ಹುಣಸೂರು(ಮನುಕುಮಾರ್): ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರ 59ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪಟಾಕಿ ಸಿಡಿಸಿ ಹೂಮಳೆಗೈಯುವ ಮೂಲಕ ಶುಭ ಹಾರೈಸಿದರು.
ಕಳೆದ ಎರಡು ದಿನಗಳಿಂದ ಕುಟುಂಬ ಸಮೇತರಾಗಿ ಧರ್ಮಸ್ಥಳ, ಸೌತಡ್ಕ ದೇವಾಲಯಗಳಿಗೆ ಭೇಟಿ ನೀಡಿದ್ದ ಎಚ್.ಪಿ.ಮಂಜುನಾಥ್ ಅವರು ವಿಶೇಷ ಪೂಜೆ ಸಲ್ಲಿಸಿ, ಡಾ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದರು.

ಧರ್ಮಸ್ಥಳದಿಂದ ಮಂಗಳವಾರ ಸಂಜೆ ನಗರಕ್ಕೆ ಆಗಮಿಸಿದ ಮಂಜುನಾಥ್ ಅವರು ಅಜ್ಜಿ ತಂದೆ-ತಾಯಿಯವರಿಂದ ಆಶೀರ್ವಾದ ಪಡೆದರು. ನಂತರ ನಗರದ ಸಾಯಿಬಾಬಾ ಮಂದಿರದಲ್ಲಿ ಆಯೋಜಿಸಿದ್ದ ವಿಶೇಷ ಪೂಜೆಯಲ್ಲಿ ಭಾಗಿಯಾದರು. ಆವರಣದ ವೇದಿಕೆಯಲ್ಲಿ ಮಳೆಯ ನಡುವೆಯೇ ಪಕ್ಷದ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಸಂಘ ಸಂಸ್ಥೆಗಳವರಿಂದ ಸನ್ಮಾನ, ಅಭಿನಂದನೆ ಸ್ವೀಕರಿಸಿದರು.
ಇದೇ ರೀತಿ ಮೂಕನಹಳ್ಳಿ, ಸೋಮನಹಳ್ಳಿ, ಬನ್ನಿಕುಪ್ಪೆ, ಮಲ್ಲಿನಾಥಪುರ, ಬಿಳಿಕೆರೆ, ಮನುಗನಹಳ್ಳಿ ಚೆಕ್ಪೋಸ್ಟ್ ಮತ್ತಿತರ ಕಡೆಗಳಲ್ಲಿ ಅಭಿಮಾನಿಗಳು ಮಂಜುನಾಥ್ ಅವರನ್ನು ಅಭಿನಂದಿಸಿ ಹುಟ್ಟುಹಬ್ಬದ ಶುಭಕೋರಿದರು.

60 ಕೆ.ಜಿ.ಕೇಕ್ ಕಟ್: ಯುವ ಕಾಂಗ್ರೆಸ್ ಮುಖಂಡರು ತಂದಿದ್ದ 60 ಕೆ.ಜಿಯ ಬೃಹತ್ ಕೇಕ್ ಅನ್ನು ಕತ್ತರಿಸಿದ ಮಂಜುನಾಥ್ ಅವರು, ಅಭಿಮಾನಿಗಳಿಗೆ ತಿನ್ನಿಸಿದರು. ಮಾಜಿ ಎಂಎಲ್ಸಿ ಪುಟ್ಟಸಿದ್ದಶೆಟ್ಟಿ ಹನಗೋಡಿನ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಕಾರ್ತಿಕ್ ಮತ್ತವರ ಸ್ನೇಹಿತರು, ಉದ್ಯಮಿಗಳಾದ ರಾಜುಶಿವರಾಜೇಗೌಡ, ಟಿ.ಕೃಷ್ಣ ಅಸ್ಕರ್ಪಾಷ, ಕೆ. ಗಣೇಶ್, ವಿನೋದ್ಕುಮಾರ್, ಕಾಂಗ್ರೆಸ್ ಪದಾಧಿಕಾರಿಗಳಾದ ಕಾರಿಗಳಾದ ರವಿಪ್ರಸನ್ನ
ಪ್ರೇಮ್ ಕುಮಾರ್, ಗದ್ದಿಗೆ ದೇವರಾಜ್, ಗಣಪತಿರಾವ್ ಇಂಡೋಲ್ಕರ್, ಬಾಲ ಸುಂದರ್, ರಾಮೇಗೌಡ, ಸುನಿತಾ ಜಯರಾಮೇಗೌಡ, ಸುಮಿತ್ರ, ದರ್ಶನ್, ಫೈಸಲ್, ರೇವಣ್ಣ, ಹೊಂಬೇಗೌಡ, ರೂಪಾ ನಂದೀಶ್, ಶಾಂತ ರಮೇಶ್, ಕುಮಾರ್, ರಾಘು, ಚಿನ್ನವೀರಯ್ಯ, ಕನಕ ನೌಕರರ ಸಂಘ, ಸಂಗೊಳ್ಳಿರಾಯಣ್ಣ ಸಂಘದ ಅಧ್ಯಕ್ಷ ಅಶೋಕ್, ರಾಯರಾವುತ್ ಸಮಾಜದ ಜಯರಾಂ, ವಕೀಲರ ಸಂಘದ ಅಧ್ಯಕ್ಷ ಶಿವಣ್ಣೆಗೌಡ, ಪಿಡಿಒ ಸಂಘದ ಅಧ್ಯಕ್ಷ ರಾಮಣ್ಣ, ಕೆಂಪನಾಯಕ, ಅಣ್ಣಯ್ಯನಾಯಕ, ಮಂಚನಾಯಕ, ರಾಜನಾಯಕ ಇತರರಿದ್ದರು. ವಿವಿಧ ಇಲಾಖೆ ಅಧಿಕಾರಿಗಳು ಅಭಿನಂದಿಸಿದರು.

ಅಭಿಮಾನಕ್ಕೆ ಚಿರಋಣಿ: ಅಭಿನಂದನೆ ಸ್ವೀಕರಿಸಿ ಮಾತನಾಡಿದ ಎಚ್.ಪಿ.ಮಂಜುನಾಥ್ ಅವರು, “ನಾನು ಅಧಿಕಾರದಲ್ಲಿ ಇಲ್ಲದಿದ್ದರೂ ನಿಮ್ಮ ಅಭಿಮಾನ, ಪ್ರೀತಿ ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ. ಎಂದಿನಂತೆ ಜನಸೇವೆ ಮುಂದುವರೆಸಲು ಶಕ್ತಿ ತುಂಬಿದ್ದೀರಿ,” ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದಿರಿ, ಮುಂದಿನ ದಿನಗಳಲ್ಲಿ ನಿಮ್ಮಗಳ ಜೊತೆಗೆ ಸದಾಕಾಲವೂ ನಿಂತಿದ್ದು, ಮುಂದೆಯೂ ನಿಮ್ಮ ಸುಖ- ದುಃಖದಲ್ಲಿ ಭಾಗಿಯಾಗುವುದಾಗಿ ತಿಳಿಸಿ ಅಭಿಮಾನದ ಮಾತುಗಳನ್ನಾಡಿದರು.








