ಚಂದನವನ ಚರಿತ್ರೆಯಲ್ಲಿ ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕ ಅಭಿಮಾನಿಗಳಿಂದ ಮಾತ್ರವಲ್ಲದೇ ಚಿತ್ರೋದ್ಯಮಿಗಳು ಹಾಗೂ ಮಾಧ್ಯಮದವರಿಂದಲು “ಚಾಕ್ಲೆಟ್ ಬಾಯ್” ಎಂದು ನಿಕ್ ನೇಮ್ ಪಡೆದ ಕನ್ನಡದ ಪ್ರಪ್ರಥಮ ಮುದ್ದುನಟ ರಾಮಕೃಷ್ಣ. ಕನ್ನಡ ಚಿತ್ರರಂಗಕ್ಕೆ ನವನಟನಾಗಿ ಪಾದಾರ್ಪಣೆಗೈದ ಕೂಡಲೇ ಅದೃಷ್ಟವಂತನಾದ ನಟನೂ ಹೌದೆಂಬ ಬಿರುದು ಸಂಪಾದಿಸಿದ ನಟನ ಕುರಿತಂತೆ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಇಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಶರತ್ ಲತಾ ಚಂದನವನದ ಕಲ್ಪನಾಳಾಗಿ ಮಿನುಗಿದ್ದು ಹೇಗೆ? ಹುಟ್ಟು-ಬದುಕು-ಸಾವು ಎಲ್ಲವೂ ದುರಂತಮಯ!
ನಟ ರಾಮಕೃಷ್ಣ, 1973ರಲ್ಲಿ ಬಿಡುಗಡೆಯಾದ “ಮೂರೂವರೆ ವಜ್ರಗಳು” ಚಿತ್ರದ ಮೂಲಕ ಎಂಟ್ರಿ ಕೊಟ್ಟರು. ಇದಾದ ಕೆಲವೇ ಕಾಲದಲ್ಲಿ 1977ರಲ್ಲಿ ತೆರೆಕಂಡ ಅಧ್ಧೂರಿ ಪೌರಾಣಿಕ ಫಿಲಂ ಡಾ.ರಾಜಕುಮಾರ್, ಬಿ.ಸರೋಜದೇವಿ, ಕಾಂಚನ ಮುಂತಾದ ಮೆಘಾಸ್ಟಾರ್ಸ್ ತಾರಾಗಣದ ಬ್ಲಾಕ್ ಬಸ್ಟರ್ “ಬಭ್ರುವಾಹನ” ಸಿನಿಮಾದಲ್ಲಿ ನಟಿಸುವಾಗ ಎಲ್ಲಾ ನಟನಟಿಯರಿಗಿಂತ ಕಿರಿಯನಟ ಈತ ಎಂಬುದು ದಾಖಲೆ. ಸಿಲ್ವರ್ ಜುಬ್ಲಿ ಆಚರಿಸಿದ ಈ ಚಿತ್ರದಲ್ಲಿ ಶ್ರೀಕೃಷ್ಣನ ಪಾತ್ರವನ್ನು ಉತ್ತಮವಾಗಿ ಅಭಿನಯಿಸಿದ 22 ವರ್ಷ ವಯಸ್ಸಿನ ಹುಡುಗ ನಿಧಾನವಾಗಿ ಯಶಸ್ಸಿನ ಓಟ ಮುಂದುವರೆಸಿ ಅದೃಷ್ಟವಂತನಾದ!

ಬಭ್ರುವಾಹನ ಚಿತ್ರದ ಅದೊಂದು ಘಟನೆ ಮರೆಯಲಾರದ್ದು…
ಅರ್ಜುನನಾಗಿ ಅಭಿನಯಿಸಿದ ಮೇರುನಟ ಡಾ.ರಾಜ್, ಶ್ರೀಕೃಷ್ಣನ ಪಾದಮುಟ್ಟಿ ಆಶೀರ್ವಾದ ಪಡೆಯುವ ಚಿತ್ರೀಕರಣ ವೇಳೆ ರಾಜಕುಮಾರ್ ತಮ್ಮ ಎರಡೂ ಕೈಗಳಿಂದ ಕೃಷ್ಣನ ಪಾದವನ್ನು ಮುಟ್ಟಿ ನಮಸ್ಕರಿಸುತ್ತಾರೆ. ಆಗ ವಿಚಲಿತಗೊಂಡ ಪಡ್ಡೆಹೈದ ರಾಮಕೃಷ್ಣ ಬಹಳ ಮುಜುಗರಕ್ಕೆ ಒಳಗಾದನು. ಸಂಕೋಚದಿಂದ ಶೂಟಿಂಗ್ ಮುಗಿಸಿದ ಕೂಡಲೇ ತನ್ನ ಕಣ್ಣಲ್ಲಿ ನೀರು ಹಾಕುತ್ತ “ದಯವಿಟ್ಟು ಕ್ಷಮಿಸಿ ಸರ್, ನಾನು ಈ ಪಾತ್ರವನ್ನು ಮಾಡಬಾರದಿತ್ತು” ಎಂದು ಗೋಳಾಡಿದಾಗ ಡಾ.ರಾಜ್ ರವರೇ ಖುದ್ದಾಗಿ ಹುಡುಗನನ್ನು ಸಂತೈಸಿ ಸಮಾಧಾನ ಪಡಿಸಿ ಮನಸಾರೆ ಆಶೀರ್ವದಿಸಿ ಪ್ರೋತ್ಸಾಹಿಸುತ್ತಾರೆ!
ಇದನ್ನೂ ಓದಿ: ಡಾ.ರಾಜ್ ಕುಮಾರ್… ಸಾಧನೆ, ದಾಖಲೆಗಳ ಧ್ರುವತಾರೆ… ನಾವು ಅರಿಯದ ಅದೆಷ್ಟು ವಿಷಯಗಳಿವೆ ಗೊತ್ತಾ?
ಪುಟ್ಟಣ್ಣಕಣಗಾಲ್ ಗರಡಿಯಲ್ಲಿ ಪಳಗುವ ಕಾಲದಲ್ಲಿ ’ರಂಗನಾಯಕಿ’ ಚಿತ್ರದಲ್ಲಿ ತಾಯಿ ಪಾತ್ರ ನಿರ್ವಹಿಸಿದ್ದ ಮೇರುನಟಿ ಆರತಿಯವರ ಮಗನ ಪಾತ್ರ ಅಭಿನಯಿಸುವಾಗ ಇದರಲ್ಲಿನ “ಈಡಿಪಸ್” ನಾಟಕದ ರಿಹರ್ಸಲ್ ದೃಶ್ಯದ ಸನ್ನಿವೇಶದಲ್ಲಿ ಕಾಮಾಂಧನಾದ ಸ್ವಂತ ಮಗನೇ ತಾಯಿ(ರಂಗನಾಯಕಿ)ಯನ್ನು ಪ್ರೇ(ಕಾ)ಮಿಸಲು ಹೊರಟಾಗ, ಆಕೆ(ಆರತಿ) ಯಿಂದ ಕಪಾಳಕ್ಕೆ ಹೊಡೆಸಿಕೊಂಡು ವಿವೇಕ ಹೇಳಿಸಿಕೊಳ್ಳುವ ಮಗನ ಪಾತ್ರಾಭಿನಯ ಮನೋಜ್ಞವಾಗಿತ್ತು!

ಮಾನಸಸರೋವರ, ತಾಯಿಯನುಡಿ, ಬೆಳ್ಳಿಮೋಡಗಳು, ಅಮೃತಘಳಿಗೆ ಮುಂತಾದ ಚಿತ್ರಗಳಲ್ಲಿ ದೊರೆತ ಪಾತ್ರಗಳೆಲ್ಲ ಉತ್ತಮವಾಗೇಇತ್ತು. ಬೇರಾವುದೇ ಜನಪ್ರಿಯ ನಾಯಕನಟನಿಗೂ ಕಡಿಮೆಯಿಲ್ಲದಂತೆ ತಮ್ಮ ಪಾತ್ರಗಳನ್ನು ಅಮೋಘವಾಗಿ ನಿರ್ವಹಿಸಿ ಎಲ್ಲರಿಂದ ಮೆಚ್ಚುಗೆ ಪಡೆದರು.
ಇದನ್ನೂ ಓದಿ: ಸಪ್ತಸ್ವರ ಸಾಮ್ರಾಜ್ಞಿ ಆಶಾಭೋಸ್ಲೆ ಇನ್ನು ನೆನಪು ಮಾತ್ರ… ಹಾಡಿನಾಚೆಗಿನ ಬದುಕು ಹೇಗಿತ್ತು?
“ಪಡುವಾರಹಳ್ಳಿ ಪಾಂಡವರು”ಚಿತ್ರವು ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲೂ ರಿಮೇಕ್ ಆಯಿತು. ಹಿಂದಿ ಅವತರಣಿಕೆಯಲ್ಲಿ ಇವರ ಪಾತ್ರವನ್ನು ಇವರಿಂದಲೆ ಮಾಡಿಸಿದಾಗ ನಿರ್ಮಾಪಕಿ ಹೇಮಮಾಲಿನಿಯಿಂದ ಸೈ ಎನಿಸಿಕೊಂಡ ಕನ್ನಡಪುತ್ರ. ಇದಾದ ನಂತರ “ಬೆಂಕಿಯಲ್ಲಿಅರಳಿದಹೂವು” ಚಿತ್ರದಲ್ಲಿ ಮಿಮಿಕ್ರಿಯ ವಿಕಟಕವಿಯಾಗಿ ತಮಿಳಿನ ಕೆ.ಬಾಲಚಂದರ್‌ರ ಅವಳೊರುತೊಡರ್‌ಕದೈ ಚಿತ್ರದಲ್ಲಿ ಕಮಲಹಾಸನ್ ನಿರ್ವಹಿಸಿದ್ದ ಪಾತ್ರವನ್ನು ನವಯುವಕ ಚೆಲುವ ರಾಮಕೃಷ್ಣ ನಿರ್ವಹಿಸಿದಾಗ ಕಮಲಹಾಸನ್ ಶಹಬ್ಬಾಶ್ ಗಿರಿ ನೀಡಿದ್ದು ಇತಿಹಾಸ!

“ಪಂಚಮವೇದ” ಚಿತ್ರದ ಇವರ ಅಭಿನಯ ಕಂಡು ಮನಸಾರೆ ಮೆಚ್ಚಿದ ಖ್ಯಾತ ನಟ ರಮೇಶ್ ಅರವಿಂದ್ ಹೃದಯಪೂರ್ವಕವಾಗಿ ಅಭಿನಂದಿಸಿದರು! ಹಲವಾರು ಚಿತ್ರಗಳಲ್ಲಿ ನೀಡಿದ ಅತ್ಯುತ್ತಮ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ರಾಜ್ಯ ಪ್ರಶಸ್ತಿ ಫಿಲಂಫ಼ೇರ್ ಪ್ರಶಸ್ತಿ ಕನ್ನಡ ಚಿತ್ರರಸಿಕರ ಸಂಘದ ಪ್ರಶಸ್ತಿ ಗಳಿಸಿದರು. ರಾಜ್ಯದಾದ್ಯಂತ ಅಭಿಮಾನಿ ಸಂಘಸಂಸ್ಥೆಗಳಿಂದ ಅನೇಕ ಪ್ರಶಸ್ತಿ ಸನ್ಮಾನ ಬಹುಮಾನ ಪಡೆದಿದ್ದಾರೆ. ಇವರ ಕಟ್ಟಕಡೆಯ ಸಿನಿಮಾ “ಸಂಕೀರ್ತನ”(2026)
ಇದನ್ನೂ ಓದಿ: ರಾಮಗೋಪಾಲ್ ಚಂದನವನದಲ್ಲಿ ಮಿಂಚಿಯೂ ಮಿನುಗದ ನಟ… ಕೈಕೊಟ್ಟಿತಾ ಅದೃಷ್ಟ!
ಅಂದಾಜು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ತನುಮನ ಗೆದ್ದಿರುವ ಚುರುಕುನಟ ಚತುರಪೋರ ಹಾಸ್ಯಪ್ರಜ್ಞೆಯ ಅಚ್ಚುಮೆಚ್ಚಿನ ಕಲಾವಿದ. ಸದಾ ಲವಲವಿಕೆಯುಳ್ಳ ಇವರು ಹಲವು ಟಿ.ವಿ.ಧಾರಾವಾಹಿಯಲ್ಲೂ ನಟಿಸಿ ಜನಮನ ಸೂರೆಗೊಂಡರು. ಈಗಲೂಸಹ ಬೆಳ್ಳಿತೆರೆ ಕಿರುತೆರೆ ಎಲ್ಲೇ ಆಗಲಿ ಯಾವುದೇ ಪಾತ್ರ ನೀಡಿದರು ಶ್ರದ್ಧೆ ಪ್ರಾಮಾಣಿಕತೆ ಹಾಗೂ ಆಸಕ್ತಿಯಿಂದ ಅಭಿನಯಿಸುವ ಉತ್ತಮ ಕಲಾವಿದ.
ಇದನ್ನೂ ಓದಿ: ಎಡಕಲ್ಲು ಗುಡ್ಡದ ಮೇಲಿನ ನಂಜುಂಡನಾಗಿ ಮಿಂಚಿದ ನಟ ಚಂದ್ರಶೇಖರ್…. ಈಗ ನೆನಪು!
1954ನೇ ಇಸವಿಯ ಒಂದಿನ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ನೀರ್ನಳ್ಳಿ ರಾಮಸ್ವಾಮಿ ಉರುಫ್ ರಾಮಕೃಷ್ಣ ತನ್ನ ಕಾಲೇಜ್ ಶಿಕ್ಷಣ ಮೊಟಕುಗೊಳಿಸಿ ಅಭಿನಯ ಕಾಲೇಜಿಗೆ ಸೇರಲು ಬೆಂಗಳೂರು ಚೆನ್ನೈ ಓಡಾಡಿ ಯಶಸ್ವಿಯಾದರು.ಸತತ 50 ವರ್ಷ ಕಾಲ ದುಡಿದ ನಂತರ ಪ್ರಸ್ತುತ ಬೆಂಗಳೂರಲ್ಲಿ ತಮ್ಮ ಕುಟುಂಬ ಸದಸ್ಯರೊಡನೆ ಸುಖ ಸಂತೋಷದ ಜೀವನ ನಡೆಸುತ್ತಿದ್ದಾರೆ.

ರಾಮಕೃಷ್ಣ ನಟಿಸಿದ ಪ್ರಮುಖ ಸಿನಿಮಾಗಳು..
ನಿನಗಾಗಿ ನಾನು, ಹೊಸಿಲು ಮೆಟ್ಟಿದ ಹೆಣ್ಣು, ಭಾಗ್ಯವಂತರು, ಪರಸಂಗದ ಗೆಂಡೆ ತಿಮ್ಮ, ದೇವರ ದುಡ್ಡು, ಘಟಶ್ರಾದ್ಧ, ಋಷ್ಯಶೃಂಗ, ಮಧುಚಂದ್ರ, ರಾಮಪರಶುರಾಮ, ಸುಳಿ, ಹೆಣ್ಣಿನಕೂಗು, ನನ್ನಪ್ರಾಯಶ್ಚಿತ್ತ, ಕಮಲ, ಸದಾನಂದ, ಹುಲಿ ಬಂತು ಹುಲಿ, ಮಾನಿನಿ, ನನ್ನರೋಷ ನೂರುವರ್ಷ, ಗಣೇಶನಮಹಿಮೆ, ಕಾಳಿಂಗ, ಸುಬ್ಬಿಸುಬ್ಬಕ್ಕಸುವ್ವಲಾಲಿ, ಜಗ್ಗು, ಯಾವ ಹೂವು ಯಾರ ಮುಡಿಗೊ, ಚೆಲ್ಲಿದರಕ್ತ, ಬಾಡದಹೂ, ಹೃದಯಪಲ್ಲವಿ, ಕಂಕಣಭಾಗ್ಯ, ಒಂದೇಗುರಿ, ಎಡೆಯೂರುಸಿದ್ಧಲಿಂಗೇಶ್ವರ, ಪ್ರೇಮಮತ್ಸರ, ಭಕ್ತಜ್ಞಾನದೇವ, ಶಿವಕನ್ಯೆ, ಸ್ವರ್ಗದಲ್ಲಿಮದುವೆ
ಇದನ್ನೂ ಓದಿ: ಗಾನಗಾಂಧರ್ವ ಎಸ್ ಪಿ ಬಾಲಸುಬ್ರಮಣ್ಯಂರವರ ನೆನಪು ಸದಾ ಹಸಿರು
ನಗಬೇಕಮ್ಮನಗಬೇಕು, ಮರ್ಯಾದೆಮಹಲು, ಋಣಮುಕ್ತಳು, ಉಷ, ಬಡ್ಡಿಬಂಗಾರಮ್ಮ, ಮುಗಿಲಮಲ್ಲಿಗೆ, ದೇವತೆ, ಒಲವುಮೂಡಿದಾಗ, ಬೆಕ್ಕಿನಕಣ್ಣು, ನನ್ನವರು, ಅಪರೂಪದಕಥೆ, ಒಲವಿನಉಡುಗೊರೆ, ಶ್ರೀಚಾಮುಂಡೇಶ್ವರಿಮಹಿಮೆ, ಮುಖವಾಡ, ಬಂಧಮುಕ್ತ, ಸಂಗ್ರಾಮ, ಟೈಗರ್, ಮುತ್ತೈದೆ, ಪ್ರಾಣಸ್ನೇಹಿತ, ಭೂಮಿತಾಯಾಣೆ, ಧರ್ಮಾತ್ಮ, ಸಾಹಸವೀರ, ಯುದ್ಧಕಾಂಡ, ಪ್ರೇಮತರಂಗ, ಮುತ್ತಿನಂಥಮನುಷ್ಯ, ಗುಡುಗುಸಿಡಿಲು, ಮಾತೃದೇವೋಭವ, ಅಗ್ನಿದಿವ್ಯ, ಲೇಡಿಸ್ ಹಾಸ್ಟಲ್, ತ್ರಿನೇತ್ರ, ಹಳ್ಳಿಯಸುರಾಸುರರು, ಉತ್ಕರ್ಷ, ಶ್ರೀಶಬರಿಮಲೆಸ್ವಾಮಿಅಯ್ಯಪ್ಪ, ಆಟಬೊಂಬಾಟ, ಪ್ರೇಮಪರೀಕ್ಷೆ, ನಾಯಕ, ಶಿವಯೋಗಿಅಕ್ಕಮಹಾದೇವಿ, ಹೃದಯಸಾಕ್ಷಿ, ಇದುವೆಜೀವನ, ಗುರುಬ್ರಹ್ಮ, ಸಂಗ್ಯಾಬಾಳ್ಳಾ.

ಮಲ್ಲಿಗೆಹೂವೇ, ಗಡಿಬಿಡಿಗಂಡ, ವಜ್ರಕೋಟೆ, ಹಬ್ಬ,ಸೂರ್ಯೋದಯ, ಸ್ನೇಹ, ಪ್ರೇಮೋತ್ಸವ, ನಾನೇನುಮಾಡ್ಲಿಲ್ಲ, ನನ್ಹೆಂಡ್ತಿ ಚೆನ್ನಾಗಿದ್ದಾಳೆ, ನಿನಗಾಗಿ, ಡ್ಯಾಡಿನಂ.1, ಹೊಸಲವ್ ಸ್ಟೋರಿ, ಗೋಲಿಬಾರ್, ಯಮಕಿಂಕರ, ಲಾಕಪ್ ಡೆತ್, ಹಾಲುಂಡತವರು, ಯಾರಿಗೂಹೇಳ್ಬೇಡಿ, ಕಿಲ್ಲರ್ಡೈರಿ, ಮಿ.ಮಹೇಶ್ಕುಮಾರ್, ಆಘಾತ, ಗಣೇಶನಗಲಾಟೆ, ಲೇಡಿಪೊಲೀಸ್, ದಾದಾ, ಧಣಿ, ಧೀರ್ಘಸುಮಂಗಲಿ, ಮನಮಿಡಿಯಿತು, ಪುಟ್ಮಲ್ಲಿ, ಸಿಂಹಾದ್ರಿ, ಅಮೃತವರ್ಷಿಣಿ
ಇದನ್ನೂ ಓದಿ: ಮೇರು ನಟ, ಸಿರಿಕಂಠದ ಕರ್ನಾಟಕ ರತ್ನ ‘ಡಾ ರಾಜ್ ಕುಮಾರ್’ ಮತ್ತೆ, ಮತ್ತೆ ನೆನಪಾಗುತ್ತಾರೆ..
ರಾಜ, ನಾದ ಸುರಭಿ,ಮಾತಿನಮಲ್ಲ, ನಿಶ್ಯಬ್ದ,ಸಿಪಾಯಿ, ರಜನಿ, ಜಯಹೇ, ಚಿರಾಯು, ಜೈಲಲಿತಾ, ಕಲರವ, ಪಿಯುಸಿ, ಇಜ್ಜೋಡು, ಟುವ್ವಿಟುವ್ವಿ ಟುವ್ವಿ, ಮಳೆಬಿಲ್ಲೆ, ಕಲಾಕಾರ್, ಮೆಲೋಡಿ, ಈಸಂಭಾಷಣೆ, ಸೂರ್ಯಕಾಂತಿ, ಜೊತೆಯಾಗಿ ಹಿತವಾಗಿ, ಗಂಗೆಬಾರೆ ತುಂಗೆಬಾರೆ, ಆತ್ಮೀಯ, ಹುಟ್ದಿದರೆ ಕನ್ನಡನಾಡಲ್ಲಿ ,ಸ್ತ್ರೀಶಕ್ತಿ, ಎದೆಗಾರಿಕೆ, ಪುನೀತ್, ಪ್ರಸಾದ್, ಅಂಬರ, 5ಈಡಿಯಟ್ಸ್, ಚಿರಾಯು, ಕುಳ್ಳರಲೋಕ, ಜೂಟಾಟ, ಕೂಲ್, ಹೊಸಬದುಕು, ಅಹಂಪ್ರೇಮಾಸ್ಮಿ, ಬಚ್ಚನ್, ಜನಗಣಮನ, ಮಧುರಸ್ವಪ್ನ, ಕುರುಕ್ಷೇತ್ರ, ಮುಂತಾದವು..










ಚಾಕ್ಲೇಟ್ ಬಾಯ್ ರಾಮಕೃಷ್ಣ ಕುರಿತ ಸಿನಿಮ ಲೇಖನ ಸೂಪರ್….. ಧನ್ಯವಾದ ನಟರಾಜ್ ಸರ್, -ಸತ್ಯನಾರಾಯಣ, ಮೈಸೂರು.
ಅಂದಿನ ಕಾಲದ ಉದಯೋನ್ಮುಖ ಕಲಾವಿದ ರಾಮಕೃಷ್ಣ, ನಿಜವಾಗಿಯೂ ಚಾಕಲೇಟ್ ಬಾಯ್ ಎಂಬುದರಲ್ಲಿ ಸಂಶಯವಿಲ್ಲ, ನಮಸ್ಕಾರ. ಮಂಜುನಾಥಗೌಡ, ಮಳವಳ್ಳಿ, ಮಂಡ್ಯ ಜಿಲ್ಲೆ.
ಅಂದಿನ ಕಾಲದ ಉದಯೋನ್ಮುಖ ಕಲಾವಿದ ರಾಮಕೃಷ್ಣ, ನಿಜವಾಗಿಯೂ ಚಾಕಲೇಟ್ ಬಾಯ್ ಎಂಬುದರಲ್ಲಿ ಸಂಶಯವಿಲ್ಲ, ನಮಸ್ಕಾರ. ಥ್ಯಾಂಕ್ಸ್ ಸರ್, ಮ. ಮಂಜುನಾಥಗೌಡ, ಮಳವಳ್ಳಿ, ಮಂಡ್ಯ ಜಿಲ್ಲೆ.
ವೆರಿ ಗುಡ್ ಆರ್ಟಿಕಲ್ ಎಬೌಟ್ chocolate boy handsome hero ರಾಮಕೃಷ್ಣ. Thanks Natraj sir 🙏 ❤ 👏 Raghunath B.N., Mangalore
Fantastic article on chocolate boy the then superb hero Ramakrishna, thanks a llott kumarakavi B.N.Nataraj sir.
Your fans…. VARADARAJ and FRIENDS, BAGALAKOTE.
ಎವರ್ ಗ್ರೀನ್ ಮುದ್ದುನಟ ರಾಮಕೃಷ್ಣರವರ ಲೇಖನ ಬೊಂಬಾಟ್ ಸರ್. ನಮಸ್ಕಾರ. ಶ್ರೀವಾಣಿ, ಬನಶಂಕರಿ 2nd stage, ಬೆಂಗಳೂರು