ಹುಣಸೂರು ವ್ಯಾಪ್ತಿಯ ಗ್ರಾಮಗಳಲ್ಲಿ ಎಸ್‌ಐಆರ್ ಜಾಗೃತಿ ಜಾಥಾ.. ಎಸ್ ಐಆರ್ ನಲ್ಲಿ ಭಾಗವಹಿಸಲು ಮನವಿ

ಹುಣಸೂರು(ಮನುಕುಮಾರ್): ತಾಲೂಕಿನ ವಿವಿಧ ಶಾಲಾ-ಕಾಲೇಜುಗಳಲ್ಲಿ ಅರಿವು, ಗ್ರಾಮಗಳಲ್ಲಿ ಜಾಥಾ, ರಂಗೋಲಿ, ಚಿತ್ರಕಲೆ ಬಿಡಿಸುವ ಮೂಲಕ ಎಸ್‌ಐಆರ್ ಜಾಗೃತಿ ಮೂಡಿಸಲಾಗಿದ್ದು, ತಾಲೂಕಿನ ಗೋವಿಂದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಹುಣಸೂರಿನಲ್ಲಿರುವ ಸರಕಾರಿ ಪ್ರೌಢಶಾಲಾ ಆವರಣದಿಂದ ಹೊರಟ ಜಾಗೃತಿ ಜಾಥಾಕ್ಕೆ ತಹಸೀಲ್ದಾರ್ ಮಂಜುನಾಥ್, ತಾ.ಪಂ. ಇಒ ಹೊಂಗಯ್ಯ ಡೋಲು ಬಾರಿಸುವ ಮೂಲಕ ಚಾಲನೆ ನೀಡಿದರು.
ತಹಸೀಲ್ದಾರ್ ಮಂಜುನಾಥ್ ಮಾತನಾಡಿ, ‘ವಾರಕಾಲ ತಾಲೂಕಿನಾದ್ಯಂತ ಪ್ರೌಢಶಾಲೆಗಳಲ್ಲಿ ಮಕ್ಕಳಿಂದ ಜಾಗೃತಿ ಮೂಡಿಸುವ ಚಿತ್ರ ಬಿಡಿಸಿ ಅರಿವು ಮೂಡಿಸಲಾಗುತ್ತಿದೆ. ತಾಲೂಕಿನ ಹಳೇಬೀಡು, ಮುಳ್ಳೂರು, ದೊಡ್ಡಹೆದ್ದೂರು, ಬಿಳಿಕೆರೆ, ಹನಗೋಡು, ಗುರುಪುರ, ಬನ್ನಿಕುಪ್ಪೆ, ಮೂಕನಹಳ್ಳಿ, ಧರ್ಮಾಪುರ, ಮನುಗನಹಳ್ಳಿ, ಬಿಳಿಗೆರೆ, ತಟ್ಟೆಕೆರೆ ಸೇರಿದಂತೆ ವಿವಿಧ ಪಂಚಾಯಿತಿಗಳಲ್ಲಿ ರಂಗೋಲಿ ಬಿಡಿಸುವಿಕೆ, ಆಟೋ ಪ್ರಚಾರ, ಶಾಲಾ ಮಕ್ಕಳಿಂದ ಮಾನವ ಸರಪಳಿ, ಮನೆ ಮನೆ ಭೇಟಿ ಮೂಲಕ ಅರ್ಜಿ ಭರ್ತಿ ಪ್ರಕ್ರಿಯೆ ಹಾಗೂ ಜಾಗೃತಿ ಕಾರ್ಯಕ್ರವನ್ನು ಆಯೋಜಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗಿರುತ್ತದೆ,” ಎಂದು ತಾ.ಪಂ. ಇಒ ಹೊಂಗಯ್ಯ ತಿಳಿಸಿದರು.

ಹಳೇಬೀಡಿನಲ್ಲಿ ಜಾಗೃತಿ: ಬಿಳಿಕೆರೆ ಹೋಬಳಿಯ ಹಳೇಬೀಡು ಗ್ರಾಮ ಪಂಚಾಯಿತಿಯಲ್ಲಿ ಎಸ್ ఐఆరా ಕುರಿತು ನಡೆಸಿದ ಜಾಗೃತಿ ಕಾರ್ಯಕ್ರಮದಲ್ಲಿ ಪಿಡಿಒ ರಾಮಣ್ಣ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮತದಾರರ ಪರಿಷ್ಕರಣೆಯಲ್ಲಿ ಯಾರೊಬ್ಬರೂ ತಪ್ಪಿಸಿಕೊಳ್ಳದೆ ಮತವನ್ನು ಖಾತರಿಪಡಿಸಿಕೊಳ್ಳಿ ಎಂದರು.
బిఇಓ ಕಾಳನಾಯಕ, ವಿ.ಎ. ಮೂರ್ತಿಕುಮಾರ್, ಗ್ರಾ.ಪಂ. ಕಾರ್ಯದರ್ಶಿ ಸೇಲಿನ್ ಡಿಸೋಜಾ, ಐಇಸಿ ಸಂಯೋಜಕಿ ಪುಷ್ಪವತಿ, ಬಿಎಲ್‌ಗಳು, ಮುಖ್ಯಶಿಕ್ಷಕ ಗುರುಮೂರ್ತಿ, ಶಾಲೆಗಳ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಎಂಬಿಕೆ, ಎಲ್‌ಸಿಆರ್‌ಪಿ ಇತರರಿದ್ದರು.
ಹನಗೋಡಿನಲ್ಲಿ ಎಸ್‌ಐಆರ್ ಜಾಥಾ: ಸರ್ಕಾರಿ ಪ್ರಮಾಣಿ, ಚಿಕ್ಕಹುಣಸೂರ, ಹನಗೋಡು ಸರಕಾರಿ ಪ್ರೌಢಶಾಲೆಯ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಗ್ರಾಮದಲ್ಲಿ ವಿದ್ಯಾರ್ಥಿಗಳು ಎಸ್‌ಐಆರ್ ಜಾಗೃತಿ ಜಾಥಾ ನಡೆಸಲಾಯಿತು. ಬಸ್ ನಿಲ್ದಾಣ ವೃತ್ತದಲ್ಲಿ ಮಾನವ ಸರಪಳಿ నిమి౯సి ಗಮನ ಸೆಳೆಯಲಾಯಿತು. ಮತದಾರರ ಪರಿಷ್ಕರಣೆಯಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ ತಮ್ಮ ಮತದ ಬಗ್ಗೆ ಖಾತರಿ ಪಡಿಸಿಕೊಳ್ಳಿ ಎಂದು ಪ್ರಾಚಾರ್ಯ ಸಂತೋಷ್ ಕುಮಾರ್ ಮನವಿ ಮಾಡಿದರು.







