ಮೈಸೂರು: 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ: ಪುಸ್ತಕ, ಪತ್ರಿಕೆಗಳ ಪ್ರದರ್ಶನ, ಸನ್ಮಾನ ಕಾರ್ಯಕ್ರಮವು 21.06.2026 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಸಾರ್ವಜನಿಕ ಗ್ರಂಥಾಲಯ, ನಗರ ಕೇಂದ್ರ ಗ್ರಂಥಾಲಯ, ಕುವೆಂಪುನಗರ ಶಾಖೆ, ವಿಶ್ವ ಮಾನವ ಜೋಡಿ ರಸ್ತೆ, ಕುವೆಂಪು ನಗರ, ಮೈಸೂರು ಇಲ್ಲಿ ನಡೆಯಲಿದೆ.

ದೀಪ್ತಿ ಸಾಂಸ್ಕೃತಿಕ ವೇದಿಕೆ, ರಾಮಕೃಷ್ಣನಗರ, ಮೈಸೂರು ಇವರ ವತಿಯಿಂದ 12 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಕಾಳಿಹುಂಡಿ ಶಿವಕುಮಾರ್ ರವರು ಸಂಗ್ರಹಿಸಿರುವ ಯೋಗದ ಕುರಿತಾಗಿ ಪತ್ರಿಕೆಗಳಲ್ಲಿ ಬಂದಿರುವ ಚಿತ್ರ-ಲೇಖನಗಳ ಪ್ರದರ್ಶನ, ಅಲ್ಲದೆ ಯೋಗಕ್ಕೆ ಸಂಬಂಧಪಟ್ಟ ಇಂಗ್ಲಿಷ್ ಮತ್ತು ಕನ್ನಡದ ಪುಸ್ತಕಗಳ ಪ್ರದರ್ಶನ, ಯೋಗ ಸಾಧಕರಿಗೆ “ದೀಪ್ತಿ ಯೋಗಸಾಧಕರು” ಪ್ರಶಸ್ತಿ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಮೇಶ್ ಹೆಚ್ ವಿ, ಪ್ರಭಾರ ದಾರಕರು, ಕುವೆಂಪು ನಗರ ಶಾಖಾ ಗ್ರಂಥಾಲಯ, ಮೈಸೂರು ರವರು ಮಾಡುವರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಣ್ಣೂರು ವಿ ಗೋವಿಂದಾಚಾರಿ, ಹಿರಿಯ ಶುಶ್ರೂಷಕರು, ಆರ್ ಎಂ ಪಿ ಮೈಸೂರು ಇವರು ವಹಿಸುವರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ದೇವರಾಜು, ಸದಸ್ಯರು ಶಾಖಾ ಸಮಿತಿ, ಕುವೆಂಪು ನಗರ ಶಾಖಾ ಗ್ರಂಥಾಲಯ, ಇವರು ಭಾಗವಹಿಸುವರು.

ಸನ್ಮಾನಿತರಾಗಿ ಯೋಗರತ್ನ ಶ್ರೀ ಕೆ ಎಸ್ ಮುಕುಂದನ್ ಗುರೂಜಿ, ಆಧ್ಯಾತ್ಮ ಯೋಗ ಚಿಂತಕರು ಇವರಿಗೆ “ದೀಪ್ತಿ ಯೋಗ ಸಾಧಕರು” ಪ್ರಶಸ್ತಿಯನ್ನು ನೀಡಲಾಗುವುದು.

ವೇದಿಕೆಯಲ್ಲಿ ಕಾಳಿಹುಂಡಿ ಶಿವಕುಮಾರ್, ಲೇಖಕರು ಸಂಗ್ರಹಕರು ಮತ್ತು ಗಾಯಕರು ಹಾಜರಿರುವರು. ಈ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು, ಪ್ರದರ್ಶನವು ಬೆಳಿಗ್ಗೆ 10:00 ರಿಂದ ಸಂಜೆ 7 ರವರೆಗೆ ಇರುತ್ತದೆ. ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಇದರ ಸದುಪಯೋಗವನ್ನು ಪಡೆದುಕೊಳ್ಳಲು ತಿಳಿಸಲಾಗಿದೆ.








