ArticlesLatestLife style

ಕೊಡಗು ಅಳುತ್ತಿದೆ… ಸಂಕಷ್ಟ ಪರಿಹಾರಕ್ಕೆ ನಾವೇಕೆ ದೈವ-ದೇವರ ಮೊರೆ ಹೋಗಬಾರದು?

ಇದು ಸಾಮಾಜಿಕ ಕಳಕಳಿಯ ಲೇಖನಗಳ ಸರಮಾಲೆ-9

ಅದ್ಯಾಕೋ ಗೊತ್ತಿಲ್ಲ ಪ್ರಗತಿಯ ಪಥದಲ್ಲಿರುವ ಕೊಡಗಿಗೆ ಒಂದಲ್ಲ ಒಂದು ರೀತಿಯ ಸಂಕಷ್ಟಗಳು ತಪ್ಪುತ್ತಿಲ್ಲ.. ಪ್ರಾಕೃತಿಕ ವಿಕೋಪಗಳು ಬೆನ್ನು ಬಿಡದೆ ಕಾಡುತ್ತಿವೆ.. ಕೃಷಿಯನ್ನೇ ನಂಬಿ ಬದುಕುವ ಬೆಳೆಗಾರರು ನಾನಾ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.. ಯಾವುದೂ ಅಂದುಕೊಂಡಂತೆ ನಡೆಯುತ್ತಿಲ್ಲ… ಏಕೆ ಹೀಗೆ? ಏನಾಗಿದೆ ಕೊಡಗಿಗೆ? ಇಲ್ಲಿ ಲೇಖಕ ಕಾಯಪಂಡ ವಿಷ್ಣು ನಾಚಪ್ಪ ಕೊಡಗಿನ ಸಂಕಷ್ಟವನ್ನು ತೆರೆದಿಟ್ಟಿದ್ದಾರೆ…

ಇದನ್ನೂ ಓದಿ… ನೆಲಜಿಯ ಕಣ್ಣೀರು ಕರೆದಾಗ… ಕೊಡಗು ಎಚ್ಚೆತ್ತುಕೊಳ್ಳುವ ಸಮಯ” ಏನಿದು ಸ್ಟೋರಿ..?

ಇತ್ತೀಚಿನ ವರ್ಷಗಳಲ್ಲಿ ನಮ್ಮ ಕೊಡಗಿನ ಮೇಲೆ ಒಂದಲ್ಲ ಒಂದು ಸಮಸ್ಯೆಗಳು ದಿನ ದಿನ ಬಂದು ಬೀಳುತ್ತಲೇ ಇವೆ. ಒಮ್ಮೆ ಪ್ರಕೃತಿ ವಿಕೋಪ, ಒಮ್ಮೆ ಬೆಂಕಿ, ಒಮ್ಮೆ ಪ್ರವಾಹ. ಅತಿಯಾದ ದುರ್ಮರಣಗಳು, ಹೆಚ್ಚಾದ ಅಪಘಾತಗಳು, ಅಕಾಲಿಕ ಸಾವುಗಳು ನಮ್ಮ ಮನೆ-ಮನಗಳನ್ನು ಸೂರೆಗೊಂಡಿವೆ.  ಕಾವೇರಿ ತಾಯಿಯ ಮಡಿಲಿನ ನೆಮ್ಮದಿ ಸಂಪೂರ್ಣ ಕದಡಿ ಹೋಗಿದೆ. ಇದು ನೋಡಿದರೆ ನಮ್ಮ ತಪ್ಪೇನಾದರೂ ದೈವಗಳಿಗೆ ನೋವು ತಂದಿದೆಯೇ ಎಂಬ ಆತಂಕ ಕಾಡುತ್ತಿದೆ.

ಇದು ಪ್ರತಿಯೊಬ್ಬ ಕೊಡಗಿನ ಮಗ-ಮಗಳು ಮನಸ್ಸು ಮಾಡಿ ಯೋಚಿಸಬೇಕಾದ ಕಾಲ. ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಆಚಾರ-ವಿಚಾರ, ದೈವ-ದೇವರ ನಂಬಿಕೆ ಎಲ್ಲಾದರೂ ದೂರವಾಗಿದೆಯೇ? ನಮ್ಮ ನೆಲ, ಜಲ, ಕಾಡನ್ನು ಕಾಪಾಡುವಲ್ಲಿ ನಾವು ಸೋತಿದ್ದೇವೆಯೇ?

ಇದನ್ನೂ ಓದಿ… ಕಾವೇರಿಯ ತವರಿನಲ್ಲಿ ಬರದ ಛಾಯೆ….. ಕಾಡು ಉಳಿದರೆ ಮಾತ್ರ ನಾಡು ಉಳಿಯುತ್ತದೆ…
ಒಂದು ವಿನಮ್ರ ಮನವಿ… 

ಕೊಡಗಿನ ಎಲ್ಲಾ ಜನರು ಒಂದಾಗಿ, ತಲಕಾವೇರಿಯ ಪುಣ್ಯಕ್ಷೇತ್ರದಲ್ಲಿ ಮತ್ತು ಶ್ರೀ ಇಗ್ಗುತಪ್ಪ ಸ್ವಾಮಿಯ ಸನ್ನಿಧಿಯಲ್ಲಿ ಸಾಮೂಹಿಕವಾಗಿ ಹೋಮ-ಹವನ ಮಾಡಿದರೆ ಹೇಗೆ? ಕಾವೇರಿ ತಾಯಿ ಮತ್ತು ನಮ್ಮ ಕುಲದೈವ ಇಗ್ಗುತಪ್ಪನ ಪಾದಕ್ಕೆ ಕಣ್ಣೀರಿನ ಅಭಿಷೇಕ ಮಾಡೋಣ.

ಇದನ್ನೂ ಓದಿ… ಕೊಡಗಿನ ಮಣ್ಣಿನ ಮಕ್ಕಳ ಕಣ್ಣೀರು…. ಒಂಟಿಯಾದ ಜೀವಗಳಿಗೆ ಜೊತೆಯಾಗೋಣ…
“ಕೊಡಗಿನವರನ್ನು ಕಾಪಾಡಪ್ಪಾ… ಕೊಡಗಿನ ನೆಲವನ್ನು ಕಾಪಾಡಪ್ಪಾ… ಕೊಡಗಿನ ಅಸ್ತಿತ್ವವನ್ನು ಉಳಿಸಿಕೊಡಪ್ಪಾ…” ಎಂದು ಮನಸಾರೆ ಬೇಡಿಕೊಳ್ಳೋಣ. ನಮ್ಮ ಮೇಲಿನ ಸಂಕಷ್ಟ ದೂರವಾಗಲಿ, ನಮ್ಮ ನೆಲಕ್ಕೆ ಬಂದಿರುವ ಕೇಡು ನಿವಾರಣೆಯಾಗಲಿ ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸೋಣ.

ಉಳಿವಿಗಾಗಿ ನಾವೆಲ್ಲ ಒಂದಾಗೋಣ..

ಅಷ್ಟೇ ಅಲ್ಲದೆ, ಪ್ರತಿ ಊರಿನ ಊರು ದೇವರು, ನಾಡು ದೇವರು, ಪ್ರತಿಯೊಂದು ಐನ್ ಮನೆ-ಮನೆಗಳಲ್ಲಿ ನಮ್ಮ ಗುರು-ಕಾರಣವನ್ನು ನೆನೆದು ವಿಶೇಷವಾದ ‘ಮೀದಿ’ ಇಟ್ಟು, ಕೊಡಗಿನ ರಕ್ಷಣೆಗಾಗಿ ದೈವಗಳಲ್ಲಿ ಮೊರೆ ಇಟ್ಟರೆ ಹೇಗೆ? ನಮ್ಮ ಹಿರಿಯರ ಆತ್ಮಗಳು, ನಮ್ಮ ಕಾವಲು ದೈವಗಳು ನಮ್ಮ ಕೂಗಿಗೆ ಓಗೊಡದೇ ಇರಲಾರವು. ಅವರ ಆಶೀರ್ವಾದವೇ ನಮಗೆ ದಾರಿ ದೀಪ.

ಇದನ್ನೂ ಓದಿ… ಕೊಡಗಿನ ಆಸ್ತಿ ಕೊಡಗಿನಲ್ಲೇ ಉಳಿಯಲಿ… ಆಸ್ತಿ ಮಾರಾಟ ಮಾಡುವ ಮುನ್ನ ಯೋಚಿಸಿ!

ನಾಡತಕ್ಕರು, ದೇವತಕ್ಕರು, ಊರು ತಕ್ಕರು, ದೇಶತಕ್ಕರು ದಯವಿಟ್ಟು ಈ ವಿಷಯದ ಬಗ್ಗೆ ಮನಸ್ಸು ಮಾಡಿ ಚಿಂತನೆ ಮಾಡಿ. ನಿಮ್ಮೆಲ್ಲರ ಸಹಕಾರ, ಮಾರ್ಗದರ್ಶನ ಇದ್ದರೆ ಈ ಪುಣ್ಯಕಾರ್ಯ ಸಾಧ್ಯ. ರಾಜಕೀಯ, ಭೇದ-ಭಾವ ಮರೆತು, ಕೊಡಗಿನ ಉಳಿವಿಗಾಗಿ ನಾವೆಲ್ಲರೂ ದೇವರ ಮುಂದೆ ಒಂದಾಗೋಣ. ಇದನ್ನು ಆದೇಶವಲ್ಲ, ಕಾಲದ ಕರೆ ಎಂದು ಭಾವಿಸಿ.

ಇದನ್ನೂ ಓದಿ… ಆನೆ ನಾಡಿಗೆ ನುಗ್ಗುತ್ತಿರುವುದೇಕೆ? ಕಾಡಾನೆ ಹಸಿವಿನ ಹಿಂದೆ ಅದೆಷ್ಟು ಸಂಕಟಗಳ ಕಥೆ!

ಕೊಡಗಿನ ಮೇಲೆ ಬಂದಿರುವ ಈ ಕರಾಳ ಛಾಯೆ ಕಳೆಯಲು ದೈವಭಕ್ತಿ ಮತ್ತು ಒಗ್ಗಟ್ಟೊಂದೇ ದಾರಿ. ಕಾಡು-ನೆಲ ಉಳಿಸುವ ಹೋರಾಟದ ಜೊತೆಗೆ, ದೈವಗಳ ಕೃಪೆಗೂ ಪಾತ್ರರಾಗುವುದು ನಮ್ಮ ಕರ್ತವ್ಯ. ಕೊಡಗು ನೋವಿನಲ್ಲಿದೆ. ಕಾವೇರಿ ತಾಯಿ ಕಣ್ಣೀರಿಡುತ್ತಿದ್ದಾಳೆ. ದೈವಗಳು ನಮ್ಮನ್ನು ಕರೆಯುತ್ತಿರಬಹುದು. ದಯವಿಟ್ಟು ಎಲ್ಲರೂ ಒಮ್ಮೆ ಯೋಚಿಸಿ. ತಲಕಾವೇರಿ ಮತ್ತು ಇಗ್ಗುತಪ್ಪನ ಸನ್ನಿಧಿಯಲ್ಲಿ ಸೇರಿ, “ಕೊಡಗನ್ನು ಕಾಪಾಡು” ಎಂದು ಒಕ್ಕೊರಲಿನಿಂದ ಪ್ರಾರ್ಥಿಸೋಣ. ನಮ್ಮ ನಿಷ್ಕಲ್ಮಶ ಕಣ್ಣೀರಿಗೆ ದೈವಗಳು ಕರಗಿಯೇ ಕರಗುತ್ತವೆ.

ಇದನ್ನೂಓದಿ …ಆಸ್ಪತ್ರೆಗಾಗಿ ಕಾಯುತ್ತಿರುವ ಶೂರರ ನಾಡು ಕೊಡಗು: ಇದು ನೋವು ಅಲ್ಲದೆ ಮತ್ತೇನು?

ಕೊನೆಮಾತು..ದೈವಗಳ ಕೃಪೆಯಿಂದ ಕೊಡಗು ಮತ್ತೆ ನಗಲಿ, ಬೆಳಗಲಿ!

 

ಬಿರುನಾಣಿಯಿಂದ ಕೇರಳಕ್ಕೆ ರಸ್ತೆ ಬೇಡ… ಕೊಡಗನ್ನು ಕೊಲ್ಲಬೇಡಿ, ಬದುಕಲು ಬಿಡಿ!

admin
the authoradmin

Leave a Reply

Translate to any language you want