LatestMysore

ವಿದ್ಯಾರ್ಥಿಗಳು ನಾಯಕತ್ವ ಗುಣ ಮೈಗೂಡಿಸಿಕೊಳ್ಳಲು ಬಸವಮಾರ್ಗ ಫೌಂಡೇಶನ್ ಸಂಸ್ಥಾಪಕ ಎಸ್.ಬಸವರಾಜು ಸಲಹೆ

ಮೈಸೂರು: ವಿದ್ಯಾರ್ಥಿಗಳು ಓದುವ ಸಮಯದಲ್ಲೇ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಬಸವಮಾರ್ಗ ಫೌಂಡೇಶನ್ ಸಂಸ್ಥಾಪಕ ಎಸ್. ಬಸವರಾಜು ಸಲಹೆ ನೀಡಿದರು.

ನಗರದ ಹೆಬ್ಬಾಳದಲ್ಲಿ ಇರುವ ಅವಿರತ ಮೈಸೂರು ಸೆಂಟ್ರಲ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಶಿಸ್ತುಬದ್ಧ ಜೀವನವೇ ನಾಯಕತ್ವದ ಮೊದಲ ಮೆಟ್ಟಿಲು. ವಿದ್ಯಾರ್ಥಿ ದೆಸೆಯಲ್ಲಿ ಕಲಿಯುವ ಆಡಳಿತಾತ್ಮಕ ಮತ್ತು ನಾಯಕತ್ವದ ಅಂಶಗಳು ಭವಿಷ್ಯದಲ್ಲಿ ನಿಮ್ಮನ್ನು ಒಬ್ಬ ಯಶಸ್ವಿ ಮತ್ತು ಜವಾಬ್ದಾರಿಯುತ ನಾಗರಿಕನನ್ನಾಗಿ ರೂಪಿಸುತ್ತದೆ.

ವ್ಯಾಸಂಗ ಮುಗಿದೊಡನೆ ಹತ್ತಿಪ್ಪತ್ತು ಸಾವಿರಕ್ಕೆ ಕೆಲಸ ಮಾಡುವ ಕೆಲಸಗಾರರಾಗಬೇಡಿ. ಬದಲಿಗೆ ನೀವೆ ಉದ್ಯಮ ಪ್ರಾರಂಭ ಮಾಡಿ ಸಾವಿರಾರು ಜನರಿಗೆ ಕೆಲಸ ಕೊಡವ ಮಾಲೀಕರಾಗಿ. ಅದಕ್ಕೆ ಬೇಕಾಗದ ಅಗತ್ಯ ಸಿದ್ಧತೆಗಳನ್ನು ಈ ಹಂತದಲ್ಲೇ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಿದ್ಯಾರ್ಥಿಗಳು ದೊಡ್ಡ, ದೊಡ್ಡ ಕನಸುಗಳನ್ನು ಕಾಣಬೇಕು. ಅವುಗಳನ್ನು ನನಸಾಗಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆ ಇರಲಿ. ಇಂದು ಆ ಕನಸುಗಳು ಬರಿ ಶೂನ್ಯವಾಗಿ ಕಾಣಬಹುದು. ಈ ಹಂತದಲ್ಲಿ ಒಂದೊAದೆ ಕನಸುಗಳ ಮೂಲಕ ಒಂದೊಂದೇಶೂನ್ಯವನ್ನು ಪೋಣಿಸುತ್ತ ಹೋಗಿ ಕೊನೆಗೆ ಅದಕ್ಕೆ ತಂತಾನೇ ಸಂಖ್ಯೆಗಳು ಜೋಡಿಸಿಕೊಳ್ಳುತ್ತ ಹೋಗುತ್ತವೆ. ವಿದ್ಯಾರ್ಥಿಗಳು ಸೋಲುಗಳಿಗೆ ಕುಗ್ಗದೆ, ತಪ್ಪುಗಳಿಂದ ಪಾಠ ಕಲಿಯಬೇಕು. ಸಾಧಿಸಲು ಛಲಬೆಳಸಿಕೊಳ್ಳಬೇಕು ಆಗಿದ್ದರಷ್ಟೆ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ನಾನು ಏನಾಗಬೇಕು ಎಂಬುದನ್ನು ಇಂದೇ ನಿರ್ಧಾರ ಮಾಡಬೇಕು. ಅದನ್ನು ಈಡೇರಿಸಿಕೊಳ್ಳಲು ಶ್ರದ್ಧೆಯಿಂದ ನಿರಂತರವಾಗಿ ಅಭ್ಯಾಸ ಮಾಡಬೇಕು. ಜೊತೆಗೆ ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಯಾವುದೇ ಸೋಲುಗಳಿಗೆ ಹೆದರಬಾರದು. ಈಗಿನಿಂದಲೇ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿ. ಹದಿಹರೆಯದ ವಯಸ್ಸಿನಲ್ಲಿ ಆಕರ್ಷಣೆ ಮತ್ತು ದಾರಿ ತಪ್ಪಿಸುವ ಸವಾಲುಗಳು ಇರುತ್ತದೆ. ಅವುಗಳಿಗೆ ಸಿಲುಕದೆ ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬೇಕು. ಆ ಮೂಲಕ ಹೆತ್ತವರು ಮತ್ತು ಓದಿದ ಕಾಲೇಜಿಗೂ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

ಇಂದಿನ ವಿದ್ಯಾರ್ಥಿಗಳೇ ನಾಳಿನ ಪ್ರಜೆಗಳು ಮತ್ತು ದೇಶದ ಆಸ್ತಿಯೂ ಅವರೇ ಆಗಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಯಗಳ ಪ್ರತಿಭೆಯನ್ನು ಗುರುತಿಸಿ ಅವರನ್ನು ಸಾಧಕರನ್ನಾಗಿ ರೂಪಿಸುವುದು ಸಮಾಜ, ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿಯಾಗಿದೆ. ಶಿಕ್ಷಕರು ವಿದ್ಯಾರ್ಥಿಗಳ ಗುರಿ, ಸಾಧನೆಗೆ ನೀರೆರೆಯುವ ಕೆಲಸ ಮಾಡಬೇಕು. ಆ ಮೂಲಕ ಅವರ ಕನಸುಗಳನ್ನು ಸಕಾರಗೊಳಿಸಲು ಅಡ್ಡಿಗಲ್ಲಾಗಬೇಕು. ಅದೆ ರೀತಿ, ವಿದ್ಯಾರ್ಥಿಗಳು ಕೂಡ ಗುರು ಹಿರಿಯರು ನೀಡುವ ಸಲಹೆ ಮತ್ತು ಮಾರ್ಗದರ್ಶನಗಳನ್ನು ಚಾಚು ತಪ್ಪದೆ ಪಾಲನೆ ಮಾಡಬೇಕು. ಆ ಮೂಲಕ ತಂದೆ-ತಾಯಿ ಮತ್ತು ಓದಿದ ಸಂಸ್ಥೆಗೂ ಉತ್ತಮ ಹೆಸರು ಮತ್ತು ಕೀರ್ತಿ ತರಬೇಕು ಎಂದು ಶುಭಕೋರಿದರು.

ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಮಾತನಾಡಿ, ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದರೆ ಕಷ್ಟಪಡಲೇಬೇಕು. ಪ್ರತಿದಿನ ಯಾವ ವಿಷಯವನ್ನು ಎಷ್ಟು ಸಮಯದ ಓದಬೇಕು ಎಂದು ಸಮಯ ನಿರ್ವಹಣೆ ಮಾಡಿಕೊಳ್ಳಬೇಕು. ಓದುವಾಗ ಮೊಬೈಲ್ ಫೋನ್ ಮತ್ತು ಟಿವಿ, ಸಾಮಾಜಿಕ ಜಾಲತಾಣದಿಂದ ದೂರಇದ್ದು, ಉತ್ತಮ ವಿದ್ಯಾರ್ಥಿಗಳಾಗುವ ಮೂಲಕ ನಿಮ್ಮ, ನಿಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾಲೇಜಿನ ಛೇರ್ಮನ್ ಎನ್.ಪಿ. ಹರೀಶ್ ಮಾತನಾಡಿ, ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಓದುವ ವಾತಾವರಣ ಇದೆ. ಶೈಕ್ಷಣಿಕ ಪ್ರಗತಿ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ವೇದಿಕೆಯನ್ನು ಹಾಕಿಕೊಡಲಾಗುತ್ತದೆ. ಸುಸಜ್ಜಿತ ಗ್ರಂಥಾಲಯ, ಡಿಜಿಟಲ್ ಸಂಪನ್ಮೂಲಕ, ಪ್ರಯೋಗಾಲ, ನುರಿತ ಬೋಧನಾ ಸಿಬ್ಬಂದಿಗಳಿದ್ದಾರೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ವೇದಿಕೆಯನ್ನೂ ಕಲ್ಪಿಸಿಕೊಡಲಾಗುತ್ತಿದೆ. ವಿದ್ಯಾರ್ಥಿಗಳು ಇದನ್ನು ಸದ್ಬಳಕೆ ಮಾಡಿಕೊಂಡು ಓದುವ ಕಡೆಗೆ ನಿಮ್ಮ ಗಮನವನ್ನು ಕೇಂದ್ರಿಕಡಿಸಬೇಕು ಎಂದು ಸಲಹೆ ನೀಡಿದರು. ಉಪ ಪ್ರಾಂಶುಪಾಲರಾದ ಶಶಿಕುಮಾರ್ ಮಾತನಾಡಿದರು.

ಇದೆ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪದಗ್ರಹಣ ನಡೆಯಿತು. ಅಧ್ಯಕ್ಷ, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಪದಾಧಿಕಾರಿಗಳನ್ನು ನೇಮಿಸಿ ಅಧಿಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಲೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.

admin
the authoradmin

Leave a Reply