ಹೊಸೂರು(ಸಂಘಟನೆ ಮಂಜುನಾಥ್) : ರಾಜ್ಯದ 25 ನೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆಯೇ ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ಡಿಕೆಶಿ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು
ಇಲ್ಲಿನ ಆಸ್ಪತ್ರೆ ವೃತ್ತದಲ್ಲಿ ಯುವ ಕಾಂಗ್ರೇಸ್ ಮುಖಂಡ ಡೈರಿಮಾದು ನೇತೃತ್ವದಲ್ಲಿ ಸಮಾವೇಶ ಗೊಂಡ ಕಾಂಗ್ರೇಸ್ ಕಾರ್ಯಕರ್ತರು ಸಿಹಿ ಹಂಚಿ ಡಿ.ಕೆ.ಶಿವಕುಮಾರ್ ಅವರಿಗೆ ಜಯಕಾರಕೂಗಿ ಹರ್ಷ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಯುವ ಕಾಂಗ್ರೇಸ್ ಮುಖಂಡ ಡೈರಿಮಾದು ಡಿಕೆ ಶಿವಕುಮಾರ್ ಅವರ ಪಕ್ಷ ನಿಷ್ಠೆಗೆ ಮುಖ್ಯಮಂತ್ರಿ ಸ್ಥಾನ ದೊರೆತ್ತಿದ್ದು ಇವರ ಅಧಿಕಾರದ ಅವಧಿಯಲ್ಲಿ ರೈತಪರ ಕೆಲಸ ಮಾಡಿ ಕೆ.ಆರ್.ನಗರ ಕ್ಷೇತ್ರದ ಅಭಿವೃದ್ದಿಗೆ ಒತ್ತು ನೀಡಿ ಯುವ ಶಾಸಕ ಡಿ.ರವಿಶಂಕರ್ ಅವರ ಕೈ ಬಲ ಪಡಿಸ ಬೇಕೆಂದರು

ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಸದಸ್ಯ ಲತಾಪ್ರಭಾಕರ್, ಹೊಸೂರು ಡೈರಿ ಮಾಜಿ ಅಧ್ಯಕ್ಷರಾದ ಎಚ್.ಆರ್.ಪರುಶುರಾಮ್, ಎಚ್.ಎಸ್.ರವಿ, ಮಾಜಿ ಗ್ರಾಪಂ ಉಪಾಧ್ಯಕ್ಷ ಸಾಲೆಕೊಪ್ಪಲು ನೂತನ ಗೌಡ, ಗ್ರಾ.ಪಂ.ಮಾಜಿ ಸದಸ್ಯ ಸಾಧಿಕ್ ಪಾಷ, ಸೊಸೈಟಿ ನಾಗರಾಜು, ಹೊಸೂರು ಬಲರಾಮ್, ಮುಖಂಡರಾದ ಹಳಿಯೂರು ಮಾರುತಿ, ಪ್ರವೀಣ, ಕಾಂತರಾಜು ಹೆಚ್. ಡಿ, ದಿಡ್ಡಹಳ್ಳಿ ಬಲರಾಮ್, ಗಂಗಾಧರ್, ವೆಂಕಟೇಶ್, ಟ್ಯೂಬ್ ಹರೀಶ್, ಗ್ಯಾರಂಟಿ ಯೋಜನೆಯ ಮಹಾಲಿಂಗಣ್ಣ, ಜಬೀವುಲ್ಲಾ, ಸೇರಿದಂತೆ ಮತ್ತಿತರರು ಹಾಜರಿದ್ದರು.








