ಹುಣಸೂರು(ಮನುಕುಮಾರ್): ಕಿಟಕಿ ಒಡೆದು ಬಾಗಿಲ ಚಿಲಕ ತೆಗೆದು ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದ ಇಬ್ಬರು ಅಂತರರಾಜ್ಯ ಕಳ್ಳರನ್ನು ಬಂಧಿಸಿ, ಚಿನ್ನಾಭರಣ ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಕೇರಳಂ ರಾಜ್ಯದ ಪಾಲಕ್ಕಾಡ್ ಮೂಲದ ರಾಜಗೋಪಾಲ್ ಪುತ್ರ ಜಿಷ್ಟು ರಾಜಗೋಪಾಲ್ ಎಂ. ಹಾಗೂ ಸುರೇಶ್ ಪುತ್ರ ಆಕಾಶ್ ಬಂಧಿತ ಆರೋಪಿಗಳು.
ಇವರು 2025 ರ ನವಂಬರ್ 21 ರಂದು ಮೈಸೂರು- ಬಂಟ್ವಾಳ ಹೆದ್ದಾರಿ- 275ರ ತಾಲೂಕಿನ ಬಿಳಿಕೆರೆ ಹೋಬಳಿಯ ಮನುಗನಹಳ್ಳಿಯ ನಿಸರ್ಗ ಲೇ ಔಟ್ ನ ಶಿವಕುಮಾರ್ ರವರ ಮನೆಯ ಹಿಂಬದಿಯ ಕಿಟಕಿ ಗಾಜು ಒಡೆದು ಕಿಟಕಿಯಿಂದ ಬಾಗಿಲ ಚಿಲಕ ತೆಗೆದು ಒಳ ಹೊಕ್ಕಿದ್ದಲ್ಲದೆ, ಮನೆಯಲ್ಲಿದ್ದ ಬೀರು ಮೀಟಿ ಲಾಕರ್ ನಲ್ಲಿಟ್ಟಿದ್ದ ಒಂದು ಬಂಗಾರದ ನೆಕ್ಲೆಸ್, ಒಂದು ಬ್ರೇಸ್ ಲೈಟ್, ಉಂಗುರ, ಮಾಂಗಲ್ಯದ ಚೈನ್ ಸೇರಿದಂತೆ 72 ಗ್ರಾಂ ಚಿನ್ನಾಭರಣ ಹಾಗೂ 93 ಸಾವಿರ ರೂ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದರು.
ಜಿಲ್ಲೆಯಲ್ಲಿ ನಡೆದಿರುವ ಅಪರಾಧ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಎಸ್.ಪಿ.ಮಲ್ಲಿಕಾರ್ಜುನ ಬಾಲದಂಡಿ, ಅಡಿಷನಲ್ ಎಸ್ .ಪಿ-2 ನಾಗೇಶ್ ಯವರ ಸೂಚನೆಯಂತೆ ಡಿವೈಎಸ್ ಪಿ ರವಿ ಯವರ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ಟಿ.ಎಂ.ಪುನಿತ್ ನೇತೃತ್ವದ ತಂಡವು ಆರೋಪಿಗಳು ಕೇರಳದಲ್ಲಿರುವ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.
ಕಾರ್ಯಾಚರಣೆಯಲ್ಲಿ ಎಸ್.ಐ.ಇರ್ಷಾದ್ ಬೇಗಂ, ಟೆಕ್ನಿಕಲ್ ವಿಭಾಗದ ಎ ಎಸ್ ಐ ವಸಂತಕುಮಾರ್, ಸುನಿತಾ, ಸಿಬ್ಬಂದಿಗಳಾದ. ಜಯರಾಮೇಗೌಡ,ಅನಂತರಾಮು,ಪ್ರತಾಪ್,ಶಿವಕುಮಾರ್, ರವಿ, ಚಾಲಕ ಗೋವಿಂದ ಭಾಗವಹಿಸಿದ್ದರು. ಮಾಲು ಸಹಿತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡವನ್ನು ಡಿವೈಎಸ್ ಪಿ ರವಿ ಅಭಿನಂದಿಸಿದ್ದಾರೆ








