ಮೈಸೂರು: ದೀನ ದುರ್ಬಲರ ಬದುಕಿನ ಉದ್ದಾರಕಕ್ಕೆ ಜೀವನ ಸವೆಸಿದ ಸಂತ ಮಹಾಂತ ಶ್ರೀ ಮುಮ್ಮಡಿ ನಿರ್ವಾಣ ಮಹಾ ಸ್ವಾಮಿಗಳು ಎಂದು ಕಲಾ ಬಳಗದ ಅಧ್ಯಕ್ಷರು ಮತ್ತು ಜಿಲ್ಲಾ ಮಹಾ ಸಭಾ ನಿರ್ದೇಶಕರಾದ ಕಲ್ಮಳ್ಳಿ ನಟರಾಜು ಅಭಿಪ್ರಾಯಪಟ್ಟರು.

ನಗರದ ಶ್ರೀ ಶಿವರಾತ್ರಿ ರಾಜೇಂದ್ರ ಕಲಾ ಬಳಗ ಮೈಸೂರು ಇದರ ವತಿಯಿಂದ ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನದ ಹತ್ತಿರದ ಶಿವ ಸನ್ನಿಧಿ ಗೆಳೆಯರ ಬಳಗದ ಕಚೇರಿಯಲ್ಲಿ ಅಗಲಿದ ಚೇತನ ಡಾ ಮುಮ್ಮಡಿ ನಿರ್ವಾಣ ಮಹಾ ಸ್ವಾಮಿಗಳವರ ನುಡಿ ನಮನ ಕಾರ್ಯಕ್ರಮದಲ್ಲಿ ಪೂಜ್ಯರ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡಿ ಉದ್ಘಾಟಸಿ ಮಾತನಾಡಿದರು.

ಸರ್ಕಾರಿ ಉದ್ಯೋಗ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸುವುದು ಅಷ್ಟ್ಟು ಸುಲಭದ ಮಾತಲ್ಲ ಲೌಕಿಕವಾಗಿ ವೈಯಕ್ತಿಕ ಬದುಕನ್ನು ಹಸನುಮಾಡಿ ಕೊಳ್ಳುವುದರಿಂದ ನಾನು ಸುಖ ಸಂತೋಷವಾಗಿ ಜೀವಿಸಬಹುದೇ ಹೊರತು ದುರ್ಬಲರ ಬದುಕಿಗೆ ಆಸರೆಯಾಗಲು ಸಾಧ್ಯವಿಲ್ಲ ಎನ್ನುವ ಅಂತರ್ಯದ ಒಳ ದನಿಗೆ ಕಿವಿಗೊಟ್ಟು ಕೌಟುಂಬಿಕ ಬದುಕಿನಿಂದ ಹೊರ ಬಂದು ತಾವು ಸ್ವೀಕರಿಸಿ ಸಂತ ಪದವಿಯನ್ನು ತಪಸ್ಸು ಎಂದು ಪರಿಗಣಿಸಿ ಅದಕ್ಕೆ ತಮ್ಮ ಜೀವಿತ ಅವಧಿಯಲ್ಲಿ ಕಿಂಚಿತ್ತೂ ಕಳಂಕ ಬಾರದಂತೆ ಅನ್ನ ಜ್ಞಾನ ಆಶ್ರಯ ನೀಡಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜೀವನ ರೂಪಿಸಿಕೊಟ್ಟ ಮಾತೃಹೃದಯದ ಸಂತ ಮಹಾಂತ ಎಂದರೆ ಅತಿಶಯೋಕ್ತಿ ಆಗಲಾರದು ಎಂದರು.
ತಮ್ಮ ಸೇವೆಗೆ ಜಾತಿ ಮತ ಪಂಥ ಯಾವುದನ್ನು ನೋಡದೆ ಸದ್ದಿಲ್ಲದೇ ಸೇವೆ ಗೈದ ನಡೆದಾಡುವ ದೇವರೆಂದೇ ಕರೆಯಿಸಿ ಕೊಂಡ ಲಿಂಗೈಕ್ಯ ಸಿದ್ದ ಗಂಗಾ ಮಠದ ಪೂಜ್ಯ ಡಾ ಶಿವ ಕುಮಾರ ಮಹಾ ಸ್ವಾಮಿಗಳು ಸೇವಾ ಬದುಕನ್ನೇ ಅನುಸರಿಸಿ ಆ ದಿಸೆಯಲ್ಲಿ ದೇಗುಲ ಮಠವನ್ನು ಮುನ್ನಡೆಸಿ ಸೇವಾ ಮುಕುಟ ಪ್ರಾಯರಾಗಿ ಕನಕಪುರದ ಹೆಸರಿಗೆ ತಕ್ಕಂತೆ ಅಮೂಲ್ಯ ಕನಕ ನಿಧಿಯಾದರು.

ಶರಣರ ಗುಣವನ್ನು ಮರಣದಲ್ಲಿ ನೋಡು ಎನ್ನುವಂತೆ ಈ ಮಹಾ ಚೇತನ ಅಗಲಿದ ದಿನ ಅವರನ್ನು ನೋಡಲು ಬಂದ ಎಲ್ಲ ಜಾತಿಯ ಭಕ್ತ ಸಮೂಹ ಸಾಗರೋಪಾದಿಯಲ್ಲಿ ಹರಿದು ಬಂದದ್ದನ್ನು ನೋಡಿದರೆ ಶರಣರಿಗೆ ಸಾವಿಲ್ಲ ಅವರು ನಿತ್ಯ ಮುಕ್ತರು ಸದಾ ಭಕ್ತರ ಹೃದಯದಲ್ಲಿ ಮನೆ ಮಾಡಿದ್ದಾರೆ. ಅನೇಕ ಶಿಕ್ಷಣದಿಂದ ಮಾತ್ರ ವ್ಯಕ್ತಿತ್ವ ವಿಕಾಸ ಮತ್ತು ಜೀವನ ಉದ್ದಾರ ಮಾಡಬಹುದು ಎನ್ನುವ ಆಶಯ ಅರಿತು ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು.

ತನ್ನ ಬಳಿಗೆ ಬರುವ ಮಕ್ಕಳಿಗೆ ಪ್ರತಿ ಹಳ್ಳಿಗಳಲ್ಲಿ ಧಾನ್ಯಧ ಭಿಕ್ಷೆಗೆ ಬಂದ ಸಂದರ್ಭದಲ್ಲಿ ಬಡ ಕುಟುಂಬದ ಮಕ್ಕಳು ಇದ್ದಲ್ಲಿ ಜೊತೆಗೆ ಕರೆದುಕೊಂಡು ಹೋಗಿ ಶಿಕ್ಷಣ ಮುಗಿಯುವವರೆಗೂ ಶಿಕ್ಷಣವೆಚ್ಚ ಭರಿಸಿ ನೀನು ಉದ್ಯೋಗ ಪಡೆದ ನಂತರ ಅಶಕ್ತ ಮಕ್ಕಳಿಗೆ ನೆರವಾದರೆ ನನಗೆ ನೀಡಿದ ಗುರು ಕಾಣಿಕೆ ಎಂದು ಆಶೀರ್ವದಿಸಿ ಮಠಕ್ಕೆ ಆಗಾಗ್ಗೆ ಬಂದು ಹೋಗುವಂತೆ ತಿಳಿಸುತ್ತಿದ್ದರು ಎಂದು ಅಲ್ಲಿ ಶಿಕ್ಷಣ ಪಡೆದು ಬದುಕು ಕಟ್ಟಿ ಕೊಂಡಿರುವ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಕುಗ್ರಾಮಗಳಿಂದ ಬಂದು ಶಿಕ್ಷಣ ಪಡೆದು ಉತ್ತಮ ಬದುಕು ಕಟ್ಟಿ ಕೊಂಡಿರುವ ಸ್ನೇಹಿತರು ಈ ಕಾರ್ಯಕ್ರಮಕ್ಕೆ ಬಂದಿರುವ ಡಾ ಕೆ ವಿ ಯೋಗೇಶ್ ಮತ್ತು ಮಹಾದೇವ ಸ್ವಾಮಿ ಅವರೇ ಸಾಕ್ಷಿ ಎಂದರು

ಭೂಮಿಯ ಹುಟ್ಟಿದ ಎಲ್ಲರೂ ಬಸವಣ್ಣ ಸುತ್ತೂರು ಮಠದ ರಾಜೇಂದ್ರ ಸ್ವಾಮೀಜಿ ಸಿದ್ದೇಶ್ವರ, ಸ್ವಾಮೀಜಿ ಶಿವಕುಮಾರ ಸ್ವಾಮೀಜಿ ಪುಟ್ಟ ರಾಜ ಗವಾಯಿ ಆಗಲಿಕ್ಕೆ ಸಾಧ್ಯವಿಲ್ಲ ಭೋಗ ಜೀವನ ಧಿಕ್ಕರಿಸಿ ನೊಂದವರ ಕಣ್ಣೀರು ಒರೆಸುವ ತ್ಯಾಗ ಜೀವಿ ಮಾತ್ರ ದೈವತ್ವಕ್ಕೆ ಏರಲು ಸಾಧ್ಯ ಅಂತಹ ಮಾನವ ರೂಪದಲ್ಲಿ ಭೂಮಿಗೆ ಬಂದು ಅಂತಿಮವಾಗಿ ದೇವನಾಗುವ ಬಗ್ಗೆ ಬಸವಣ್ಣ ಹೇಳುವಂತೆ ಮರ್ತಲೋಕವೆಂಬುದು ಕರ್ತರನ ಕಮ್ಮಟ ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವವರಯ್ಯ ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು ಎನ್ನುವಂತೆ ಬದುಕಿದ್ದಾಗಲೇ ದೇವರಾದರೂ ಅಂತ ಚೈತನ್ಯಸ್ಮರಿಸಿ ಕಿಂಚಿತ್ ಅನುಸರಿಸಿದರೆ ಮನುಷ್ಯರಾಗಿ ನಮ್ಮ ಜೀವನ ಸಾರ್ಥಕ ಎಂದರು
ಕಾರ್ಯಕ್ರಮದಲ್ಲಿ ಡಾ ಕೆ ವಿ ಯೋಗೀಶ್ ಮಹದೇವಸ್ವಾಮಿ ತಮ್ಮ ಅನಿಸಿಕೆ ಹಂಚಿ ಕೊಂಡರು. ಮಹೇಶ್ ಪರಾಮಪುರ, ಶಿಕ್ಷಕ ಕೊತ್ತಲವಾಡಿ ಸಿದ್ದರಾಮೇಶ, ಎಲಕ್ಕೂರು ನಾಗೇಂದ್ರ, ಕಾಮಗೆರೆ ಬಸವಣ್ಣ, ಬಾಣಹಳ್ಳಿ ಸಂತೋಷ ಭಜನೆ ಮತ್ತು ವಚನ ಚೂಡಾಮಣಿ ವಚನ ಗಾಯನ ನಡೆಸಿ ಕೊಟ್ಟರು.

ಕಾರ್ಯಕ್ರಮದಲ್ಲಿ ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೋಮಶೇಖರ್, ರಂಗ ಕಲಾವಿದ ಮುಳ್ಳೂರ್ ಪಾರ್ವತಪ್ಪ, ಶಿವಕುಮಾರ್ ಸಿದ್ದಲಿಂಗ ಸ್ವಾಮಿ ಗುರು ಪಾದ, ಮೈಸೂರು ನಗರ ವೀರಶೈವ ಘಟಕದ ನಿರ್ದೇಶಕ ಪಡಗೂರು ಮಹದೇವಸ್ವಾಮಿ, ಪ್ರಾಂಶುಪಾಲರಾದ ಮಂಜಣ್ಣ ಮೈಸೂರು ನಗರ ವೀರಶೈವ ಮಹಾ ಸಭಾ ನಿರ್ದೇಶಕಿ ಶ್ರೀಮತಿ ಶಿಲ್ಪಾ, ಬಸವ ಬಳಗ ಪೂರ್ವ ವಲಯದ ಕಾರ್ಯದರ್ಶಿ ಲೋಹಿತ್ ಕೆರ ಹಳ್ಳಿ, ಪುಟ್ಟ ಬುದ್ದಿ, ಪ್ರಭುಸ್ವಾಮಿ ಮತ್ತು ಚೇತನ್ ಕುಮಾರ್ ಸಿದ್ದೇಶ್ ಶ್ರೀಮತಿ ಮಾನಸ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಮತ್ತು ರಾಜೇಂದ್ರ ಬಳಗದ ಕಲಾವಿದ ಪ್ರಭು ಸ್ವಾಮಿ ತಳೂರು ಮತ್ತು ಜೆ ಎಸ್ ಎಸ್ ಶಿಕ್ಷಣ ಸಂಸ್ಥೆ ಮಾರಿಸಸ್ ದೇಶಕ್ಕೆ ಉದ್ಯೋಗಕ್ಕೆ ತೆರಳುತ್ತಿರುವ ಬಳಗದ ಕಲಾವಿದ ಚೇತನ್ ಕುಮಾರ್ ರವರಿಗೆ ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಅಭಿನಂದಿಸಿ ಬೀಳ್ಕೊಡಲಾಯಿತು.








