌತಣವನ್ನು ನೀಡಿದರು.
ಮಜ್ಜಿಗೆ ಪಾನಕಕ್ಕೆ ಮುಗಿಬಿದ್ದ ಭಕ್ತರು: ಸುಮಾರು 12 ಗಂಟೆಗೆ ರಥೋತ್ಸವ ಪ್ರಾರಂಭವಾಗುತ್ತಿದ್ದಂತೆ ಬಿಸಿಲಿನ ತಾಪಕ್ಕೆ ರಥೋತ್ಸವಕ್ಕೆ ಆಗಮಿಸಿದ ಜನತೆ ದಣಿವನ್ನು ಮತ್ತು ಬಿಸಿಲಿನ ತಾಪವನ್ನು ಕಡಿಮೆ ಮಾಡಿಕೊಳ್ಳಲು ಮಜ್ಜಿಗೆ ಮತ್ತು ಪಾನಕಕ್ಕೆ ಮುಗಿಬಿದ್ದು ರಸ್ತೆಯುವುದಕ್ಕೂ ನಂದಿನಿ ಹಾಲಿನ ಕೇಂದ್ರ ಮತ್ತು ಅಂಗಡಿಗಳ ಮುಂಭಾಗ ನೀಡುತ್ತಿದ್ದ ತಂಪು ಮಜ್ಜಿಗೆ ಪಾನಕವನ್ನು ಕುಡಿದು ತೃಪ್ತರಾದರು.
ರಥೋತ್ಸವಕ್ಕೂ ಮುಂಚೆ ಗ್ರಾಮದ ಮುಖಂಡರು ಯಜಮಾನರು ಮಾಡಿದ ತೀರ್ಮಾನದಂತೆ ಯಾವುದೇ ರಾಜಕಾರಣಿಗಳ ಮೂಲಕ ರಥೋತ್ಸವಕ್ಕೆ ಚಾಲನೆ ನೀಡುವುದು ಬೇಡ ನಮ್ಮ ಗ್ರಾಮದ ಹಿರಿಯರು ಮತ್ತು ದೇವಾಲಯದಲ್ಲಿ ಪೂಜೆ ಮಾಡುವ ಅರ್ಚಕರು ಚಾಲನೆ ನೀಡಲಿ ಎಂಬ ತೀರ್ಮಾನದಂತೆ ಸರಿಯಾದ ಸಮಯಕ್ಕೆ ಶುಭ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ರಥೋತ್ಸವಕ್ಕೆ ಸ್ಪಂದಿಸದ ತಾಲೂಕು ಆಡಳಿತ: ರಥೋತ್ಸವಕ್ಕೂ ಮುಂಚೆ ಗ್ರಾಮದ ಮುಖಂಡರು ಯಜಮಾನರು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿ ನಾಡು ಹಬ್ಬ ಮತ್ತು ಇನ್ನಿತರ ಮಹನೀಯರ ಜಯಂತಿಗಳಲ್ಲಿ ಪಟ್ಟಣದ ಪ್ರಮುಖ ಬೀದಿಗಳ ದೀಪಾಲಂಕಾರ ಹಸಿರು ತೋರಣಗಳು ಇನ್ನಿತರ ಕಾರ್ಯಗಳಿಗೆ ಸಹಕರಿಸುವಂತೆ ಮನವಿ ಮಾಡಿದರೂ ಸಹಕರಿಸದ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ಮತ್ತು ಬೇಸರವನ್ನು ಗ್ರಾಮದ ಯಜಮಾನರು ಮತ್ತು ಮುಖಂಡರು ವ್ಯಕ್ತಪಡಿಸಿದರು.
ಸಾಲಿಗ್ರಾಮದ ಯಜಮಾನರು ಮತ್ತು ಯುವಕರ ನೇತೃತ್ವದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಯಶಸ್ವಿಯಾಗಿ ರಥೋತ್ಸವವು ನಡೆಯಿತು. ಈ ರಥೋತ್ಸವದಲ್ಲಿ ಶಾಸಕ ಡಿ ರವಿಶಂಕರ್ ಮಾಜಿ ಸಚಿವ ಸಾರಾ ಮಹೇಶ್ ಭಾಗವಹಿಸಿ ಶ್ರೀ ಯೋಗ ನರಸಿಂಹಸ್ವಾಮಿ ರಥೋತ್ಸವದ ಕಣ್ತುಂಬಿಕೊಂಡು ಭಕ್ತಿ ಪೂರ್ವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ ನಂದಿನಿ ಹಾಲು ಮಾರಾಟ ಕೇಂದ್ರದ ಮಾಲಿಕ ಸಾ ರಾ ಸತೀಶ್, ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಪ್ಪಾಜಿ ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿ ಸೋಮು, ಮುಖಂಡರಾದ ರವೀಶ, ಅಶೋಕ, ರಾಮು, ಪ್ರಭ, ವೆಂಕಟೇಶ, ಗುರುಪ್ರಸಾದ್, ನಟರಾಜ್, ಜಯರಾಮ್, ಮಹೇಂದ್ರ, ದಿನೇಶ, ರಂಗಸ್ವಾಮಿ, ಮಂಜುನಾಥ್ ಸೇರಿದಂತೆ ಇನ್ನಿತರರು ಮತ್ತು ಭಕ್ತರು ಹಾಜರಿದ್ದರು.







