ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಎಂದಿನ ಶಿಕ್ಷಣದೊಂದಿಗೆ ಕ್ರೀಡೆಯಲ್ಲಿ ಶ್ರಮಪಟ್ಟರೆ ಜೀವನದಲ್ಲಿ ಯಶಸ್ಸು ಖಚಿತ ಎಂದು ತಾಲೂಕಿನ ಸುಗ್ಗನಹಳ್ಳಿಯ ವಿಜೇತ ಇಂಟರ್‌ನ್ಯಾಷನಲ್ ಶಾಲೆಯ ಅಧ್ಯಕ್ಷೆ ಬೇಬಿ ಮಹೇಶ್ ಹೇಳಿದರು.
ಇತ್ತೀಚೆಗೆ ತಮಿಳುನಾಡಿನ ತೂತುಕುಡಿ ಮತ್ತು ತೆನಕಾಸಿಯಲ್ಲಿ ನಡೆದ ಸೌತ್‌ಜೋನ್ ಇಂಟರ್‌ನ್ಯಾಷನಲ್ ಓಪನ್‌ಸ್ಟೇಟ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಪಡೆದ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾವರಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿಪತ್ರ ಮತ್ತು ಪಾರಿತೋಷಕವನ್ನು ವಿತರಿಸಿ ಮಾತನಾಡಿದರು. ಶಿಕ್ಷಣ ಹಾಗೂ ಕ್ರೀಡೆ ಎಂಬುದು ಒಂದುನಾಣ್ಯದ ಎರಡು ಮುಖ ಇದ್ದಹಾಗೆ ಶಿಕ್ಷಣದೊಂದಿಗೆ ಕ್ರೀಡೆಯನ್ನು ಮೈಗೂಡಿಸಿಕೊಂಡು ಬೆವರುಹರಿಸಿದಲ್ಲಿ ಭವಿಷ್ಯದಲ್ಲಿ ಜೀವನ ಉತ್ತುಂಗಕ್ಕೆ ಏರಲು ಸಾಧ್ಯವಾಗುತ್ತದೆ ಎಂದರು.
ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಶಿಕ್ಷಣಕ್ಕೆ ಎಷ್ಟು ಒತ್ತುನಿಡುತ್ತೀರೋ ಅಷ್ಟೆ ಒತ್ತನ್ನು ಕ್ರೀಡೆಗೂ ನೀಡಿ ಬೆಳೆಸಿದಲ್ಲಿ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲಿದ್ದು ಇದರಿಂದ ಮಕ್ಕಳು ಉತ್ತಮಹಂತಕ್ಕೆ ಹೋಗಿ ತಂದೆತಾಯಿಯರಿಗೆ ಹಾಗೂ ಉಟ್ಟೂರಿಗೆ ಹೆಸರು ತರಲು ಸಾಧ್ಯವಾಗುತ್ತದೆ ಎಂದರು.

ತಮಿಳುನಾಡಿನ ತೂತುಕುಡಿ ಮತ್ತು ತೆನಕಾಸಿಯಲ್ಲಿ ನಡೆದ ಸೌತ್‌ಜೋನ್ ಇಂಟರ್‌ನ್ಯಾಷಿನಲ್ ಓಪನ್‌ಸ್ಟೇಟ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಅಂತರರಾಜ್ಯ ವಿದ್ಯಾರ್ಥಿಗಳೊಂದಿಗೆ ಸೆಣಸಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗಳಿಸಿದ ವಿದ್ಯಾರ್ಥಿಗಳಾದ ಹೆಚ್.ಸಿ.ಶಾರ್ವಿನ್, ನಿತ್ವಿಕ್, ಮೌಲ್ಯ, ಹೇಮಂತ್, ಪೋಷಿತಾಶ್ರೀ, ವೇದಾಂತ್‌ರನ್ನು ಹಾಗೂ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದ ಗೋಲ್ಡ್ ಕಾಯಿನ್ ಸ್ಕೇಟಿಂಗ್ ಕಾಂಫಿಟೇಷನ್‌ನಲ್ಲಿ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿ ಶಾರ್ವಿನ್‌ನನ್ನು ಸನ್ಮಾನಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ಹೆಚ್.ಸಿ.ಮಹೇಶ್, ಶಾಲೆಯ ಸ್ಕೇಟಿಂಗ್ ಕೋಚ್ ಮುಸಾವೀರ್ ಪಾಷ ಶಾಲಾ ಸಿಬ್ಬಂದಿವರ್ಗ, ಪೋಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.








