LatestMysore

ಅಭಿವೃದ್ಧಿಯೇ ನಿಜವಾದ ಸ್ವಾತಂತ್ರ್ಯ: ಗ್ರಾ.ಪಂ. ಸದಸ್ಯ ಮನುಕುಮಾರ್  ಅಭಿಮತ

ಹುಣಸೂರು.(ನಂಜಾಪುರ ಮನುಕುಮಾರ್): ಅಭಿವೃದ್ಧಿಯೇ ನಿಜವಾದ ಸ್ವಾತಂತ್ರ. ಶಾಂತಿಯುತ ಸಮಾಜವಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಪತ್ರಕರ್ತ ಗ್ರಾ.ಪಂ. ಸದಸ್ಯ ಮನುಕುಮಾರ್ ತಿಳಿಸಿದರು.

ತಾಲ್ಲೂಕಿನ ನಂಜಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ  ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು ಇತ್ತೀಚಿನ ವರ್ಷಗಳಲ್ಲಿ  ವಿದ್ಯಾವಂತರೇ ಸರ್ಕಾರಿ ಶಾಲೆಗಳ ಬಗ್ಗೆ ಆಲೋಚಿಸದಿರುವುದು ಹಾಗೂ ತಮ್ಮ ಮಕ್ಕಳನ್ನು ಸೇರಿಸದಿರುವುದು ಬಹಳ ನೋವಿನ ಸಂಗತಿ. ಸರ್ಕಾರಿ ಶಾಲೆಗಳಲ್ಲಿ ಓದಿ ಉತ್ತಮವಾದ ಕೆಲಸಗಳಲ್ಲಿ ತೊಡಗಿಕೊಂಡು ಕೂಡ ಸರ್ಕಾರಿ ಶಾಲೆಗಳ ಉಳಿವಿಗಾಗಿ ಸಹಕರಿಸುತ್ತಿಲ್ಲ, ಕನ್ನಡ ಶಾಲೆಗಳನ್ನು ಉಳಿಸಿ ಎಂದು ಪ್ರತಿಭಟನೆ ಮಾಡುವ ಕನ್ನಡ ಹೋರಾಟಗಾರರ ಮಕ್ಕಳೇ ಲಕ್ಷ ಲಕ್ಷ ಹಣ ಕಟ್ಟಿ, ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.

ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದರೆ ಇಂದು ಸಮಾಜವನ್ನು ಆಳುವ ರಾಜಕಾರಣಿಗಳು, ಕನ್ನಡಪರ ಹೋರಾಟಗಾರರು ಶಾಲೆಗಳನ್ನು ಉಳಿಸುವ ಯಾವುದೇ ಜವಾಬ್ದಾರಿಗಳನ್ನು ತೆಗೆದುಕೊಳ್ಳದೆ ಇರುವುದು ಬೇಸರದ ಸಂಗತಿ ಎಂದರು.

ಶಾಲಾ ಮುಖ್ಯ ಶಿಕ್ಷಕ ರಾಮಚಂದ್ರ ಮಾತನಾಡಿ, ನಮ್ಮ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು ಗ್ರಾಮಸ್ಥರೆಲ್ಲ ಗ್ರಾಮದಲ್ಲಿ ಮಾತನಾಡಿ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು‌.

ನಿವೃತ್ತ  ಅಂಗನವಾಡಿ ಶಿಕ್ಷಕಿ ಅನ್ನಪೂರ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯೆ ಶೋಭಾ, ಮಾಜಿ ಸದಸ್ಯರಾದ ಚಂದ್ರಶೇಖರ್ , ಶಿವಕುಮಾರ್, ಯಜಮಾನ ಸೋಮಶೇಖರ್, ಮುಖಂಡರಾದ  ರಾಜು ಮುಕುಂದ ಶೆಟ್ಟಿ, ಅಂಗನವಾಡಿ ಶಿಕ್ಷಕಿ ಪುಷ್ಪ ಸೇರಿದಂತೆ ಗ್ರಾಮಸ್ಥರು, ಮಕ್ಕಳು ಹಾಜರಿದ್ದರು.

admin
the authoradmin

1 Comment

Leave a Reply