ArticlesLatest

ಅವಲೋಕನ 101.. ಇದು ಸ್ಥಿರಶೀರ್ಷಿಕೆಅಡಿಯಲ್ಲಿ  ಪುಸ್ತಕ ವಿಮರ್ಶೆ ಮತ್ತು ಪರಿಚಯ

ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದಕೃತಿಗಳನ್ನುಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನುಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು ಪಡೆದಿವೆ. ಇಂತಹ ಮೇರು ಕೃತಿಗಳನ್ನು ಪರಿಚಯಿಸುವ, ವಿಮರ್ಶಿಸುವ ಪ್ರಯತ್ನವೇ ಅವಲೋಕನ (ಸ್ಥಿರಶೀರ್ಷಿಕೆ ಅಡಿಯಲ್ಲಿ ಪುಸ್ತಕವಿಮರ್ಶೆ)ವಾಗಿದೆ. ಇದನ್ನು ಹಿರಿಯಬರಹಗಾರರಾದ ಕುಮಾರಕವಿ ನಟರಾಜ್ ಅವರು ಸಂಗ್ರಹಿಸಿ ಜನಮನ ಕನ್ನಡಕ್ಕೆ ನೀಡಿದ್ದಾರೆ.

ಕೃತಿ : ಜಯಚಾಮರಾಜ ಒಡೆಯರ್ ಸ್ಮರಣ ಸಂಪುಟ

ಸಂ : ನ.ನಾಗಲಿಂಗಸ್ವಾಮಿ

ವಿಮರ್ಶಕ : ಕುಮಾರಕವಿ ನಟರಾಜ

ಪ್ರಕಾಶನ : ಕನ್ನಡ ಕ್ರಾಂತಿದಳ, ಬಸವೇಶ್ವರ ರಸ್ತೆ, ಮೈಸೂರು

ಮುದ್ರಣ : ಮೈಸೂರ್ ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಹೌಸ್, ದೊಡ್ಡ ಗಡಿಯಾರ ಬಳಿ, ಮೈಸೂರು. ಮೊದಲ ಮುದ್ರಣ: 1982 ಪುಟಗಳು : 275,  ಬೆಲೆ: ರೂ.30/-

ಕರ್ನಾಟಕ ರಾಜ್ಯದಲ್ಲಿ ಕನ್ನಡ ಉಳಿಸಲು ಬೆಳೆಸಲು ಕಂಕಣಬದ್ಧರಾದ ಅನೇಕ ಕನ್ನಡ ಚಳುವಳಿಗಾರರಲ್ಲಿ ಅಗ್ರಗಣ್ಯರೂ’ಕನ್ನಡ ಕ್ರಾಂತಿದಳ’ ಸಂಸ್ಥಾಪಕ ಅಧ್ಯಕ್ಷರೂ ಮೈಸೂರಿನ ಕೆಚ್ಛೆದೆಯ ಕನ್ನಡ ಯೋಧರೂ ಆಗಿರುವ ನ.ನಾಗಲಿಂಗಸ್ವಾಮಿ ಈ ‘ಜಯಚಾಮರಾಜ ಒಡೆಯರ್’ ಸ್ಮರಣ ಸಂಪುಟದ ಪ್ರಧಾನ ಸಂಪಾದಕರು.

ಇವರು ತಮ್ಮ ಚಳುವಳಿ, ಪತ್ರಿಕೋದ್ಯಮ ಹಾಗೂ ಬರವಣಿಗೆ ಮೂಲಕ ಕನ್ನಡ ನಾಡಿನ ಜನಪ್ರಿಯ ವ್ಯಕ್ತಿ ಆಗಿದ್ದಾರೆ. ಈಗಾಗಲೇ ಕೆಲವಾರು ಪುಸ್ತಕಗಳನ್ನು ಬರೆದು ಪ್ರಕಟಿಸಿರುವುದಲ್ಲದೆ ಕಳೆದ ೩ ದಶಕಗಳಿಂದ ಒಂದೆರಡು ಪತ್ರಿಕೆಗಳ ಸಂಪಾದಕ- ಪ್ರಕಾಶಕರಾಗಿ ಕನ್ನಡ ಸೇವೆಯನ್ನು ನಿಸ್ಪೃಹವಾಗಿ ಕೈಗೊಳ್ಳುತ್ತ ಬಂದಿರುವುದನ್ನು ಗುರ್ತಿಸಿದ ಕರ್ನಾಟಕ ಸರ್ಕಾರವು ‘ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿದೆ. ಕನ್ನಡಪುತ್ರ, ಕನ್ನಡಕಂಠೀರವ, ಕನ್ನಡಪ್ರಭುತ್ವ, ಮುಂತಾದ ಪತ್ರಿಕೆಗಳ ಸಂಸ್ಥಾಪಕ ಸಂಪಾದಕ-ಪ್ರಕಾಶಕ.

ತಾವು ಬದುಕಿರುವವರೆಗೂ ಕನ್ನಡಕ್ಕಾಗಿ ಕೈಎತ್ತಿ ತಮ್ಮ ಜೀವ- ಜೀವನವನ್ನು ಕಲ್ಪವೃಕ್ಷವನ್ನಾಗಿಸಿ ಕೊಂಡ ದಿಟವಾದ ದಿಟ್ಟಕನ್ನಡಿಗ! ಇವರ ಮಾರ್ಗದರ್ಶನ ಮತ್ತು ಪ್ರೋತ್ಸಾಹದಿಂದ ಸಾವಿರಾರು ಕನ್ನಡ ಕಂದಮ್ಮಗಳು ಬದುಕು ಕಟ್ಟಿಕೊಂಡರು. ಇವರ ಪ್ರಕಾಶನದ ಬೆಂಬಲದಿಂದ ನೂರಾರು ಉದಯೋನ್ಮುಖ ಬರಹಗಾರರು ಬೆಳಕಿಗೆ ಬಂದರು. ಕನ್ನಡದ ನಾಡು ನುಡಿ ಕಲೆ ಸಂಸ್ಕೃತಿ ಮುಂತಾದವುಗಳ ಬಗ್ಗೆ ವರ್ಷಪೂರ್ತಿ ನಿತ್ಯೋತ್ಸವ ಮಾಡಿದಂಥ ಧೀರ ಕನ್ನಡಿಗ.

ವರ್ಷಕ್ಕೊಮ್ಮೆ ನವೆಂಬರ್ ಕನ್ನಡಿಗನಾಗಿ ವಸೂಲಾತಿ-ಹಪ್ತಾ ಮೂಲಕ ಕನ್ನಡ ರಾಜ್ಯೋತ್ಸವ ಮಾಡುವಂಥ ವರ್ಗಕ್ಕೆ ಸೇರಿದವರಲ್ಲ. ಪುರಭವನ ಇರಲಿ ನಡುಬೀದಿ ಇರಲಿ ಎಲ್ಲೆಂದರಲ್ಲಿ ನಿರಂತರವಾಗಿ ಕನ್ನಡ ತಾಯಿ ಭುವನೇಶ್ವರಿಯ ಸೇವೆಯನ್ನು ನಿರ್ಭಯವಾಗಿ ಕೈಗೊಳ್ಳುತ್ತಿದ್ದ ಕನ್ನಡಪುತ್ರ. ತಮ್ಮ ಕನ್ನಡ ಕೈಂಕರ್ಯದ ಹಾದಿಯಲ್ಲಿ ಸದಾ ಯಶಸ್ಸನ್ನೇ ಕಂಡ ಜಯಶಾಲಿ.

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಶ್ರೇಯೋಭಿಲಾಷಿ ಆಗಿರುವ ನ.ನಾಗಲಿಂಗಸ್ವಾಮಿಯವರು ಮಹಾರಾಜ ಮನೆತನದ  ಮತ್ತು ರಾಜಕುಟುಂಬದ ಪರಮಭಕ್ತರು. ವಿಶೇಷವಾಗಿ ೨೫ನೇ ದೊರೆಗಳಾದ ಜಯಚಾಮರಾಜ ಒಡೆಯರ್ ಅವರ ಕಟ್ಟಾಅಭಿಮಾನಿ ಹಾಗೂ ಅವರ ಏಕೈಕ ಪುತ್ರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಒಡನಾಟದಲ್ಲಿದ್ದವರು. ಯಾವುದೇ ಬಗೆಯ ಸಹಾಯ ಸಹಕಾರ ದಾನ ದತ್ತಿ ಮುಂತಾದವುಗಳನ್ನು ಮುಜುಗರವಿಲ್ಲದೆ ನೇರವಾಗಿ ಪ್ರಾಮಾಣಿಕವಾಗಿ ದೊರೆಗಳಿಂದ ಪಡೆದುಕೊಳ್ಳುತ್ತಿದ್ದ ಕೆಲವೇ ಮಂದಿಯಲ್ಲಿ ಇವರೂ ಒಬ್ಬರು. ತಾವು ಪಡೆದುದನ್ನು ಕುಟುಂಬದವರೊಡನೆ, ಇತರರೊಡನೆ ಹಂಚಿಕೊಂಡು ಬಾಳಿದ ಸಂಘ ಜೀವಿ ಸಂಘಟನಾ ಜೀವಿ!

ನೂರಾರು ಗಣ್ಯರಿಗೆ ಅವರವರ ಹೆಸರಿಗೆ ತಕ್ಕಂತೆ ಆಯಾಯ ಹೆಸರಿನ ಮೊದಲ ಅಕ್ಷರದ ಮುಂದೆ ಅರ್ಥಗರ್ಭಿತ ವಾಕ್ಯಗಳಿಂದ ಪೋಣಿಸಿ ಆಶ್ಚರ್ಯಕರ ವಾಗಿ ಅಣಿಗೊಳಿಸಿ ‘ಬಿನ್ನವತ್ತಳೆ’ ಅರ್ಪಿಸುತ್ತಿದ್ದ ಅಸಾಧಾರಣ ಪ್ರತಿಭಾವಂತ! ಉದಾ.: ಡಾ.ರಾಜ್ ಅವರಿಗೆ ‘ಕನ್ನಡ ಕಂಠೀರವ’ ಬಿರುದು ನೀಡಿ ಬಿನ್ನವತ್ತಳೆ ಅರ್ಪಿಸಿದ್ದರು. ಅಂದಿನ ಮುಖ್ಯಮಂತ್ರಿ ದೇವರಾಜಅರಸು, ಬಂಗಾರಪ್ಪ,ಗುಂಡೂರಾವ್ ಸೇರಿದಂತೆ ಅನೇಕ ಗಣ್ಯಾತಿಗಣ್ಯರಿಗೆ ತಮ್ಮ ಸ್ವರಚಿತ ಆಶುಕವಿತೆ, ಪರಮಾಶ್ಚರ್ಯಕಾವ್ಯ ಬರೆದ ಬಿನ್ನವತ್ತಳೆ ಸಮರ್ಪಿಸಿ ಪ್ರಶಂಸೆ ಪಡೆದಿದ್ದರು ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.

ಪ್ರಸ್ತುತ ಸ್ಮರಣ ಸಂಪುಟದಲ್ಲಿ ನಾಡಿನ ಅನೇಕ ಪ್ರತಿಷ್ಠಿತ ಖ್ಯಾತ ಲೇಖಕರು ಮೈಸೂರು ಮಹಾರಾಜ ‘ಜಯಚಾಮರಾಜ ಒಡೆಯರ್’ ಬಗ್ಗೆ ಬರೆದ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ನೂರಾರು ಲೇಖನಗಳನ್ನು ಒಂದೆಡೆ ಸೇರಿಸಿ ಒಂದು ಬೃಹತ್ ಸಂಪುಟವನ್ನಾಗಿಸಿ ಅದರ ಪ್ರಧಾನ ಸಂಪಾದಕರಾಗಿ ತಮ್ಮ ರಾಜಕಾರ್ಯವನ್ನು ಸಾರ್ಥಕ ರೀತಿಯಲ್ಲಿ ಆಚಂದ್ರಾರ್ಕ ಅಜರಾಮರ ಆಗುವಂತೆ ಲೋಕಾರ್ಪಣೆ ಗೊಳಿಸಿದ್ದಾರೆ.

ಈ ಅಪೂರ್ವ ಮತ್ತು ಅಮೋಘ ಕಾಯಕವನ್ನು ಶ್ರೀ ನ. ನಾಗಲಿಂಗಸ್ವಾಮಿಯವರ (ಹಿತ)ಶತ್ರುಗಳು, ಮಿತ್ರರು, ಶಿಷ್ಯಕೋಟಿಯೂ ಸೇರಿದಂತೆ ಕರ್ನಾಟಕ ರಾಜ್ಯದ ಪ್ರತಿಯೊಬ್ಬ ಕನ್ನಡಿಗರು ಮೆಚ್ಚಿಕೊಂಡಿದ್ದಾರೆ, ಅಂತರಂಗದಿಂದ ಬಹಿರಂಗವಾಗಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ, ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. “ಇಂದಿಗೆ ನನ್ನಜನ್ಮ ಸಾರ್ಥಕವಾಯಿತು” ಎಂದು ಸ್ವಯಂ ನಾಗಲಿಂಗಸ್ವಾಮಿ ಖುದ್ದಾಗಿ ನನ್ನ(ಕುಮಾರಕವಿ) ಬಳಿ ಹಲವು ಬಾರಿ ಧನ್ಯತಾಭಾವದ ಆನಂದಭಾಷ್ಪ ಕಣ್ತುಂಬಿ ಹೇಳಿಕೊಂಡಿದ್ದಾರೆ!

ಈ ಮಹಾನ್ ಕೃತಿ ಹೊರಬರಲು ಲೇಖಕರಿಗೆ ತಗುಲಿದ ಅವಧಿ ಸುಮಾರು ೭ ವರ್ಷ..?!ಏಕೆಂದರೆ ವಿವಿಧ ಲೇಖಕರ ಮನೆ ಬಾಗಿಲಿಗೆ ಖುದ್ದಾಗಿ ಆಟೋ, ಬಸ್ಸು, ಕೆಲವು ಸಲ ನಟರಾಜ ಟ್ರಾವೆಲ್ಸ್ (ಕಾಲ್ನಡಿಗೆ) ಮೂಲಕ  ಎಡತಾಕಿದ್ದುಂಟು! ಇವರಬಳಿ ಕಾರ್, ಸ್ಕೂಟರ್ ಯಾವುದೂ ಇರ್ಲಿಲ್ಲ. ಎಲ್ಲಕ್ಕೂ ಮಿಗಿಲಾಗಿ ಇವರಿಗೆ ಡ್ರೈವಿಂಗೂ ಬರ್ತಿರಲ್ಲ! ಸ್ವಚ್ಚಮನಸ್ಸಿನ ಅಚ್ಚಕನ್ನಡ ಪುತ್ರನಾದ ಈತ ಯುವಕ ಮುದುಕ ಮಕ್ಕಳು ಮಹಿಳೆ ಎಲ್ಲರ ಪಾಲಿಗೆ ಪರೋಪಕಾರಿ ಆಪತ್ಬಾಂಧವ. ಈ ಕಾರಣದಿಂದ ಇವರೊಬ್ಬ ಅಜಾತಶತ್ರು ಎಂದರೆ ಅತಿಶಯೋಕ್ತಿಯಲ್ಲ.

ದಿವಂಗತ ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಅವರ ಕುಟುಂಬದವರೂ, ಮಹಾರಾಜರ ನಿಕಟವರ್ತಿಗಳೂ, ಮಾನ್ಯ ಮಠ ಪೀಠಾಧಿಪತಿಗಳೂ ಮಹಾರಾಜರ ಆಸ್ಥಾನ ವಿದ್ವಾಂಸರೂ ಸೇರಿದಂತೆ ಅನೇಕ ಗಣ್ಯರು ಬರೆದ ಉತ್ತಮ ಲೇಖನಗಳ ಸಂಗ್ರಹವಾದ ಈ ಕೃತಿಯ ವಿಷಯ ಸೂಚಿ/ಪರಿವಿಡಿ:-

*ಯದುಕುಲ ರಕ್ಷಕಿ ಶ್ರೀಚಾಮುಂಡೇಶ್ವರಿ ಮಾತೆ ಮತ್ತು ಜಯಚಾಮರಾಜ ಒಡೆಯರ್ ಫೋಟೋ ಸೇರಿದಂತೆ ಕಲರ್ ಮತ್ತು ಕಪ್ಪುಬಿಳುಪು ಭಾವಚಿತ್ರಗಳು:125 *ಪ್ರಸ್ತಾವನೆ : ನ.ನಾಗಲಿಂಗಸ್ವಾಮಿ

 ಸಂದೇಶಗಳು:  *ಪತಿಯೇ ಪ್ರತ್ಯಕ್ಷ ದೇವರೆನಗೆ -ಮೈಸೂರಿನ ಹಿರಿಯಮಹಾರಾಣಿ ಸತ್ಯಪ್ರೇಮಕುಮಾರಿ,ಜೈಪುರ,ರಾಜಸ್ತಾನ *ಮರೆಯಲಾಗದ ದುಃಖವಾಗಿದೆ -ಕಿರಿಯ ಮಹಾರಾಣಿ ಹಾಗು ರಾಜಮಾತೆ ತ್ರಿಪುರ ಸುಂದರಮ್ಮಣ್ಣಿ(ಪರವಾಗಿ ಡಿಟಿಎಸ್.ರಾವ್) *ನಮ್ಮ ಪೂರ್ವಜರಂತೆಯೇ ಬಾಳಿ ಬದುಕಿದವರು -ಶ್ರೀಕಂಠದತ್ತ ನರಸಿಂಹರಾಜ ಒಡೆಯರ್(ಪರವಾಗಿ ಡಿಟಿಎಸ್.ರಾವ್) *ಭಾರತೀಯ ಪರಂಪರೆಯನ್ನುಳಿಸಿಕೊಂಡು ಬಂದಿದ್ದವರು -ರಾಜಮಂತ್ರಪ್ರವೀಣ, ರಾಜಮಾತೆ ಸಲಹೆಗಾರ ಡಿ.ಟಿ.ಎಸ್.ರಾವ್ *ಜನಪ್ರಿಯನಾಯಕ  -ಶ್ರೀಶ್ರೀ ಶಿವಕುಮಾರ ಸ್ವಾಮಿಗಳು, ಶ್ರೀಸಿದ್ಧಗಂಗಾಕ್ಷೇತ್ರ *ಆದರ್ಶ ದೊರೆ -ಡಿ.ದೇವರಾಜಅರಸು, ಮಾಜಿ ಮುಖ್ಯಮಂತ್ರಿ. *ಚಂದ್ರವಂಶ ಮಹಾರಾಜ ಶ್ರೀಶ್ರೀ ಜಯಚಾಮರಾಜೇಂದ್ರ ಪ್ರಭುಗಳು  -ಶೃಂಗೇರಿ ಜಗದ್ಗುರು ಶ್ರೀವಿದ್ಯಾತೀರ್ಥ ಮಹಾಸ್ವಾಮಿ.

ENGLISH VERSION MESSAGES: *WISH YOU & YOUR COMMITTEE ALL SUCCESS by-K.L.DHAWAN, Private Secretary to the PRESIDENT OF INDIA, Rashtrpati Bhavan. *HIS HIGHNESS SRI JAYACHAMARAJA WODEYAR THE MAHARAJA OF MYSORE -Sridhar M.Cheluve Urs *BEFITTING REMEMBRANCES OF HIS MANYSIDE ACTIVITIES -MohanlalSukhadiya,GOVERNOR OF KARNATAKA *HIS NOBEL EXAMPLE WILL INSPIRE MANY….. -Samuel Appaji, Divisional Commissioner, Mysore *ExGOVERNOR OF MADRAS STATE : a many sided personality -M.KARUNANIDHI, Chief Minister, Tamilnadu (20.9.1975)

ಕನ್ನಡ ನಾಡಿನ ಓದುಗರು ಮಾತ್ರವಲ್ಲ ಇಡೀ ಭಾರತದ ಪ್ರತಿಯೊಬ್ಬರೂ ಓದಲೇಬೇಕಾದ ಈ ಮೇರುಕೃತಿಯಲ್ಲಿ ಇರುವ ಲೇಖನಗಳು: 1.ಮೈಸೂರು ಅರಮನೆ-ಗುರುಮನೆ-ಡಿ.ಕೃಷ್ಣಯ್ಯಂಗಾರ್ 2.ಪ್ರಾಚೀನ ಶಾಸ್ತ್ರಗಳನ್ನು, ಕಲೆಗಳನ್ನು ರಕ್ಷಿಸಿದ ಮಹಾರಾಜರು -ಶ್ರೀ ಮಹಾದೇವ ಸ್ವಾಮಿಗಳು 3.ಭಕ್ತಾಗ್ರಣಿ ಶ್ರೀ ಜಯಚಾಮರಾಜರು –ಶ್ರೀ ಶ್ರೀ ಶಿವರಾತ್ರಿರಾಜೇಂದ್ರ ಮಹಾಸ್ವಾಮಿಗಳು,ಸುತ್ತೂರು 4.ನಾ ಕಂಡ ಶ್ರೀ ಜಯಚಾಮರಾಜೇಂದ್ರ ಒಡೆಯರ್ -ಶ್ರೀ ಶಿವಾನಂದಸ್ವಾಮೀಜಿ 5.ಶ್ರೀ ಜಯಚಾಮರಾಜ ಒಡೆಯರ ಧರ್ಮವಿವೇಕ -ಎಂ.ಪಿ.ನಂಜುಂಡಶಾಸ್ತ್ರಿ 6.ಕಣ್ಮರೆಯಾದ ಆದರ್ಶ ಪ್ರಭುಗಳು-ಎಚ್.ಗಂಗಾಧರಶಾಸ್ತ್ರಿ   7.ಶ್ರೀ ಜಯಚಾಮರಾಜ ಒಡೆಯರ ವ್ಯಕ್ತಿತ್ವ ಹಾಗು ಅವರ ಸಂಗೀತ ಕೃತಿಗಳ ವಿಮರ್ಶೆ -ಎನ್.ಚೆನ್ನಕೇಶವಯ್ಯ

8.ಕಣ್ಮರೆಯಾದ ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹಾದ್ದೂರ್ -ಚಂದ್ರಶೇಖರ ಪಾಟಂಕರ್ 9.ರಾಜಯೋಗಿ ಶ್ರೀ ಜಯಚಾಮರಾಜೇಂದ್ರ ಒಡೆಯರು -ಎಂ.ಜಿ.ನಂಜುಂಡಾರಾಧ್ಯ 10.ಕರ್ನಾಟಕ ಸಂಗೀತ ಮತ್ತು ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರು -ಎಂ.ಚಲುವರಾಯಸ್ವಾಮಿ  11.ಶ್ರೀ ಜಯಚಾಮರಾಜೇಂದ್ರ ಒಡೆಯರವರ ಸಂಗೀತಪ್ರಭೆ -ಡಾ.ಬಿ.ದೇವೇಂದ್ರಪ್ಪ  12.ಗುರುಭಕ್ತಾವತಂಸ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರು -ಎಂ.ಎಲ್.ಸುಬ್ರಮಣ್ಯರಾಜೇ ಅರಸ್

13.ಸ್ನೇಹಿತ ರಾಜ -(ಚದುರಂಗ)ಎಂ.ಸುಬ್ರಮಣ್ಯ ರಾಜೇ ಅರಸ್  14.ಮುಕ್ಕೋಟಿ ಕನ್ನಡಿಗರ ಒಡೆಯ ಅಮರರು -ನ.ನಾಗಲಿಂಗಸ್ವಾಮಿ 15.ಚಿರಮಭಿವರ್ಧತಾಂ ಯದುಸಂತಾನಶ್ರೀ…..-ಸರ್ದಾರ್ ಬಸವರಾಜೇ ಅರಸ್ 16.ಬಂಗಾರದ ಕಳಶ -ಡಾ.ರಾಜಕುಮಾರ್ (ಚಲನಚಿತ್ರ ನಟ) 17.ಕನ್ನಡಿಗರ ಹೃದಯಸಿಂಹಾಸನದಲ್ಲಿ ಶ್ರೀ ಜಯಚಾಮರಾಜ ಒಡೆಯರು -ಜಿ.ನಾರಾಯಣ (ಕ.ಸಾ.ಪ.)18.ನಾ ಕಂಡ ಶ್ರೀ ಜಯಚಾಮರಾಜ ಒಡೆಯರು -ಟಿ.ಕೆ.ತುಕೋಳ್ (ಕುಲಪತಿ) 19.ಅಕಾಲ ಮೃತ್ಯು -ಎಚ್.ಎನ್.ಅಯ್ಯ (ವಿಖ್ಯಾತ ಅರವಿಂದ ಪರಿಮಳ ಕಾರ್ಖಾನೆ)

20.ನಮ್ಮತಂದೆ ಇನ್ನಿಲ್ಲ -(ನಾಟಕದ)ಕೊಟ್ಟೂರು ಬಸಪ್ಪ  21.ಬೆಳೆಯಸಿರಿ ಮೊಳಕೆಯಲ್ಲಿನೋಡು

-ಚೌಡೇಗೌಡ ಬೀಡನಹಳ್ಳಿ 22.ಮೈಸೂರು ರಾಜಮನೆತನದ ವಿಹಂಗಮ ನೋಟ -ಟಿ.ವೆಂಕಟರಾಮ್ (ಮೈಸೂರು ಪತ್ರಿಕೆ) 23.ಅದ್ವಿತೀಯ ಪಾಂಡಿತ್ಯದ ಅಮರ ಪ್ರಭು -ಸಾಹುಕಾರ್ ಟಿ.ತಿಮ್ಮಪ್ಪ 24.ಶ್ರೀ ಜಯಚಾಮರಾಜರನ್ನು ನೆನೆದು -ಕ್ಯಾಪ್ಟನ್ ಕೆ.ಆರ್.ಕೃಷ್ಣ 25.ಭಕ್ತಶಿರೋಮಣಿ-ಕ್ರಿಯಾಶೀಲ ಪ್ರಭುಗಳು-ಎಚ್.ಆರ್.ಶಾಸ್ತ್ರಿ 26.ಅಗಲಿದ ಮಹಾರಾಜರಿಗೆ ಶ್ರದ್ಧಾಂಜಲಿ -ಪಿ.ಆರ್.ಹರಿಹರನ್  27.ಮರೆಯಲಾಗದ ಮೈಸೂರು ಮಹಾರಾಜರು -ಬಿ.ಶಿವಮೂರ್ತಿಶಾಸ್ತ್ರೀ 28.ಒಡೆಯರ್ ರವರ ಮಾತೃಭಕ್ತಿ -ಮೈ.ನ.ಶಂಕರ್ 29.ಶಿಲ್ಪಿ ಹಾಗು ಚಿತ್ರಕಲೆ ಪರಮಪೋಷಕ -ವೈ.ನಾಗರಾಜು 30.ಕನ್ನಡಿಗರ ಹೃದಯ ಸಿಂಹಾಸನಾಧೀಶ್ವರ-ನ.ನಾಗಲಿಂಗಸ್ವಾಮಿ 31.ಶ್ರೀ ಜಯಚಾಮರಾಜ ಒಡೆಯರ್ ರಚಿಸಿದ ಕೆಲವು ಸಂಗೀತ ಕೃತಿಗಳು 32.ಶ್ರೀ ಜಯಚಾಮರಾಜೇಂದ್ರ ಗ್ರಂಥರತ್ನಮಾಲಾ 33.ಯದುಸಂತಾನಶ್ರೀ…..?! 34.ಜಯಚಾಮರಾಜ ಒಡೆಯರ್ ಅವರ ಜೀವನ-ವೃತ್ತ (ಬಯೋಡೇಟ) 35ಅಮರವಾಣಿ

ENGLISH SECTION(ಇಂಗ್ಲಿಷ್ ವಿಭಾಗ):-  36.Managing Director’s Office -F.K.IRANI (ideal JAWA motorcycle factory) 37.Incident at Coonoor -SAFIDARA SHAH 38.My Association with Jayachamaraja Wadiyar -H.N.PALEGAR 39.Shri Jayachamaraja Wadiyar as a Philosopher -K.GURUDUTT 40.A Perfect Gentlemen-M.FERNANDES  41.An Interview with the late Highness Shree Jayachamaraja Wadeyar Dr.K.KRISHNAMURTHY  42.A Brief sketch of life of late Jayachamaraja Wadeyar. -Sardar H.MUDDARAJE URS 43.Raja Prathyaksha Daivatha -L.MAHADEVIAH  44.How I saw his Highness late JayachamarajaWadeyar. -B.BALAIAH

admin
the authoradmin

ನಿಮ್ಮದೊಂದು ಉತ್ತರ