LatestMysore

ಚಿಕ್ಕವಡ್ಡರಗುಡಿನ ಕೃಷಿ ಪತ್ತಿನ ಸಹಕಾರ ಸಂಘಕ್ಕೆ3.41 ಲಕ್ಷ ಲಾಭ: ವೀರಭದ್ರಸ್ವಾಮಿ

ಕೆ.ಆರ್‌.ನಗರ(ಜಿಟೆಕ್ ಶಂಕರ್):  ತಾಲೂಕಿನ ಚಿಕ್ಕವಡ್ಡರಗುಡಿನ ಕೃಷಿ ಪತ್ತಿನ ಸಹಕಾರ ಸಂಘವು 2025-26ನೇ ಸಾಲಿನಲ್ಲಿ 3.41 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ವೀರಭದ್ರಸ್ವಾಮಿ ಹೇಳಿದರು.

ಸಂಘದ ಆವರಣದಲ್ಲಿ ನಡೆದ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರೈತರ ನೆರವಿಗೆ ನಿಲ್ಲಬೇಕು ಎಂಬ ಉದ್ದೇಶದಿಂದ 1020.64 ಲಕ್ಷ ರೂಗಳ ಕೆಸಿಸಿ ಬೆಳೆ ಸಾಲ ವಿತರಣೆ ಮಾಡಲಾಗಿದೆ ಎಂದರು.

2026-27 ನೇ ಸಾಲಿನಲ್ಲಿ ಹೊಸ ಸದಸ್ಯರುಗಳಿಗೆ ಮಧ್ಯಮಾವದಿ ಸಾಲವಾಗಿ 93.24 ಲಕ್ಷ ರೂಗಳು ಹಾಗೂ 27.68  ಲಕ್ಷ ಟ್ರಾಕ್ಟರ್ ಸಾಲ ನೀಡಲು ಗುರಿ ಹೊಂದಿದ್ದೇವೆ ಎಂದ ಅಧ್ಯಕ್ಷರು 2025-26ನೇ ಸಾಲಿನಲ್ಲಿ 3.31 ಲಕ್ಷ ಠೇವಣಿ ಹಣ ಸಂಗ್ರಹ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ವಿವಿಧ ಯೋಜನೆಯಡಿ ಷೇರುದಾರ ರೈತ  ಸದಸ್ಯರುಗಳಿಂದ ವಿತರಣೆ ಮಾಡಿರುವ 1215.31 ಲಕ್ಷ ರೂಗಳ ಸಾಲ ಬಾಕಿಯಿದು ಅದನ್ನು ಶೀಘ್ರದಲ್ಲೇ ವಸೂಲಾತಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ಸಂಘವು ಚಿಕ್ಕವಡ್ಡರಗುಡಿ, ಕಂಚಿನಕೆರೆ, ಬೊಮ್ಮೇನಹಳ್ಳಿ, ಗಂಧನಹಳ್ಳಿ, ಗಂಧನಹಳ್ಳಿ ಕೊಪ್ಪಲು, ಕಾಕನಹಳ್ಳಿ ಗ್ರಾಮದಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದು 1796 ಷೇರುದಾರ ಸದಸ್ಯರನ್ನು ಹೊಂದಿದೆ ಎಂದು ತಿಳಿಸಿದರಲ್ಲದೆ ಮುಂದಿನ ದಿನಗಳಲ್ಲಿ ಮತ್ತಷ್ಟು ರೈತರನ್ನು ಸಂಘಕ್ಮೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಎಂದು ನುಡಿದರು.

ಸಂಘದ ಉಪಾಧ್ಯಕ್ಷ ಮಹದೇವನಾಯಕ, ನಿರ್ದೇಶಕರಾದ ನಾರಾಯಣ, ಪದ್ಮಮ್ಮ, ಪೂಜಾರಿರಂಗೇಗೌಡ, ಜಿ.ಆರ್.ಕೃಷ್ಣೇಗೌಡ, ಕೆಂಪೇಗೌಡ, ಜಿ.ಜೆ.ಮಜದೇವ, ನಿಂಗಾಜೋಗಿ, ಸಿ.ರಮೇಶ್ ಬಾಬು, ನಾಗಮ್ಮ, ಕಾಮಾಕ್ಷಮ್ಮ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಎನ್.ದಿನೇಶ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಭಾಸ್ಕರ್, ಅಕೌಂಟೆಂಟ್ ಜಯರಾಮ, ಮಾರಾಟ ಗುಮಾಸ್ತ ಕೆ.ವಿ.ನಂದೀಶ್, ಅಟೆಂಡರ್ ಈಶ್ವರಚಾರ್ ಸೇರಿದಂತೆ ರೈತ ಸದಸ್ಯರು ಹಾಜರಿದ್ದರು.

admin
the authoradmin

ನಿಮ್ಮದೊಂದು ಉತ್ತರ