LatestMysore

ನೆಲಮಂಗಲದ ಪವಾಡಶ್ರೀ ಬಸವಣ್ಣದೇವರ ಮಠದಲ್ಲಿ ನಡೆದ ಬಸವಜಯಂತಿ ಉತ್ಸವದಲ್ಲಿ ಕೃತಿಗಳ ಬಿಡುಗಡೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಪವಾಡಶ್ರೀ ಬಸವಣ್ಣದೇವರ ಮಠದಲ್ಲಿ ನಡೆದ ಬಸವಜಯಂತಿ ಉತ್ಸವದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ ಸಂಪಾದನೆಯ ಬಸವ ವಚನಾಮೃತ ಮತ್ತು ಅಕ್ಕನ ವಚನಾಮೃತ ಕೃತಿಗಳು, ಸಿದ್ಧಗಂಗೆಯ ಉಪನ್ಯಾಸಕ ಎಂ. ಬಾಲಚಂದ್ರರವರ ಶಿವಾಷ್ಟೋತ್ತರ ತವನಿಧಿ, ಯುಗಾವತಾರಿಯ ಅಮರಸಂದೇಶಗಳು, ದೇವಮಾನವ ದಿವ್ಯಸಂದೇಶಗಳು, ಬೆನಿಫಿಷಿಯಲ್ ಬೀಡ್ಸ್ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಪವಾಡಶ್ರೀ ಬಸವಣ್ಣದೇವರ ಮಠದ ಶ್ರೀ ಸಿದ್ಧಲಿಂಗಮಹಾಸ್ವಾಮಿಗಳು, ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಇಸ್ರೋ ವಿಶ್ರಾಂತ ಅಧ್ಯಕ್ಷ ಎ.ಎಸ್ ಕಿರಣ್ ಕುಮಾರ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಕರ್ನಾಟಕ ಸರ್ಕಾರದ ಮಾಜಿ ಕಾರ್ಯದರ್ಶಿ ಬಿ ಎಸ್ ಪಾಟೀಲ್, ನೆಲಮಂಗಲದ ಶಾಸಕ ಎನ್ ಶ್ರೀನಿವಾಸ್, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಚ್ ಮರಿಯೋಜಿರಾವ್, ‌ನಗರ ಸಭಾಧ್ಯಕ್ಷ ಗಣೇಶ್, ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲ್ಲಯ್ಯ ಇತರರು ಉಪಸ್ಥಿತರಿದ್ದರು.

ಶರಣರ ವಚನಗಳಿಗೆ ನೃತ್ಯದ ಮೆರುಗು ನೀಡಿದ ಸಿ.ಕೆ ವಚನ… ನೃತ್ಯಕ್ಕೆ ಮನಸೋತ ಪ್ರೇಕ್ಷಕರು

admin
the authoradmin

Leave a Reply

Translate to any language you want