LatestMysore

ಗೋವಿಂದ ರಾವ್ ಮೆಮೋರಿಯಲ್ ಪಿ ಯು ಕಾಲೇಜಿನಲ್ಲಿ ಎಸ್ ಜಾನಕಿರವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

ಮೈಸೂರು: ಶ್ರೀರಾಂಪುರ ಮೊದಲನೇ ಹಂತದ ಕಂದಾಯ ನಗರ ಬಡಾವಣೆಯಲ್ಲಿರುವ ಗೋವಿಂದ ರಾವ್ ಮೆಮೋರಿಯಲ್ ಪಿಯು ಕಾಲೇಜಿನಲ್ಲಿ ಇತ್ತೀಚಿಗೆ ತಾನೇ ನಿಧನರಾದ ಖ್ಯಾತ ಗಾಯಕಿ ಎಸ್ ಜಾನಕಿ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾಳಿಹುಂಡಿ ಶಿವಕುಮಾರ್ ರವರು ಪತ್ರಿಕೆಗಳಲ್ಲಿ ಬಂದಿರುವ ಎಸ್ ಜಾನಕಿರವರ ವಿವಿಧ ಭಾವಚಿತ್ರಗಳನ್ನು ಒಂದೆಡೆ ಅಂಟಿಸಿದ ಆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಸಾಹಿತಿ ಟಿ ಸತೀಶ್ ಜವರೇಗೌಡರವರು ಭಾವಪೂರ್ಣ ನಮನಗಳನ್ನು ಸಲ್ಲಿಸಿದರು.

ನಂತರ ಅವರು ಮಾತನಾಡಿ ಎಸ್ ಜಾನಕಿ ರವರು ಮೊದಲು ಹಾಡಿದ್ದು ಮೈಸೂರಿನಲ್ಲೇ ಕೊನೆ ಹಾಡಿನ ಕಾರ್ಯಕ್ರಮ ಮೈಸೂರಿನಲ್ಲೇ ಎನ್ನುವುದು ಒಂದು ವಿಶೇಷ. ಆದರೆ ಅವರು ಅಂತಿಮ ದಿನಗಳನ್ನು ಉದ್ಯಾನ ನಗರಿ ಮೈಸೂರಿನಲ್ಲಿ ಕಳೆದರು. ಮೈಸೂರನ್ನು ಹೆಚ್ಚು ಇಷ್ಟಪಡುತ್ತಿದ್ದರು, ಮೈಸೂರಿನಲ್ಲೇ ಕೊನೆಯುಸಿರೆಳೆದರು. ತಾವು ಹಾಡಿರುವ  ಹೆಚ್ಚಿನ ಗೀತೆಗಳು ಕನ್ನಡದ್ದು ಎನ್ನುವುದೇ ಮತ್ತೊಂದು ವಿಶೇಷ. ಕನ್ನಡ ಚಿತ್ರರಂಗಕ್ಕೆ ಇವರು ವೈವಿಧ್ಯಮಯ ಹಾಡುಗಳ ಕೊಡುಗೆಯನ್ನು ನೀಡಿದ್ದಾರೆ ಎಂದು ಸ್ಮರಿಸಿದರು.

ಮೈಸೂರು ಆಕಾಶವಾಣಿಯ ಸಮುದ್ಯತಾ ಕೇಳುವರ ಬಳಗ ದ ಅಧ್ಯಕ್ಷರಾದ ಕಣ್ಣೂರು ವಿ ಗೋವಿಂದ ಚಾರಿ ಮಾತನಾಡಿ ಇವರು ಭಾರತ ಚಿತ್ರರಂಗದ ಹಲವಾರು ಭಾಷೆಗಳಲ್ಲಿ ತಮ್ಮ ಸಿರಿಕಂಠದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ಅವರು ಭೌತಿಕವಾಗಿ ಇಂದು ನಮ್ಮೊಟ್ಟಿಗಿಲ್ಲದಿದ್ದರೂ ಸಾವಿರಾರು ಹಾಡುಗಳ ಮೂಲಕ ನಮ್ಮ ಮನೆ- ಮನ ತಲುಪಿದ್ದಾರೆ. ಇವತ್ತಿಗೂ ಕೂಡ ಆಕಾಶವಾಣಿಗಳಲ್ಲಿ ಇವರು ಹಾಡಿರುವ ಗೀತೆಗಳನ್ನು ಕೇಳುವುದೇ ಒಂದು ರೀತಿಯಲ್ಲಿ ಸೊಗಸು ಎಂದರು.

ಇದೇ ಕಾರ್ಯಕ್ರಮದಲ್ಲಿ ಲೇಖಕ, ವಿಮರ್ಶಕ ಕಾಳಿಹುಂಡಿ ಶಿವಕುಮಾರ್, ಗೋವಿಂದ ರಾವ್ ಮೆಮೋರಿಯಲ್ ಪಿಯು ಕಾಲೇಜಿನ ಪ್ರಾಂಶುಪಾಲ ರವಿ ಕೆ, ನವಗಾನ ಮಿಲನ ಟ್ರಸ್ಟ್ ನ ಸದಸ್ಯರು, ಗಾಯಕರು, ಸಂಘಟಕರಾದ ಕುದೇರು ಎಸ್ ಪರಶಿವಮೂರ್ತಿ, ಕೆ ಆರ್ ನಗರ ತಾಲೂಕು ಪಂಚಾಯಿತಿಯ ವ್ಯವಸ್ಥಾಪಕರಾದ ಸತೀಶ್ ಕುಮಾರ್ ಕೆ ಎಸ್, ಸಮುದ್ಯತಾ ಕೇಳುಗರ ಬಳಗದ ಸದಸ್ಯರಾದ ಅನಿತಾ ಅಶೋಕ್ ಮತ್ತು ಕಲಾಪ್ರಸಾದ್ ರವರು ಭಾಗವಹಿಸಿದ್ದರು.

admin
the authoradmin

Leave a Reply