ಕೆ.ಆರ್.ನಗರ(ಸಂಘಟನೆ ಮಂಜುನಾಥ್): ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಗೆ 49 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಹಾಗೂ ಪ್ರಸ್ತಕ ವರ್ಷ 8 ಕೋಟಿ 50 ಲಕ್ಷ ಸಾಲ ವಿತರಣೆ ಮಾಡಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಪುಷ್ಪಲತಾ ಸಿ.ಪಿ.ರಮೇಶ್ ಅವರು ಹೇಳಿದರು.
ಕೆ ಆರ್ ನಗರ ಪಟ್ಟಣದ ಬ್ಯಾಂಕಿನ ರೈತ ಸಮುದಾಯ ಭವನದಲ್ಲಿ ನಡೆದ 2025 -26 ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಪುಷ್ಪಲತಾ ಸಿ ಪಿ ರಮೇಶ್ ರವರು ಮಾತನಾಡಿ ಬ್ಯಾಂಕಿನ ಆಡಳಿತ ವ್ಯಾಪ್ತಿಯು ಕೆ ಆರ್ ನಗರ ತಾಲೂಕಿಗೆ ಸೀಮಿತ ವಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಕೃಷಿ ಹಾಗೂ ಪೂರಕ ಚಟುವಟಿಕೆಗಳಿಗೆ ದೀರ್ಘಾವಧಿ ಸಾಲವನ್ನು ನೀಡುತ್ತಾ ರೈತ ಸಮುದಾಯದ ಏಳಿಗೆಗೆ ಹಾಗೂ ಹಸಿರು ಕ್ರಾಂತಿಗೆ ಕೊಡುಗೆಯನ್ನು ನೀಡುತ್ತಿದೆ. ಇತರ ವ್ಯಾಪಾರ ವಹಿವಾಟುಗಳಿಗೂ ಸಾಲ -ಸೇವಾ ಸೌಲಭ್ಯ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದು ಸೂಕ್ತ ಸಮಯಕ್ಕೆ ಮರುಪಾವತಿ ಮಾಡುವುದರ ಮೂಲಕ ಬ್ಯಾಂಕಿನೊಂದಿಗೆ ಉತ್ತಮ ವ್ಯವಹಾರವನ್ನು ಇಟ್ಟುಕೊಳ್ಳಿ ಎಂದು ತಿಳಿಸಿದರು.

ಸಭೆಯಲ್ಲಿ ಬ್ಯಾಂಕಿನ ಪ್ರಭಾರ ವ್ಯವಸ್ಥಾಪಕರಾದ ಎನ್. ಆರ್ ನವೀನ್ ಕುಮಾರ್ 2025 -26ನೇ ಸಾಲಿಗೆ ಮಂಜೂರಾದ ಆಯವ್ಯಯ , ಲೆಕ್ಕಪರಿಶೋಧನೆ ಯನ್ನು ಹಾಗೂ ವಾರ್ಷಿಕ ವರದಿಯನ್ನು ಮಂಡನೆ ಮಾಡಿದರು.
ಇದೇ ಸಂದರ್ಭದಲ್ಲಿ ರೈತ ಸಮುದಾಯ ಭವನ ಕಟ್ಟುವ ಅವಧಿಯಲ್ಲಿ ಅಧ್ಯಕ್ಷರಾಗಿ ಶ್ರಮವಹಿಸಿದ ಸಾಲಿಗ್ರಾಮ ಸೋಮಣ್ಣ ಮತ್ತು ನಿರ್ದೇಶಕರಾಗಿದ್ದ ಸಿದ್ದೇಗೌಡರು ಮತ್ತು ನೂತನ ಬ್ಯಾಂಕು ಕಟ್ಟಡ ಕಟ್ಟಲು ಹಾಗು ಉದ್ಘಾಟನೆಗೆ ಸಂದರ್ಭದಲ್ಲಿ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನರವರೆಗೂ ಸನ್ಮಾನಿಸಿ ಗೌರವಿಸಲಾಯಿತು
ಉಪಾಧ್ಯಕ್ಷರಾದ ಪ್ರದೀಪ್ ಕುಮಾರ್ ಹೆಚ್ ಕೆ ನಿರ್ದೇಶಕರಾದ ಚಂದ್ರೇಗೌಡ ಕೆ ಟಿ, ಚಿದಂಬರ್ ಎಂ ಎಸ್, ಚಂದ್ರಹಾಸ ಬಿ ಎಸ್, ಕುಳ್ಳ ಬೋರೇಗೌಡ, ಸೋಮಣ್ಣ ಎಸ್ ಎಂ, ರಾಹುಲ್ ಡಿ ಆರ್, ಗಾಯತ್ರಮ್ಮ ಆರ್ ಎಂ, ಮಂಗಳ ಎ ವಿ, ಮಹೇಶ್ ವಿ ಆರ್, ಇಂದ್ರೇಶ್, ದೊಡ್ಡಯ್ಯ ಗಂಗಾಧರ, ಕಲಾವತಿ ಪ್ರಥಮ ದರ್ಜೆ ಸಹಾಯಕರಾದ ಪದ್ಮಜಾ ಕೆ, ಸಿಬ್ಬಂದಿ ಸಂಘಟನೆ ಮಂಜುನಾಥ್, ಹಾಲಪ್ಪ , ಶ್ರುತಿ, ಪಂಚಾಕ್ಷರಿ ಸೇರಿದಂತೆ ಬ್ಯಾಂಕ್ ನ ಎಲ್ಲಾ ಸದಸ್ಯರು ಭಾಗವಹಿಸಿದರು.








