LatestNews

ದುಬಾರೆಯ ಸಾಕಾನೆ ಶಿಬಿರಕ್ಕೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಭೇಟಿ

ಕುಶಾಲನಗರ (ರಘುಹೆಬ್ಬಾಲೆ) : ಕೊಡಗು ಜಿಲ್ಲಾ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ದುಬಾರೆ ಸಾಕಾನೆ ಶಿಬಿರಕ್ಕೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹಾಗೂ ಕುಟುಂಬ ಸಮೇತ ಭೇಟಿ ನೀಡಿ ಸಾಕಾನೆ ಶಿಬಿರ ವೀಕ್ಷಣೆ ಮಾಡಿದರು.

ಸಾಕಾನೆ ಶಿಬಿರ ಹಾಗೂ ಸುತ್ತಮುತ್ತಲ ಪರಿಸರ ವೀಕ್ಷಣಾಲಯದ ಮಾಡಿದ ಅವರು ಸಾಕಾನೆ ಶ್ರೀರಾಮ ದೊಂದಿಗೆ ಸೆಲ್ಫಿ ತೆಗೆದುಕೊಂಡ ಸಂತಸ ಪಟ್ಟರು. ಎರಡು ದಿನಗಳು ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿಗಳು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಕುಟುಂಬಸ್ಥರೊಂದಿಗೆ ಭೇಟಿ ಸುಂದರ ಪ್ರಕೃತಿ ಸೌಂದರ್ಯವನ್ನು ವೀಕ್ಷಣೆ ಮಾಡಿದ ಸಂಭ್ರಮಿಸಿದರು.

ಈ ಸಂದರ್ಭ ಎಸಿಎಫ್ ಗೋಪಾಲ್, ವಲಯ ಅರಣ್ಯಾಧಿಕಾರಿ ರಕ್ಷಿತ್ ಹಾಗೂ ದುಬಾರೆ ಉಪ ವಲಯ ಅರಣ್ಯಾಧಿಕಾರಿ ರಂಜನ್ ಹಾಗೂ ಸಿಬ್ಬಂದಿ, ಮಾವುತರು  ಭಾಗವಹಿಸಿದ್ದರು.

admin
the authoradmin

Leave a Reply