LatestMysore

ಹುಣಸೂರು ತಾಲೂಕು ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಎಚ್.ಪಿ.ಗಿರೀಶ್, ಪ್ರ.ಕಾರ್ಯದರ್ಶಿಯಾಗಿ ಎಚ್ ಆರ್. ಕೇಶವ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ):  ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಎಚ್.ಪಿ.ಗಿರೀಶ್ ಹಾಗೂ ಪ್ರಧಾನ  ಕಾರ್ಯದರ್ಶಿಯಾಗಿ ಎಚ್ ಆರ್. ಕೇಶವ ಅವಿರೋಧ ಆಯ್ಕೆಯಾಗಿದ್ದಾರೆ.

ಉಳಿದಂತೆ ಎ.ವಿ.ಬಾಲರಾಜ್ ಹಾಗೂ ಭಾಗ್ಯಮೇರಿ (ಉಪಾಧ್ಯಕ್ಷೆ), ಎಚ್.ಪಿ.ವೀರಭದ್ರಪ್ಪ ಹಾಗೂ ಬಿ.ಟಿ.ಗೀತಾ (ಸಹಕಾರ್ಯದರ್ಶಿಗಳು), ಕೆ.ಸಿ.ಬಸವರಾಜು ಹಾಗೂ ಎಂ.ಎಸ್.ಶೋಭಾ (ಸಂಘಟನಾ ಕಾರ್ಯದರ್ಶಿ) ಮತ್ತು ಎಂ.ಇ. ನಂಜುಂಡ (ಖಜಾಂಚಿ) ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ ಎಂದು ಚುನಾವಣಾಧಿಕಾರಿ ಬಿಇಒ ಎಚ್.ಕಾಳನಾಯಕ ತಿಳಿಸಿದ್ದಾರೆ.

ಆಯ್ಕೆ ಪ್ರಮಾಣ ಪತ್ರ ವಿತರಿಸಿ ಬಿಇಒ ಕಾಳನಾಯಕ ಮಾತನಾಡಿ, “ನೂತನವಾಗಿ ಪದಾಧಿಕಾರಿಗಳು ಆಯ್ಕೆಯಾಗಿರುವ ತಾಲೂಕಿನ ಶೈಕ್ಷಣಿಕ ಪ್ರಗತಿಯ ಜತೆಗೆ ಶಿಕ್ಷಕರ ಸಮಸ್ಯೆಗಳಿಗೆ ಸಂದಿಸಬೇಕು. ಏನೇ ಸಮಸ್ಯೆ ಇದ್ದರೂ ಗಮನಕ್ಕೆ ತಂದರೆ ನಿಯಮಾನುಸಾರೆ ಕೆಲಸ ಮಾಡಿಕೊಡಲಾಗುವುದು.  ತಾವು ಇದೇ ತಾಲೂಕಿನವನಾಗಿದ್ದು, ಶಿಕ್ಷಕ ಸ್ನೇಹಿಯಾಗಿ ಕಾರ್ಯನಿರ್ವಹಿಸುವೆ. “ಇದಕ್ಕೆ ಎಲ್ಲರ ಸಹಕಾರವಿರಲಿ” ಎಂದು ಕೋರಿದರು.

ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಶಿಕುಮಾರ್, ತಾಲೂಕು ಅಧ್ಯಕ್ಷ ಗಿರೀಶ್, ಪ್ರಧಾನ ಕಾರ್ಯದರ್ಶಿ ಕೇಶವ್ ಹಾಗೂ ತಾಲೂಕು ಸಂಘದ ಮಾಜಿ ಅಧ್ಯಕ್ಷ ಚನ್ನವೀರಪ್ಪ ಮಾತನಾಡಿ, “ಬಿಇಒ ಕಚೇರಿಯಲ್ಲಿ ಶಿಕ್ಷಕರ ಸವಲತ್ತು ದೊರಕುವಂತೆ ಹಾಗೂ ಅಗತ್ಯ ಕೆಲಸಗಳು ಸಕಾಲದಲ್ಲಿ ಆಗುವಂತೆ ಸಹಕಾರ ನೀಡಬೇಕು” ಎಂದು ಮನವಿ ಮಾಡಿದರು.  ಬಿಇಒ ಕಚೇರಿಯ ವ್ಯವಸ್ಥಾಪಕ ಗಣೇಶ್, ಎನ್‌ಪಿಎಸ್ ಸಂಘದ ಅಧ್ಯಕ್ಷ ಜಯಕುಮಾರ್ ಮಾತನಾಡಿದರು.

ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷ ಸ್ವಾಮಿ ಸೇರಿದಂತೆ ಹಲವಾರು ಶಿಕ್ಷಕರು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು. ಕಸಾಪ ತಾಲೂಕು ಅಧ್ಯಕ್ಷ ಹರವೆಮಹದೇವ್, ಇಸಿಒಗಳಾದ ಕೇಶವಮೂರ್ತಿ, ರುದ್ರಪ್ಪ ಸೇರಿದಂತೆ ಅನೇಕ ಶಿಕ್ಷಕರಿದ್ದರು.

admin
the authoradmin

Leave a Reply

Translate to any language you want