ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದ ಕೃತಿಗಳನ್ನು ಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನು ಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು ಪಡೆದಿವೆ. ಇಂತಹ ಮೇರು ಕೃತಿಗಳನ್ನು ಪರಿಚಯಿಸುವ, ಸಂಕ್ಷಿಪ್ತವಾಗಿ ವಿಮರ್ಶಿಸುವ ಪ್ರಯತ್ನವೇ ಅವಲೋಕನ (ಸ್ಥಿರಶೀರ್ಷಿಕೆ ಅಡಿಯಲ್ಲಿ ಪುಸ್ತಕ ವಿಮರ್ಶೆ )ವಾಗಿದೆ. ಇದನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ನಾಲ್ಕು ದಶಕಗಳ ಹಿಂದೆಯೇ ಬರೆದಿದ್ದು, ವಿವಿಧ ಲೇಖಕರ ಸಂಪಾದಕತ್ವದ ಗ್ರಂಥಗಳಲ್ಲಿ ಬೆಳಕು ಕಂಡಿವೆ. ಅದನ್ನು ಸಂಗ್ರಹಿಸಿ ಜನಮನಕನ್ನಡಕ್ಕೆ ನೀಡಿದ್ದಾರೆ.
11 ಪ್ರೀತಿ (ಕವನ ಸಂಕಲನ)
ಲೇಖಕಿ : ರಾಜೇಶ್ವರಿ ಹೆಬ್ಬಾರ್
ಮುಂಬೈ ಕರ್ನಾಟಕ ಪ್ರಾಂತ್ಯಕ್ಕೆ ಸೇರಿದ ಲೇಖಕಿಯ ಪ್ರಥಮ ಕವಿತಾ ಸಂಕಲನ ಇದು. ರಾಜೇಶ್ವರಿ ಹೆಬ್ಬಾರ ತಮ್ಮ ಮೊಟ್ಟಮೊದಲ ಪ್ರಯತ್ನದಲ್ಲೇ ಎಲ್ಲ ತರಹದ ಕಾವ್ಯರಚನಾ ಸುಧೆಯನ್ನು ಹರಿಸಿದ್ದಾರೆ. ಈ ಕೃತಿಯ ಮೂಲಕ. ದ್ವಿಪದಿ, ತ್ರಿಪದಿ, ಚೌಪದಿ, ಚೌಚೌ ಪ್ರಾಸ, ಮುಂತಾದ ವಿಭಿನ್ನ ಸಾಲುಗಳ ಸಂಗಮವು ಪುಸ್ತಕದ ಒಂದೊಂದು ಕವನದಲ್ಲೂ ಅಡಕವಾಗಿದೆ. ನಡುಗನ್ನಡ, ನವ್ಯಕನ್ನಡ ಹಾಗು ಇಂಗ್ಲಿಷ್ ಭಾಷೆಗಳು ಒಗ್ಗೂಡಿ ಇರುವುದರ ಜತೆಗೆ ಕೆಲವಾರು ಮಕ್ಕಳ ಪದ್ಯವೂ ಸಹ ಅಲ್ಲಲ್ಲಿ ಅಂಟಿಕೊಂಡು ಅಡಗಿ ಕುಳಿತಿವೆ! ಪ್ರಸ್ತುತ ಉದಾಹರಣೆಗೆ “ನನ್ನ ಬ್ಯಾಂಕು” ಶೀರ್ಷಿಕೆಯ ಕವನ ಸಾಲುಗಳು ಇಂತಿದೆ…
ಅಕ್ರಮೂರ್ಕ ಬರೆದ ಚೆಕ್ಕಿಗಿಲ್ಲಿ (ಪ್ರಾಯಶಃ cheque ಇರಬಹುದು?!)ಬೆಲೆಯುಬಾರದು
ಶುಕ್ರನೇತ್ರ ವರ್ಗಕ್ಕಿಲ್ಲಿ ಸಾಲ ಸಿಕ್ಕಲಾರದು
ವಕ್ರ ವಿಕ್ರಮಾರ್ಗೆ ಬಾಗಿಲನ್ನು ತೆರೆಯಲೇಳದು
ಚಕ್ರಧಾರಿ ಸಾಕ್ಷಿಯಾಗಿ ಬಂದರೂನು ಕೇಳದು
ಇಲ್ಲಿನ ವಿಷಯ ಚೆನ್ನಾಗಿದ್ದರೂ ಸಹ ನಿರೂಪಣೆಯ ಪ್ರಯತ್ನದಲ್ಲಿ ಪ್ರಾಮಾಣಿಕತೆ ಇಲ್ಲದೆ ವಿಫಲತೆಯೇ ಎದ್ದು ಕಾಣುತ್ತದೆ. ಇನ್ನುಳಿದಂತೆ ಕೆಲವು ಜಾಳು ಜಾಳಾದ ಪದ್ಯಗಳು ಏನನ್ನೊ ಹೇಳಬಯಸುತ್ತವೆ ಆದರೆ, ಅದೇನು ಎಂಬುದೇ ಅಸ್ಪಷ್ಟ. ಇಷ್ಟಿದ್ದರೂ ಮಹಿಳಾ ಲೇಖಕಿಯೊಬ್ಬರು ಕಾವ್ಯಲೋಕಕ್ಕೆ ಪಾದಾರ್ಪಣೆ ಮಾಡಿದ ಪ್ರಥಮ ಪ್ರಯತ್ನದಲ್ಲೆ ಯುವ ಕವಯತ್ರಿ ಎನಿಸಿಕೊಳ್ಳಲು ಬೇಕಾದ ಅರ್ಹತೆ ಇದೆ ಎನ್ನಬಹುದಾದ ಕೆಲವು ಸಾಲುಗಳು ಇಲ್ಲಿನ ಒಂದೆರಡು ಕವಿತೆಗಳಲ್ಲಿ ಒಡಮೂಡಿದೆ. ಭವಿಷ್ಯದಲ್ಲಿ ರಾಜೇಶ್ವರಿ, ಓರ್ವ ಸಾಧಾರಣ ಕವಿತಾಕರ್ತೃ ಆಗುವ ಲಕ್ಷಣ ಕಾಣುವುದರಿಂದ “ಪ್ರೀತಿ” ಕವನ ಸಂಕಲನವು ಸ್ವಾಗತಾರ್ಹ.
(ಮೈವಿವಿ, ಮಾನಸಗಂಗೋತ್ರಿ, ಮೈಸೂರು, ಡಿಸೆಂಬರ್1982ಗ್ರಂಥಲೋಕ ಮಾಸಪತ್ರಿಕೆ)
12 ಕೃತಿ : ಸತ್ಯನ ಸಂಗತಿ (ನಾಟಕ)
ಕರ್ತೃ : ಬಾಪುಗೌಡ ಪಾಟೀಲ
27 ಪುಟಗಳ ಹೊಸ ಥರಹದ ನಾಟಕದ ಪುಸ್ತಕ. ಲೇಖಕರ ಚೊಚ್ಚಲಕೃತಿ ಆದರೂ ಜಳ್ಳುಕಡಿಮೆ, ಗಟ್ಟಿಹೆಚ್ಚು ಅಡಗಿದೆ. “ಸತ್ಯವೇ ದೇವರು” ಎಂಬ ನಂಬಿಕೆಉಳ್ಳ ಅಥವ ಸತ್ಯದ ಪ್ರತಿರೂಪ ಎನಿಸುವಂಥ ಪಾತ್ರ ಇದರಲ್ಲಿ ಮುಖ್ಯವಾಗಿದೆ.
ಅಧಿಕಾರಿಯೊಬ್ಬ ಸತ್ಯವನ್ನೆ ಪ್ರತಿಪಾದಿಸುವ ಓರ್ವ ಸತ್ಯಸಂಧ. ಅಸತ್ಯ ಅನ್ಯಾಯ ಇತ್ಯಾದಿ ಕತ್ತಲೆಗಳನ್ನು ತೊಡೆದ್ಹಾಕಿ ನ್ಯಾಯ ಮತ್ತು ಸತ್ಯದ ಬೆಳಕನ್ನು ಚೆಲ್ಲುವ ಪ್ರಯತ್ನದವನು. ಇಂಥವನ ವಿರುದ್ಧ ಪ್ರಬಲ ದುಷ್ಟ ಶಕ್ತಿಗಳು ಸವಾರಿ ಮಾಡುತ್ತ ಈತನನ್ನು ಕೊಲ್ಲುವ ಪ್ರಯತ್ನದಲ್ಲಿದ್ದಾಗ, ವಿಧಿಯಿಲ್ಲದೇ ಸದರಿ ಅಧಿಕಾರಿಯು ಅಂಜುತ್ತ ಅಳುಕುತ್ತ ದುರ್ಬಲನಾಗುವನು. ಕಡೆಗೆ ಅನಿವಾರ್ಯ ಎಂಬಂತೆ ಓಡಿಹೋಗಲು ಯತ್ನಿಸುವನು. ಆದರೂ ಇದ್ದಕ್ಕಿದ್ದಂತೆ ದಿಢೀರ್ ಹೋರಾಟ ಮನೋಭಾವ ತಳೆಯುವನು. ಕ್ರಮೇಣ ಪ್ರಬಲನಾಗಿ ಮೇಲೆದ್ದು ಗೆದ್ದುಬಂದು ಬದುಕಿ ಉಳಿವನು? ಇಲ್ಲಿಗೆ ನಾಟಕವು ಅಂತ್ಯಗೊಳ್ಳುತ್ತದೆ!
ನಾಟಕ ರಚನೆಕಾರ ಬಾಪುಗೌಡರು ತಮ್ಮ ಮೊದಲ ಪ್ರಯತ್ನದಲ್ಲೆ ಓದುಗರು ಮೆಚ್ಚುವಂತೆ ಸಂಭಾಷಣೆ ಬರೆದು ಯಶಸ್ವಿ ಆಗಿದ್ದಾರೆ. ತನ್ಮೂಲಕ ಈ ನಾಟಕದಲ್ಲಿ “ಸತ್ಯ ಸುಳ್ಳು ಮೋಸ” ಎಂಬ ಮೂರು ವಿಶೇಷ ಪಾತ್ರಗಳನ್ನು ಸೃಷ್ಟಿಸಿ ವಿಶಿಷ್ಟ ರೀತಿಯಲ್ಲಿ ಚಿತ್ರಿಸಿದ್ದಾರೆ. ಈಗಿನ ಕೊಳಕು ಸಮಾಜಕ್ಕೆ ಹಾಗು ಸಮಾಜಘಾತುಕ ಶಕ್ತಿಗಳಿಗೆ ತಕ್ಕಪಾಠ ಕಲಿಸುವ ಇಂತಹ ನಾಟಕಗಳು ಸ್ವಲ್ಪವಾದರೂ ಪ್ರಯೋಜನಕಾರಿ ಆಗಬಹುದು.
(ಮೈವಿವಿ, ಮಾನಸಗಂಗೋತ್ರಿ, ಮೈಸೂರು ಸೆಪ್ಟೆಂಬರ್ 1982’ಗ್ರಂಥಲೋಕ’ ಮಾಸಪತ್ರಿಕೆ)
13 ಕೃತಿ : ತಾಯಿಯಪ್ರೇಮ
ಕರ್ತೃ : ಕೆ.ಆರ್.ಎಸ್.ಪ್ರಸನ್ನ
ಪುಟಾಣಿಗಳಿಗೆ ಬರೆಯಲಾದ ಮಕ್ಕಳ ಕಥಾಪುಸ್ತಕದಲ್ಲಿ ‘ಮಾತೃದೇವೋಭವ’ ಎಂಬ ನಾಣ್ಣುಡಿಯನ್ನು ಬೆಂಬಲಿಸುವಂತಹ ತಾಯಿಯಪ್ರೇಮ ಶೀರ್ಷಿಕೆಯುಳ್ಳ ಕತೆಯ ಜತೆಗೆ ಹೊಟ್ಟೆಕಿಚ್ಚಿನಫಲ, *ಜೀವನದಸತ್ಯ ಹಾಗೂ ಸ್ನೇಹದಬೆಲೆ ಎಂಬ 4 ಪುಟ್ಟಪುಟ್ಟ ಕತೆಗಳೂ ಇವೆ. ಪ್ರತಿಯೊಂದು ಕತೆಯು ಮನರಂಜನೆ ನೀಡುತ್ತ ನೀತಿಯನ್ನು ಹೇಳುತ್ತವೆ.
ಹೀಗಾಗಿ ಎಲ್ಲಾ ನಾಲ್ಕು ಕಥೆಗಳು ಹೆಚ್ಚುಕಾಲ ರಂಜಿಸುತ್ತವೆ. ಒಂದೊಂದೂ ಕಥೆಯ ಪ್ರತಿಯೊಂದು ಸಾಲು ತಾವಾಗಿ ಓದಿಸಿಕೊಂಡು ಹೋಗುವಂತೆ ಮತ್ತು ಸಾಕಷ್ಟು ಮುದ ನೀಡುವಂತೆ ಬರೆಯಲಾಗಿದೆ. ಅಷ್ಟೇನೂ ಅನುಭವಿಯಲ್ಲದ ಅಥವ ಹಿರಿಯ ಸಾಹಿತಿಯೂ ಅಲ್ಲದ ಚಿಕ್ಕ ಹಸ್ತದಿಂದ ಚೊಕ್ಕ ರೀತಿಯ ಶಿಶುಸಾಹಿತ್ಯ ರಚನೆಯಾಗಿರುವುದು ಶ್ಲಾಘನೀಯ!
1981ರ ಒಂದೇ ವರ್ಷದ ಅವಧಿಯಲ್ಲಿ ಅಮೋಘ ಎನಿಸುವ ಪ್ರಥಮ ಮುದ್ರಣ ಮತ್ತು ದ್ವಿತೀಯ ಮುದ್ರಣ ಕಂಡಿರುವುದು ಸಂತಸ. 1982ರ ವರ್ಷವೇ ತೃತೀಯ ಮುದ್ರಣವನ್ನೂ ಕಂಡು ಹೊರಬಂದಿರುವ ‘ತಾಯಿಯಪ್ರೇಮ’ ಪುಟ್ಟ ಪುಸ್ತಕವಾಗಿದೆ.
14 ಕೃತಿ: ಒಲುಮೆಯ ಕುಸುಮ
ಕರ್ತೃ: ಎಸ್.ಬಿ.ಚಂದ್ರಕಾಂತ್
ಚಿತ್ರಗೀತೆ ಅಥವ ಮಕ್ಕಳಪದ್ಯ ಇವೆರಡೂ ವಿಭಾಗಕ್ಕೆ ಸೇರದೇ ಇರುವಂತದ್ದನ್ನು ಮಕ್ಕಳಪುಸ್ತಕ ಎನ್ನಬೇಕೋ (ವಿ)ಚಿತ್ರಗೀತೆಪುಸ್ತಕ ಎನ್ನಬೇಕೋ ಎಂಬ ಜಿಜ್ಞಾಸೆ ಉದ್ಭವವಾಗುವಂತೆ ಬರೆಯಲಾಗಿದೆ. ‘ಒಲುಮೆಯ ಕುಸುಮ’ ತಮ್ಮ ಎರಡನೆಯ ಕವನ ಸಂಕಲನವೆಂದು ಲೇಖಕರೇ ಖಾತರಿ ಪಡಿಸಿರುವುದು ಗಮನಕ್ಕೆ ಬರುತ್ತದೆ. ಕೇವಲ 16ಪುಟಗಳ ಮಿನಿ ಪುಸ್ತಕದಲ್ಲಿ ಒಟ್ಟು 19 ಪದ್ಯ?/ಕವನ?/ಕವಿತೆ?ಗಳನ್ನು ಅಳವಡಿಸಲಾಗಿದೆ. ಇದನ್ನು ಓದಿದವರು ಚೆನ್ನಾಗಿದೆ ಅಥವ ಪರವಾಯಿಲ್ಲ ಎನ್ನುವಂಥ ಒಂದೆರಡು ಪದ್ಯವೂ ಇಲ್ಲದಿರುವುದು ವಿಷಾದನೀಯ. ಏಕೆಂದರೆ ‘ಗದ್ಯ’ ಎನ್ನಬಹುದಾದ ಪದ- ವಾಕ್ಯಗಳನ್ನ ಚಿಕ್ಕಪುಟ್ಟ ಸಾಲುಗಳನ್ನಾಗಿ ತುಂಡರಿಸಿ ‘ಪದ್ಯ’ ಎಂದು ಘೋಷಿಸುವುದು ಅಸಂತೋಷಕರ ಸಂಗತಿ. ಪಕ್ಕಾ ಗದ್ಯ ಎಂಬುದಕ್ಕೊಂದು ಸೊಗಸಾದ ಉದಾಹರಣೆ ಇದು:
ಆಹಾರ ಪದಾರ್ಥಗಳ ಬೆಲೆ
ಗಗನಕ್ಕೆ ಏರುತ್ತಿದೆ
ಎಲ್ಲರ ಮನದ
ಆಸೆಗಳು ಇಳಿಯುತ್ತಿದೆ
ಪಾ
ತಾ
ಳ
ಕೆ
ಇಂತಹ ದಿನನಿತ್ಯದ ಶ್ರೀಸಾಮಾನ್ಯನ ರೂಢಿಮಾತುಗಳನ್ನೆ ‘ಪದ್ಯ’ವನ್ನಾಗಿಸಿ ಬಿಂಬಿಸಲಾಗಿದೆ. ಎಲ್ಲರಂತೆ ತಾನೂಸಹ ಕವಿತೆ ಬರೆಯಲೇಬೇಕು,ಕವಿಯೂ ಆಗಬೇಕು ಎಂಬ ಹಠದಿಂದ ಬರೆದಂತಿದೆ. ಇವರ 2ನೇಯ ಈ ಪುಸ್ತಕವು ಕೇವಲ ಆತುರದ ಪ್ರಯತ್ನವಾಗಿದೆ ಅಷ್ಟೆ. ಕವಿ ಎನಿಸಿಕೊಳ್ಳಲು ಈತ ಇನ್ನೂ ಬಹಳ ಕಲಿಯಬೇಕು, ಕಲಿತು ಸಮರ್ಥವಾಗಿ ಬೆಳೆಯಬೇಕು.
(ಮೈವಿವಿ, ಮಾನಸಗಂಗೋತ್ರಿ, ಮೈಸೂರು ಸೆಪ್ಟೆಂಬರ್ 1982, ಗ್ರಂಥಲೋಕ-ಮಾಸಪತ್ರಿಕೆ)
15 ಕೃತಿ: ನಲವಡಿ ಶ್ರೀಕಂಠಶಾಸ್ತ್ರಿಗಳು
ಕರ್ತೃ: ಮೃತ್ಯುಂಜಯ ಹೊರಕೇರಿ
ಮೃತ್ಯುಂಜಯ ಹೊರಕೇರಿ ರಚಿಸಿದ “ನಲವಡಿ ಶ್ರೀಕಂಠಶಾಸ್ತ್ರಿಗಳು” ಕೃತಿಯು “ವೀರಶೈವ ಪುಣ್ಯಪುರುಷ ಸಾಹಿತ್ಯರತ್ನ ಮಾಲಿಕೆ” ಅಡಿಯಲ್ಲಿ 44ನೇ ಪ್ರಕಟಣೆ. 1889ನೆ ಇಸವಿ ನವೆಂಬರ್ 14ರಂದು ಜನಿಸಿದ ನಾಲ್ವಡಿ ಶ್ರೀಕಂಠಶಾಸ್ತ್ರಿಯವರು ಬ್ರಿಟಿಷ್ ಕಾಲದ ಮೈಸೂರು ಪ್ರಾಂತ್ಯದ ಶಾಲಾ ಕಾಲೇಜು ಶಿಕ್ಷಣ ಸಂಸ್ಥೆಗಳಲ್ಲಿ, ಬಾಲ್ಯದ ಶಿಕ್ಷಣ ಪೂರೈಸಿದ ನಂತರ ಉನ್ನತ ವಿದ್ಯಾಭ್ಯಾಸಕ್ಕೆಂದು ಕಾಶೀಗೆ ತೆರಳುತ್ತಾರೆ. ಕೆಲ ಕಾಲದ ನಂತರ ಸಮರ್ಥ ವಿದ್ವಾಂಸರಾಗಿ ವಾರಣಾಸಿಯಿಂದ ಕನ್ನಡ ನಾಡಿಗೆ ಹಿಂದಿರುಗಿ, ಕನ್ನಡ ಸಾಹಿತ್ಯದೆಡೆಗೆ ಹೊರಳುತ್ತಾರೆ. ಇದು ಸುಯೋಗವೇ ಆಗಿತ್ತು ಎಂಬ ಹೊಗಳಿಕೆಯ ಸಾಲುಗಳನ್ನೂ ಸ್ವಯಂ ಲೇಖಕರೇ ಬರೆದುಕೊಳ್ಳುತ್ತಾರೆ.
ಕೆಲವು ದಶಕಗಳ ಕಾಲ ಕನ್ನಡ ರಂಗಭೂಮಿಯು ಕತ್ತಲೆಯ ಮೊತ್ತದೊಳು ಸಿಲುಕಿದ್ದಾಗ ಇದೇ ಶ್ರೀಕಂಠಶಾಸ್ತ್ರಿ ಒಂದಷ್ಟು ಬೆಳಕು ತೋರಿಸಿದ್ದರು. ವೀರಶೈವ ಸಾಹಿತಿಗಳ ವಿಶಿಷ್ಟ ವರ್ಗಕ್ಕೆ ಸೇರಿದ ಈತ: ಕವಿ, ಪಂಡಿತ, ಅನುವಾದಕ, ನಾಟಕಕಾರ, ಸಂಪಾದಕ, ವಿಮರ್ಶಕ. ಹೀಗೆ ಎಲ್ಲಾ ವಿಭಾಗದಲ್ಲು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಕನ್ನಡ ನಾಡು ನುಡಿಗಾಗಿ ಕಟಿಬದ್ಧರಾಗಿ ದುಡಿದಿದ್ದರು. ವೀರಶೈವ ಸಮಾಜದ ಪ್ರತಿಯೊಂದು ಸಾಹಿತ್ಯ ಮತ್ತು ಸಂಸ್ಕೃತಿ ಕೈಂಕರ್ಯಕ್ಕೆ ಅಪ್ರತಿಮ ಸೇವೆ ಸಲ್ಲಿಸಿದ್ದರು. ಪ್ರಗತಿಪರ ಚಿಂತಕರಾಗಿ
ಸಮಾಜಕ್ಕೆ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಪ್ರಾಂತ್ಯದ ತಮ್ಮ ಸಮುದಾಯದ ಜನಮನ ಮಠಮಾನ್ಯ ಸಂಸ್ಥೆಗಳಿಗೆ ಅಪಾರ ಕೊಡುಗೆ ನೀಡಿದ್ದರು. “ಕರ್ನಾಟಕ ಕವಿಚಂದ್ರ” ಮುಂತಾದ ಬಿರುದುಗಳನ್ನೂ ಪಡೆದಿದ್ದ ಶಾಸ್ತ್ರಿ ಯವರು 24.12.1967ರಂದು ಸ್ವತಂತ್ರ ಭಾರತದ ಮೈಸೂರು ರಾಜ್ಯದ ಗದುಗಿನಲ್ಲಿ ದೈವಾಧೀನರಾದರು!
ನಲವಡಿ ಶ್ರೀಕಂಠಶಾಸ್ತ್ರಿಯವರ ಜೀವನ ಮತ್ತು ಕೃತಿಗಳನ್ನು ಕುರಿತು ಪ್ರೌಢಪ್ರಬಂಧ (ಥೀಸೀಸ್) ರಚನೆಯಲ್ಲಿ ಮಗ್ನರಾಗಿರುವ ಪುಸ್ತಕದ ಲೇಖಕ ಹೊರಕೇರಿ, ದಿವಂಗತ ನಲವಡಿಯವರ ಜೀವನ ವೃತ್ತಾಂತವನ್ನು ಈ ಕೃತಿಯ ಮೂಲಕ ಸುಲಲಿತ ಸುಂದರ ಸರಳ ಕನ್ನಡದಲ್ಲಿ ಓದುಗರಿಗೆ ಪ್ರಿಯವಾಗುವಂತೆ ಸಂಕ್ಷಿಪ್ತವಾಗಿ ಬರೆದಿದ್ದಾರೆ. ಹೀಗಾಗಿ ಕೃತಿ ಮತ್ತು ಕತೃ ಸಾರ್ಥಕ ಶಿಖರದ ಮೇಲೆ ನಿಲ್ಲುವ ಪರಿಸ್ಥಿತಿ ಒದಗಬಹುದು.
(ಮೈವಿವಿ, ಮಾನಸಗಂಗೋತ್ರಿ, ಮೈಸೂರು, ಏಪ್ರಿಲ್ 1982, ಗ್ರಂಥಲೋಕ ಮಾಸಪತ್ರಿಕೆ)

ಅವಲೋಕನ….. ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ ಪುಸ್ತಕ ವಿಮರ್ಶೆ… ಆರು ಕೃತಿಗಳ ಪರಿಚಯ ಭಾಗ-1
ಅವಲೋಕನ….. ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ ಪುಸ್ತಕ ವಿಮರ್ಶೆ… ನಾಲ್ಕು ಕೃತಿಗಳ ಪರಿಚಯ.. ಭಾಗ-2









“ಅವಲೋಕನ” ದ 3ನೇ ಕಂತು ಇನ್ನೂ ಏಕೆ ಬರಲಿಲ್ಲ (ಪ್ರಕಟವಾಗಿಲ್ಲ) ಎಂದು ಬಕಪಕ್ಷಿಯಂತೆ ಕಾಯುತ್ತಿರುವಾಗಲೇ…ಸಧ್ಯ..! ಬೆಂಗಳೂರಿನ ನನ್ನ ದೋಸ್ತ್ ಒಬ್ಬರಿಂದ ವಾಟ್ಸಾಪ್ ಮೂಲಕ ನನಗೆ ಈಗಷ್ಟೇ ತಲುಪಿತು. ಇದಕ್ಕೆ ಸಕಾರಣ ಇಷ್ಟೆ. ಕಳೆದ 2 ಕಂತುಗಳಲ್ಲಿ ಪ್ರಕಟಗೊಂಡಿದ್ದ ಒಟ್ಟಾರೆ 10 ಪುಸ್ತಕಗಳ ವಿಮರ್ಶೆ
ನನ್ನ ತನು-ಮನ ಗೆದ್ದಿದ್ದವು. ಅಬ್ಬಾ ಅಬ್ಬಬ್ಬಾ ಎಂಥ ಪ್ರತಿಭೆಯ ಸಾಗರ ಇವುಗಳ ಲೇಖಕ/ವಿಮರ್ಶಕ ಕುಮಾರಕವಿ ನಟರಾಜ. ಇಂಥವರಿಂದಲೇ ಕನ್ನಡ ಸಾಹಿತ್ಯ ಬೆಳೆದು ಬೆಳಗುತ್ತಿರುವುದು ಎಂದು ಹೇಳಿದರೆ ಅತಿಶಯೋಕ್ತಿ ಅಲ್ಲವೇಅಲ್ಲ! ಭಾರತದ ಸರ್ವ ಶ್ರೇಷ್ಠ ಭಾಷೆಯಾದ ನಮ್ಮ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಇವತ್ತಿಗೂ ಕುಮಾರಕವಿಯಂಥ ಧ್ರುವನಕ್ಷತ್ರಗಳು ಇರುವುದರಿಂದಲೇ ಗರಿಷ್ಠ ಸಂಖ್ಯೆಯ ಜ್ಞಾನಪೀಠ ಪ್ರಶಸ್ತಿ ದಕ್ಕಿರುವುದು ಎಂದು ಯಾರಿಗಾದ್ರೂ ಸಹ ಅನಿಸುತ್ತದೆ ಹೌದಲ್ಲವೇ…?! ಅಂದಹಾಗೆ ಓದುಗ ಬಂಧುಗಳೇ ದಯವಿಟ್ಟು ನೀವು ಓದಿದ ನಂತರ ತಪ್ಪದೇ ಕನ್ನಡ ಸಾಹಿತ್ಯ ಐಚ್ಚಿಕ ವಿಷಯ ಅಧ್ಯಯನ ಮಾಡುವ/ಉಪನ್ಯಾಸ ನೀಡುವ ಸಾವಿರಾರು ವಿದ್ಯಾರ್ಥಿ/ಸಂಶೋಧನಾರ್ಥಿ/ ಅಧ್ಯಾಪಕರು ಮುಂತಾದ ಅಗತ್ಯವಿದ್ದವರಿಗೆ ಮರೆಯದೇ ಶೇರ್ (ಫಾರ್ವಾರ್ಡ್)
ಮಾಡಿ ಕನ್ನಡಸಾಹಿತ್ಯ ಸೇವೆಮಾಡಿ. ಆ ಮೂಲಕ ಕನ್ನಡತಾಯಿ ಕೃಪಾಶೀರ್ವಾದ ಪಡೆಯಿರಿ. ಇದೇ ನನ್ನ ಕಳಕಳಿಯ ಪ್ರಾರ್ಥನೆ. ಮಲ್ಲಿಕಾರ್ಜುನ ಗಿರಿಮಠ, ಗುಲ್ಬರ್ಗ.
“ಅವಲೋಕನ” ದ 3ನೇ ಕಂತು ಇನ್ನೂ ಏಕೆ ಬರಲಿಲ್ಲ (ಪ್ರಕಟವಾಗಿಲ್ಲ) ಎಂದು ಬಕಪಕ್ಷಿಯಂತೆ ಕಾಯುತ್ತಿರುವಾಗಲೇ…ಸಧ್ಯ..! ಬೆಂಗಳೂರಿನ ನನ್ನ ದೋಸ್ತ್ ಒಬ್ಬರಿಂದ ವಾಟ್ಸಾಪ್ ಮೂಲಕ ನನಗೆ ಈಗಷ್ಟೇ ತಲುಪಿತು. ಇದಕ್ಕೆ ಸಕಾರಣ ಇಷ್ಟೆ. ಕಳೆದ 2 ಕಂತುಗಳಲ್ಲಿ ಪ್ರಕಟಗೊಂಡಿದ್ದ ಒಟ್ಟಾರೆ 10 ಪುಸ್ತಕಗಳ ವಿಮರ್ಶೆ ನನ್ನ ತನು-ಮನ ಗೆದ್ದಿದ್ದವು. ಅಬ್ಬಾ ಅಬ್ಬಬ್ಬಾ ಎಂಥ ಪ್ರತಿಭೆಯ ಸಾಗರ ಇವುಗಳ ಲೇಖಕ/ವಿಮರ್ಶಕ ಕುಮಾರಕವಿ ನಟರಾಜ. ಇಂಥವರಿಂದಲೇ ಕನ್ನಡ ಸಾಹಿತ್ಯ ಬೆಳೆದು ಬೆಳಗುತ್ತಿರುವುದು ಎಂದು ಹೇಳಿದರೆ ಅತಿಶಯೋಕ್ತಿ ಅಲ್ಲವೇಅಲ್ಲ! ಭಾರತದ ಸರ್ವ ಶ್ರೇಷ್ಠ ಭಾಷೆಯಾದ ನಮ್ಮ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಇವತ್ತಿಗೂ ಕುಮಾರಕವಿಯಂಥ ಧ್ರುವನಕ್ಷತ್ರಗಳು ಇರುವುದರಿಂದಲೇ ಗರಿಷ್ಠ ಸಂಖ್ಯೆಯ ಜ್ಞಾನಪೀಠ ಪ್ರಶಸ್ತಿ ದಕ್ಕಿರುವುದು ಎಂದು ಯಾರಿಗಾದ್ರೂ ಸಹ ಅನಿಸುತ್ತದೆ ಹೌದಲ್ಲವೇ…?! ಅಂದಹಾಗೆ ಓದುಗ ಬಂಧುಗಳೇ ದಯವಿಟ್ಟು ನೀವು ಓದಿದ ನಂತರ ತಪ್ಪದೇ ಕನ್ನಡ ಸಾಹಿತ್ಯ ಐಚ್ಚಿಕ ವಿಷಯ ಅಧ್ಯಯನ ಮಾಡುವ/ಉಪನ್ಯಾಸ ನೀಡುವ ಸಾವಿರಾರು ವಿದ್ಯಾರ್ಥಿ/ಸಂಶೋಧನಾರ್ಥಿ/ ಅಧ್ಯಾಪಕರು ಮುಂತಾದ ಅಗತ್ಯವಿದ್ದವರಿಗೆ ಮರೆಯದೇ ಶೇರ್ (ಫಾರ್ವಾರ್ಡ್) ಮಾಡಿ ಕನ್ನಡಸಾಹಿತ್ಯ ಸೇವೆಮಾಡಿ. ಆ ಮೂಲಕ ಕನ್ನಡತಾಯಿ ಕೃಪಾಶೀರ್ವಾದ ಪಡೆಯಿರಿ. ಇದೇ ನನ್ನ ಕಳಕಳಿಯ ಪ್ರಾರ್ಥನೆ. ಮಲ್ಲಿಕಾರ್ಜುನ ಗಿರಿಮಠ, ಗುಲ್ಬರ್ಗ.
ನಮಸ್ಕಾರ ಜನಮನ ಕನ್ನಡ, ಮೈಸೂರು. ನಾನು ಗುಲ್ಬರ್ಗ ವಿವಿ ಎಂ.ಎ.ಕನ್ನಡ ವಿದ್ಯಾರ್ಥಿ ಆಗಿದ್ದೇನೆ. ನನ್ನ ಅಂತಿಮ ವರ್ಷದ (3&4ಸೆಮ್) ಐಚ್ಚಿಕ/ವಿಶೇಷ ಪ್ರಾವೀಣ್ಯ ವಿಷಯದ”ಲಿಟರರಿ ಕ್ರಿಟಿಸಿಸಂ,ಟ್ರಾನ್ಸ್ಲೇಶನ್ ಹಾಗು ಡೆಸರ್ಟೇಶನ್” ಆಧುನಿಕ ಕನ್ನಡಸಾಹಿತ್ಯ ಪ್ರಾಕಾರಗಳ ಸಂಬಂಧ ಇರಬಹುದಾದ ವಿಮರ್ಶಾತ್ಮಕ ಖಂಡಕಾವ್ಯ, ಟೀಕೇಟಿಪ್ಪಣಿ, ಪ್ರಬಂಧ, ಒಳ-ಹೊರ ತಿರುಳು. ಪಕ್ಷಿನೋಟ, ಸಾರಾಂಶ, ಪರ್ಯಟನೆ, ಸಿಂಹಾವಲೋಕನ, ಮುಂತಾದ ಅಗತ್ಯ ಅಧ್ಯಯನಕ್ಕೆ ನಿಮ್ಮ “ಅವಲೋಕನ” ಮಾರ್ಗದರ್ಶನ ನೀಡುವಂತಿದೆ. ವಿದ್ಯಾರ್ಥಿಗಳ ಹಿತ ಕಾಯುವ ಮತ್ತು ಸಂಶೋಧನಕ್ಕೆ ಮಾರ್ಗದರ್ಶಿಯಾಗಿರುವ ಈ ಸ್ಥಿರ ಶೀರ್ಷಿಕೆ ಪ್ರಕಟಣೆಯನ್ನು ನಿಲ್ಲಿಸದಿರಿ.ಅವಲೋಕನ ಅಂಕಣಕಾರ ಕುಮಾರಕವಿಯವರಿಗೆ ಶಿರಸಾಷ್ಟಾಂಗ ವಂದನೆಗಳು.ಎಲ್ಲ ಕನ್ನಡ ಲಿಟರೇಚರ್ ವಿದ್ಯಾರ್ಥಿಗಳ ಪರವಾಗಿ ಹಾಗೂ ಎಂ.ಎ.ಕನ್ನಡ ವಿದ್ಯಾರ್ಥಿಗಳ ಪ್ರತಿನಿಧಿಯಾಗಿ ನಿಮ್ಮ ವಿಶ್ವಾಸದ ವಿದ್ಯಾರ್ಥಿ, ಬಸನಗೌಡ ಸಿಧ್ಧನಗೌಡ ಪಾಟೀಲ, ಬೀದರ್.
ಜನಮನ ಪತ್ರಿಕೆಯ ಸಂಪಾದಕ ಸರ್ ನಮಸ್ಕಾರ, ಎಂದಿನಂತೆ ವಿದ್ಯಾರ್ಥಿಮಿತ್ರ
“ಅವಲೋಕನ” ಸ್ಥಿರ ಶೀರ್ಷಿಕೆಯ ಅಂಕಣ ಈ ದಿನ ಪ್ರಕಟಗೊಂಡಿರುವುದು ಭಲೇ ಸಂತಸದ ವಿಚಾರ. ಈಗ ತಾನೇ 3ನೇ ಕಂತು ಓದಿದ ನನಗೆ ಬಹಳಷ್ಟು ವಿಚಾರ ಮನದಟ್ಟಾಯಿತು. ಯಾವುದೇ ಪುಸ್ತಕವನ್ನು ಅಥವ ಯಾರದ್ದೇ ಕೃತಿಯನ್ನು ನನ್ನಂಥ ಹೊಸ ಲೇಖಕ ಅಥವ ಸಾಹಿತ್ಯಾಸಕ್ತ ಯುವಕ ಅಥವ ಜರ್ನಲಿಸಂ ವಿದ್ಯಾರ್ಥಿ ಅಥವ ಪತ್ರಕರ್ತ, ಯಾರೇಆಗಿರಲಿ ಹೇಗೆ/ಹೇಗೆಲ್ಲಾ ಅಥವ ಹೀಗೂ/ಹೀಗೆಲ್ಲ ವಿಮರ್ಶೆ ಮಾಡಬಹುದು ಎಂಬುದರ ಬಗ್ಗೆ ಒಂದು ಸ್ಪಷ್ಟ ಚಿತ್ರಣ ದೊರಕಿತು. ಕನ್ನಡದ ಖ್ಯಾತ ವಿಮರ್ಶಕ ನಟರಾಜ ಕವಿಯವರಿಗೂ ಜನಮನ ಪ್ರಕಾಶಕರಿಗೂ ಧನ್ಯವಾದ. ರವೀಂದು ಕುಲಕರ್ಣಿ, ಸಾಹಿತಿ-ಪತ್ರಕರ್ತ,
ಧಾರವಾಡ-ಹುಬ್ಬಳ್ಳಿ.
ಜನಮನ ಪತ್ರಿಕೆಯ ಸಂಪಾದಕ ಸರ್ ನಮಸ್ಕಾರ, ಎಂದಿನಂತೆ ವಿದ್ಯಾರ್ಥಿಮಿತ್ರ “ಅವಲೋಕನ” ಸ್ಥಿರ ಶೀರ್ಷಿಕೆಯ ಅಂಕಣ ಈ ದಿನ ಪ್ರಕಟಗೊಂಡಿರುವುದು ಭಲೇ ಸಂತಸದ ವಿಚಾರ. ಈಗ ತಾನೇ 3ನೇ ಕಂತು ಓದಿದ ನನಗೆ ಬಹಳಷ್ಟು ವಿಚಾರ ಮನದಟ್ಟಾಯಿತು. ಯಾವುದೇ ಪುಸ್ತಕವನ್ನು ಅಥವ ಯಾರದ್ದೇ ಕೃತಿಯನ್ನು ನನ್ನಂಥ ಹೊಸ ಲೇಖಕ ಅಥವ ಸಾಹಿತ್ಯಾಸಕ್ತ ಯುವಕ ಅಥವ ಜರ್ನಲಿಸಂ ವಿದ್ಯಾರ್ಥಿ ಅಥವ ಪತ್ರಕರ್ತ, ಯಾರೇಆಗಿರಲಿ ಹೇಗೆ/ಹೇಗೆಲ್ಲಾ ಅಥವ ಹೀಗೂ/ಹೀಗೆಲ್ಲ ವಿಮರ್ಶೆ ಮಾಡಬಹುದು ಎಂಬುದರ ಬಗ್ಗೆ ಒಂದು ಸ್ಪಷ್ಟ ಚಿತ್ರಣ ದೊರಕಿತು. ಕನ್ನಡದ ಖ್ಯಾತ ವಿಮರ್ಶಕ ನಟರಾಜ ಕವಿಯವರಿಗೂ ಜನಮನ ಪ್ರಕಾಶಕರಿಗೂ ಧನ್ಯವಾದ. ರವೀಂದು ಕುಲಕರ್ಣಿ, ಸಾಹಿತಿ-ಪತ್ರಕರ್ತ, ಧಾರವಾಡ-ಹುಬ್ಬಳ್ಳಿ.
ಜನಮನ ಪತ್ರಿಕೆಯ ಸಂಪಾದಕ ಸರ್ ನಮಸ್ಕಾರ, ಎಂದಿನಂತೆ ವಿದ್ಯಾರ್ಥಿಮಿತ್ರ “ಅವಲೋಕನ” ಸ್ಥಿರ ಶೀರ್ಷಿಕೆಯ ಅಂಕಣ ಈದಿನ ಪ್ರಕಟವಾಗಿರುವುದು ಭಲೇ ಸಂತಸದ ವಿಚಾರ. ಈಗ ತಾನೇ 3ನೇ ಕಂತು ಓದಿದ ನನಗೆ ಬಹಳಷ್ಟು ವಿಚಾರ ಮನದಟ್ಟಾಯಿತು. ಯಾವುದೇ ಪುಸ್ತಕವನ್ನು ಅಥವ ಯಾರದ್ದೇ ಕೃತಿಯನ್ನು ನನ್ನಂಥ ಹೊಸ ಲೇಖಕ ಅಥವ ಸಾಹಿತ್ಯಾಸಕ್ತ ಯುವಕ ಅಥವ ಜರ್ನಲಿಸಂ ವಿದ್ಯಾರ್ಥಿ ಅಥವ ಪತ್ರಕರ್ತ, ಯಾರೇಆಗಿರಲಿ ಹೇಗೆ/ಹೇಗೆಲ್ಲಾ ಅಥವ ಹೀಗೂ/ಹೀಗೆಲ್ಲ ವಿಮರ್ಶೆ ಮಾಡಬಹುದು ಎಂಬುದರ ಬಗ್ಗೆ ಒಂದು ಸ್ಪಷ್ಟ ಚಿತ್ರಣ ದೊರಕಿತು. ಕನ್ನಡದ ಖ್ಯಾತ ವಿಮರ್ಶಕ ನಟರಾಜ ಕವಿಯವರಿಗೂ ಜನಮನ ಪ್ರಕಾಶಕರಿಗೂ ಧನ್ಯವಾದ. ರವೀಂದು ಕುಲಕರ್ಣಿ, ಸಾಹಿತಿ-ಪತ್ರಕರ್ತ, ಧಾರವಾಡ-ಹುಬ್ಬಳ್ಳಿ.
ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾದ ಅವಲೋಕನ ಪುಸ್ತಕ ವಿಮರ್ಶೆಯ 3ನೇ ಭಾಗದ ಈ ಕೆಳಕಂಡ ಐವರು ವಿವಿಧ ಲೇಖಕರ 5 ಪುಸ್ತಕಗಳ ವಿಮರ್ಶೆಯು ಬಹಳ ವಿಭಿನ್ನ ವಿಶೇಷ ವಿಶಿಷ್ಟ ಸಂಕ್ಷಿಪ್ತ ಸುಂದರ ಹಾಗು ಸರಳಕನ್ನಡ ಪದಗಳಲ್ಲಿ
ಸೊಗಸಾಗಿ ಬರೆದಿರುವ ನಾಡಿನ ಖ್ಯಾತ ಕವಿಗಳಾದ ನಟರಾಜ ಬಿ.ಎನ್.ರವರಿಗೆ ಮನಃಪೂರ್ವಕ ನಮಸ್ಕಾರಗಳು, ಪತ್ರಿಕೆಯವರಿಗೂ ಧನ್ಯವಾದಗಳು.
(1)ನಲವಡಿ ಶ್ರೀಕಂಠಶಾಸ್ತ್ರಿ : ಮೃತ್ಯುಂಜಯ ಹೊರಕೇರಿ
(2)ಒಲುಮೆಯ ಕುಸುಮ : ಎಸ್.ಬಿ.ಚಂದ್ರಕಾಂತ್
(3)ತಾಯಿಯ ಪ್ರೇಮ : ಕೆ.ಆರ್.ಎಸ್.ಪ್ರಸನ್ನ
(4)ಸತ್ಯನ ಸಂಗತಿ : ಬಾಪುಗೌಡ ಪಾಟೀಲ
(5)ಪ್ರೀತಿ : ರಾಜೇಶ್ವರಿ ಹೆಬ್ಬಾರ್
*ಶ್ರೀನಿವಾಸಗೌಡ, ಚಿಕ್ಕಬಳ್ಳಾಪುರ.